ಇಂಡೋನೇಷ್ಯಾದ ಕಡಲ ತೀರದಲ್ಲಿ ಹವಾಮಾನ ವೈಪಿರೀತ್ಯ ಹಾಗು ಹಡಗಿನಲ್ಲಿ ಇಂಧನ ಖಾಲಿಯಾದ ಪರಿಣಾಮ ಸಮುದ್ರದಲ್ಲಿ ಹಡಗು ಪಲ್ಟಿಯಾಗಿದ್ದು 26 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 43 ಮಂದಿಯನ್ನು ಹೊತ್ತೊಯುತ್ತಿದ್ದ ಹಡಗು ಸುಲವೇಸಿ ಹಾಗು ಬೊರ್ನಿಯೊ ದ್ವೀಪಗಳನ್ನು ಪ್ರತ್ಯೇಕಿಸುವ ಮಕಸ್ಸಾರ್ ಜಲಸಂಧಿಯ ಬಳಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಲೇ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಎರಡು ಟಗ್ ಬೋಟ್ಗಳ ಮೂಲಕ 17 ಮಂದಿಯನ್ನು ರಕ್ಷಿಸಿದ್ದಾರೆ. ಕಾಣೆಯಾಗಿರುವ 26 ಮಂದಿಗೆ ಶೋಧ ಕಾರ್ಯಾ ಮುಂದುವರೆದಿದೆ.