ತಮ್ಮ ಮೇಲೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮಾಡಿ ಹಾಸನದಲ್ಲಿ ದೂರು ದಾಖಲಿಸಿದ್ದ ಸಂತ್ರಸ್ತೆ ಇದೀಗ ಬೆಂಗಳೂರಿನ ಎಸ್.ಐ.ಟಿ ಕಛೇರಿಗೆ ಆಗಮಿಸಿದ್ದಾರೆ. ಎಸ್.ಐ.ಟಿ ಟೀಮ್ ಸಂತ್ರಸ್ಥೆಯನ್ನ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ಈಗಾಗಲೇ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿರುವ ಸಂತ್ರಸ್ತೆ, ಇದೀಗ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ದಾಖಲು ಮಾಡಬೇಕಿದೆ. ಇದನ್ನು 164 ಹೇಳಿಕೆ ಎನ್ನಲಾಗುತ್ತದೆ.
ಸಂತ್ರಸ್ತೆ ಈ ಹೇಳಿಕೆ ನೀಡುವಾಗ ಖುದ್ದು ತನುಖಾದಿಕಾರಿಯೂ ಕೂಡ ಸ್ಥಳದಲ್ಲಿ ಇರುವಂತಿಲ್ಲ. ಕೇವಲ ನ್ಯಾಯಾಧೀಶರ ಸಮ್ಮುಖದಲ್ಲಿ ತಮ್ಮ ಹೇಳಿಕೆಯನ್ನು ದಾಖಲು ಮಾಡ್ತಾರೆ. ಒಮ್ಮೆ ಈ ಹೇಳಿಕೆ ನೀಡಿದ ನಂತರ ಮತ್ತೆ ಈ ಹೇಳಿಕೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಹೀಗಾಗಿ ಸಂತ್ರಸ್ಥೆಯ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.