ಮುಂದಿನ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಈಗಿನಿಂದಲೇ ತಯಾರಿ ನಡೆಸಿಕೊಂಡಿವೆ. ಹೇಗಾದರೂ ಮಾಡಿ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಸರ್ಕಾರವನ್ನು ಕೆಡವಲೇಬೇಕು ಎಂದು ಕಾಯುತ್ತಿವೆ. ಹೀಗಿರುವಾಗಲೇ ಸಿಎಂ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಿದೆ.
ಹೌದು, ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಳಿಯನ ಮೇಲಿನ ನ್ಯಾಯಾಂಗ ಬಂಧನದಿಂದ ಮುಜುಗರಕ್ಕೀಡಾದ್ರೂ ಭರ್ಜರಿ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಪಿಣರಾಯಿ ಅಬ್ಬರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬ್ರೇಕ್ ಹಾಕಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಹೋರಾಟಕ್ಕೆ ವಿಪಕ್ಷಗಳು ಮುಂದಾಗಿವೆ. ಹೀಗಾದರೆ ಈ ಬೆಳವಣಿಗೆ ಎಲ್ಡಿಎಫ್ಗೆ ಹಿನ್ನಡೆ ಉಂಟುಮಾಡೋ ಸಾಧ್ಯತೆ ಇದೆ.
ಎಲ್ಡಿಎಫ್ ನೇತೃತ್ವ ವಹಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ, ಅವರ ಅಳಿಯ ನ್ಯಾಯಾಂಗ ಬಂಧನಕ್ಕೆ ಹೋಗಿರೋದು ಮುಜುಗರವನ್ನುಂಟು ಮಾಡಿತ್ತು. ಆದ್ರೆ ಇದೀಗ ಪಿಣರಾಯಿಯಿಂದ್ಲೇ ಪಕ್ಷಕ್ಕೆ ಮುಜುಗರವಾಗುವಂತಹ ಪರಿಸ್ಥಿತಿ ಕೇರಳದಲ್ಲಿ ನಿರ್ಮಾಣವಾಗಿದೆ.

ಮತ್ತೆ ಸಿಎಂ ಆಗೋ ಕನಸು ಕಂಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಈಗಿನಿಂದಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ರೆ ಅವರ ಅಬ್ಬರದ ಪ್ರಚಾರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬ್ರೇಕ್ ಹಾಕಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಪಿಣರಾಯಿ ಹೆಸರು ತಳುಕುಹಾಕಿಕೊಂಡಿದೆ. ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆಯಲ್ಲಿ ಆರೋಪಿ ಸ್ವಪ್ನಾ ಸುರೇಶ್ ಬಿಚ್ಚಿಟ್ಟ ವಿಚಾರಗಳು ಕೇರಳ ಸರ್ಕಾರವನ್ನು ಶೇಕ್ ಮಾಡಿದ್ದು, ಪಿಣರಾಯಿಗೆ ಬಿಗ್ ಶಾಕ್ ಕೊಟ್ಟಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಸಿಎಂ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ ಶಿವಶಂಕರ್ ರಾಜಕಾರಣಿಗಳು ಹಾಗೂ ಸ್ಮಗ್ಲರ್ಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ಮಗ್ಲಿಂಗ್ನಲ್ಲಿ ಸಿಎಂ ಪಿಣರಾಯಿ ವಿಜಯನ್ಗೆ ಕಿಕ್ ಬ್ಯಾಕ್ ನೀಡಲಾಗಿದೆ. ಸರ್ಕಾರದ ಮೂವರು ಸಚಿವರು ಹಾಗೂ ಸ್ಪೀಕರ್ಗೆ ಕೂಡ ಗೋಲ್ಡ್ ಸ್ಮಗ್ಲಿಂಗ್ ಪಾಲು ಕೊಡಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳಿಗೆ ಸ್ವಪ್ನ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಇದೇ ಹೇಳಿಕೆಯನ್ನು ಒಳಗೊಂಡ ವರದಿಯನ್ನು ಅಧಿಕಾರಿಗಳು ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಇದು ಸಿಎಂ ಪಿಣರಾಯಿ ವಿಜಯನ್ಗೆ ಸಂಕಷ್ಟ ತಂದೊಡ್ಡಿದೆ.
ಹೈಕೋರ್ಟ್ಗೆ ಸಲ್ಲಿಕೆಯಾಗಿರುವ ದೋಶಾರೋಪಣ ಪಟ್ಟಿಯಲ್ಲಿ ಪಿಣರಾಯಿ ವಿಜಯನ್ ಹೆಸರು ಉಲ್ಲೇಖವಾಗಿರುವುದನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮೈತ್ರಿಕೂಟದ ಯುಡಿಎಫ್ ಹಾಗೂ ಬಿಜೆಪಿ ಮುಂದಾಗಿವೆ. ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಅಂತ ಬಿಜೆಪಿ ಹಾಗೂ ಕಾಂಗ್ರೆಸ್ ಆಗ್ರಹಿಸಿವೆ. ಇದೆಲ್ಲಾ ರಾಜಕೀಯ ಪಿತೂರಿ. ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಾನಿಲ್ಲ ಅಂತ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಅತ್ತ ಅಳಿಯನಿಂದ ಮುಜುಗರವಾಗ್ತಿದೆ. ಇತ್ತ ತನ್ನ ಮೇಲೆ ಗೋಲ್ಡ್ ಸ್ಮಗ್ಲಿಂಗ್ ಆರೋಪ ಬೇರೆ ಬಂದಿದೆ. ಪಕ್ಷ ಹಾಗೂ ವೈಯಕ್ತಿಕವಾಗಿ ದೊಡ್ಡ ಡ್ಯಾಮೇಜ್ ಆಗ್ತಿದೆ. ಮುಂದೇನು? ಚುನಾವಣೆ ಎದುರಿಸೋದು ಹೇಗೆ ಅನ್ನೋ ಯೋಚನೆ ಪಿಣರಾಜಿ ವಿಜಯನ್ ಅವರನ್ನ ಬಿಟ್ಟೂ ಬಿಡದೆ ಕಾಡಲಾರಂಭಿಸಿದೆ.