ಹುಬ್ಬಳ್ಳಿಯ (Hubbali) ವೀರಾಪುರ ಓಣಿಯಲ್ಲಿಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ. ರಾಜ್ಯದಲ್ಲಿ ಕಾನೂನು (Law) ಸುವ್ಯವಸ್ಥೆ ಕಾಪಾಡಲು ಆಗಲ್ಲ ಎಂದರೇ ಜಾಗ ಖಾಲಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ಇಂದು ವೀರಾಪುರ ಓಣಿಯಲ್ಲಿನ ಕೊಲೆಯಾದ ಅಂಜಲಿ (Anjali) ನಿವಾಸಕ್ಕೆ ಅವರು ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಆರೋಪಿಗಳಿಗೆ ಕಾನೂನಿನ ಭಯವು ಇಲ್ಲ ಪೊಲೀಸರ (Police) ಭಯವೂ ಇಲ್ಲದಂತಾಗಿದ್ದು, ಏನು ಮಾಡಿದರೂ ನಡೆಯುತ್ತೆ ಎನ್ನುವ ಭಾವನೆ ಮೂಡಿದೆ. ನೇಹಾ ಪ್ರಕರಣ (Neha Case) ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah )ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಏನೂ ಮಾಡದೆ ಇರುವ ಪರಿಣಾಮ ಈ ಹತ್ಯೆ ನಡೆದಿದೆ ಎಂದು ಆರೋಪಿಸಿದರು.ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ನೀವು ರಾಜಕಾರಣವನ್ನಾದರೂ(Politician) ಅನ್ನಿ ಮಹಾರಾಜಕಾರಣವನ್ನಾದ್ರೂ(A Great Politician) ಅನ್ನಿ. ನಿಮ್ಮ ಕೈಯಲ್ಲಿ ಕಾನೂನು ಕಾಪಾಡಲು ಆಗೋಲ್ಲ ಅಂದ್ರೆ ಕೂಡಲೇ ಜಾಗ ಖಾಲಿ ಮಾಡಿ ಎಂದು ಆಗ್ರಹಿಸಿದರು.
ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದೆ....
Read moreDetails






