ರಾಜ್ಯದಲ್ಲಿಂದು ರೂಪಾಂತರಿ ಓಮೈಕ್ರಾನ್ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 12 ಕೇಸ್ ಗಳು ಪತ್ತೆಯಾಗಿದ್ದು, ಇದರಲ್ಲಿ 9 ಸೋಂಕಿತರು ವಿದೇಶಿ ಪ್ರಯಾಣಿಕರಾಗಿದ್ದಾರೆ. ಇವೆರೆಲ್ಲರಿಗೂ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೋನಾ ರೂಪಾಂತರಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಓಮೈಕ್ರಾನ್ ಸ್ಟೋಟಗೊಂಡಿದ್ದು 12 ಹೊಸ ಪ್ರಕರಣಗಳು ವರದಿಯಾಗಿವೆ. ಈ 12 ಸೋಂಕಿತರಲ್ಲಿ 9 ಜನ ವಿದೇಶಗಳಿಂದ ಬಂದವರಾದರೆ, ಉಳಿದ 3 ಮಂದಿಗೆ ವಿದೇಶಿ ಪ್ರಯಾಣಿಕರ ಸಂಪರ್ಕದಿಂದ ಸೋಂಕು ತಗುಲಿದೆ.

ಇನ್ನು ಪತ್ತೆಯಾದ 12 ಪ್ರಕರಣಗಳಲ್ಲಿ 11 ಜನ ಬೆಂಗಳೂರಿನವರಾದ್ರೆ, ಒಬ್ಬರು ಬಾಲಕಿ ಮಾತ್ರ ಮೈಸೂರು ಮೂಲದವರು. ಇದರಲ್ಲಿ 10 ಮಂದಿ ವ್ಯಾಕ್ಸಿನೇಷನ್ ಪಡೆದಿದ್ದಾರೆ. ಇಬ್ಬರು ಬಾಲಕಿಯರಿರೋದರಿಂದ ಅವರಿಗೆ ವ್ಯಾಕ್ಸಿನೇಷನ್ ಆಗಿಲ್ಲ. ಸದ್ಯ 12 ಮಂದಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದಿನೇ ದಿನೇ ರೂಪಾಂತರಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಜನ ಆತಂಕಗೊಳ್ಳುವಂತೆ ಮಾಡಿದೆ. ಇದರಲ್ಲಿ ಹೆಚ್ಚು ಮಂದಿ ವಿದೇಶಿ ಪ್ರಯಾಣಿಕರೇ ಆಗಿದ್ದಾರೆ. ವಿದೇಶಿ ಪ್ರಯಾಣಿಕರು ಸೂಪರ್ ಸ್ಪ್ರೆಡರ್ ಗಳಾಗುವ ಸಾಧ್ಯತೆ ದಟ್ಟವಾಗುತ್ತಿದೆ.






