ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಫೆಬ್ರವರಿ 13 ರಂದು ರಾಜಸ್ಥಾನದ ರೈತರು ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪಾಲ್ಗೊಂಡು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ರಾಹುಲ್ ಗಾಂಧಿ ಅಜ್ಮೀರದ ರೂಪಂಗರ್ ನಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಪಕ್ಷದ ಇನ್ನು ಕೆಲವು ನಾಯಕರು ಕೂಡಾ ಭಾಗಿಯಾಗಿದ್ದರು.
ರಾಜಸ್ಥಾನದ ರೈತರ ಟ್ರ್ಯಾಕ್ಟರ್ ಮೆರವಣಿಯ ಕುರಿತು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ”ರೈತನ ಟ್ರ್ಯಾಕ್ಟರ್ ಸೊಕ್ಕಿನ ಬಿಜೆಪಿ ಸರ್ಕಾರವನ್ನು ಟ್ರ್ಯಾಕ್ ಗೆ ತರುತ್ತದೆ. ಫೆಬ್ರವರಿ 13 ರಂದು ರಾಜಸ್ಥಾನದ ಅಜ್ಮೀರ್ನ ರೂಪಂಗರ್ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನಾ ನಿರತ ರೈತರ ಹೋರಾಟವನ್ನು ಬಲಪಡಿಸಿದ್ದಾರೆಂದು ಎಐಸಿಸಿ ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಟ್ರ್ಯಾಕ್ಟರ್ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಕೃಷಿ ಕಾನೂನುಗಳ ಅನುಷ್ಠಾನವು ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಆದರೆ ಪ್ರಧಾನಿ ಮೋದಿ ಅವರು ಹೆಚ್ಚು ಆಯ್ಕೆಗಳನ್ನು ತೆರೆದಿಡುತ್ತದೆ ಎಂದು ಹೇಳುತ್ತಾರೆ. ಇದು ಆಯ್ಕೆ ತೆರೆದಿಡುವುದಕ್ಕೆ ಸಹಕಾರಿಯಾಗದು ಬದಲಿಗೆ ಹಸಿವು, ನಿರುದ್ಯೋಗ, ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾರೆ. ಮೋದಿ ಸರ್ಕಾರ ರೈತರೊಂದಿಗೆ ಮಾತನಾಡಲು ಸಿದ್ಧ ಎನ್ನುತ್ತಾರೆ, ಆದರೆ ಕಾನೂನೂಗಳನ್ನು ಹಿಂಪಡೆಯುವವರೆಗೂ ಅದು ಸಾಧ್ಯವಾಗದು, ಕೃಷಿ “ಭಾರತ್ ಮಾತಾಕ್ಕೆ” ಸೇರಿದೆ, ಕೈಗಾರಿಕೋದ್ಯಮಿಗಳಿಗೆ ಸೇರಿದಲ್ಲ” ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೂ ಮುಂಚೆ ಗಂಗಾನಗರದಿಂದ ಅಜ್ಮೀರ್ನ ಕಿಶಾನ್ಗರ್ ವಿಮಾನ ನಿಲ್ದಾಣಕ್ಕೆ ಬಂದು ನಂತರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೊತಸ್ರ ಹಾಗು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗೆ ಅಜ್ಮೀರ್ನ ಸುರ್ಸುರಾ ಗ್ರಾಮದಲ್ಲಿರುವ ಜಾನಪದ ಹಿನ್ನಲೆಯುಳ್ಳ ವೀರ್ ತೇಜಜಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.