• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಲಾಕ್‌ಡೌನ್‌ ಮಧ್ಯೆಯೂ ವನ್ಯಜೀವಿ ಬೇಟೆಗಿಳಿದ ಸಮಯ ಸಾಧಕರು!

by
April 5, 2020
in ಕರ್ನಾಟಕ
0
ಲಾಕ್‌ಡೌನ್‌ ಮಧ್ಯೆಯೂ ವನ್ಯಜೀವಿ ಬೇಟೆಗಿಳಿದ ಸಮಯ ಸಾಧಕರು!
Share on WhatsAppShare on FacebookShare on Telegram

ಕರೋನಾ ಭಯದಲ್ಲಿ ಜನರೆಲ್ಲಾ ಮನೆ ಸೇರಿಕೊಂಡಿದ್ದಾರೆ. ಪ್ರಾಣಿಗಳೆಲ್ಲಾ ಸ್ವಚ್ಛಂಧವಾಗಿ ಓಡಾಡುತ್ತಿವೆ ಎಂದು ಕೆಲವರು ಪರಿಶೀಲಿಸದ ವಿಡಿಯೋ ತುಣುಕುಗಳನ್ನ ಶೇರ್‌ ಮಾಡಿಕೊಂಡು ಬೀಗುವುದನ್ನ ನೋಡಿದ್ದೇವೆ. ಆ ವಿಡಿಯೋಗಳ ಅಸಲಿಯತ್ತು ಎಷ್ಟೋ ಗೊತ್ತಿಲ್ಲ..! ನಮ್ಮ ದೇಶದಲ್ಲಿ ಜನರು ಓಡಾಡುವ ಪ್ರದೇಶದಲ್ಲೆಡೆ ತಕ್ಷಣ ವ್ಯಾಪಿಸಿಬಿಡುವ ಪ್ರಾಣಿಗಳಿವಿಯೋ ಇಲ್ಲವೋ..! ಆದರೆ ಕಳ್ಳ ಬೇಟೆಗೆ ಬಲಿಯಾಗುತ್ತಿರುವ ಪ್ರಾಣಿಗಳನ್ನ ಸಂಖ್ಯೆ ನೋಡಿದರೆ ಕರೋನಾ ವೈರಸ್‌ನ್ನ ಶಪಿಸಲೇಬೇಕಾಗುತ್ತೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಘೋಷಣೆ ಮಾಡಿದ ಮಾರನೇ ದಿನವೇ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಐಎಂ ನಾಗಾರಾಜ್‌, ನಾಲ್ವರನ್ನ ಕಚೇರಿಗೆ ತಂದು ವಿಚಾರಣೆ ನಡೆಸಿದ್ದರು. ಮಾಧ್ಯಮಗಳ ಜೊತೆ ಮಾತನಾಡಿ, ಇವರೆಲ್ಲಾ ಕರೋನಾ ಸಮಯಸಾಧಕರು, ಲಾಕ್‌ಡೌನ್‌ ಸಮಯ ನೋಡಿ ಅಮೂಲ್ಯವಾದ ಮರಗಳನ್ನ ಕಡಿದು ಸಾಗಿಸಿದ್ದಾರೆ ಎಂದು ಹೇಳಿದರು. ಕರ್ಫ್ಯೂ ವಿಧಿ ಅನ್ವಯವಾಗಿದ್ದು ಎಲ್ಲರೂ ಕರೋನಾ ಮಹಾಮಾರಿಯನ್ನ ಶಪಿಸಿ ಮನೆಯೊಳಗೆ ಸೇರುತ್ತಿದ್ದರೆ ಕಳ್ಳರ ತಲೆಯಲ್ಲಿ ದುಷ್ಟ ಯೋಚನೆಗಳು ಓಡಾಡುತ್ತಿದ್ದವು. ಇತ್ತ ಅರಣ್ಯ ಅಧಿಕಾರಿಗಳೂ ಸಹ ಕರೋನಾ ಗುಮ್ಮಕ್ಕೆ ಹೆದರಿ ಮನೆ ಸೇರಿಕೊಂಡರು. ಕಳೆದ ತಿಂಗಳ ಕೊನೆ ವಾರದಲ್ಲಿ ಕಾಡು ಪ್ರಾಣಿ ವಧೆಯ ಎಂಟು ಪ್ರಕರಣಗಳು ಪತ್ತೆಯಾದವು. ಏಪ್ರಿಲ್‌ ಮೊದಲ ವಾರದಲ್ಲಿ ಇದು ದುಪ್ಪಟ್ಟಾಯ್ತು. ಅರಣ್ಯ ಇಲಾಖೆ ವರ್ಷವಿಡೀ ಊಹಿಸಬಹುದಾದ ಮೊತ್ತದಷ್ಟು ಒಂದೇ ವಾರದಲ್ಲಾಯ್ತು. ಇವೆಲ್ಲಾ ಬೆಳಕಿಗೆ ಬಂದ ಪ್ರಕರಣಗಳು, ಇನ್ನೆಷ್ಟು ಅವಶೇಷಗಳು ಕಾಡಿನಲ್ಲಿ ಒರಗಿವೆಯೋ, ಕಟುಕರ ಮನೆಯ ಸೂರಿನಲ್ಲಿ ನೇತಾಡುತ್ತಿವೆಯೋ ಗೊತ್ತಿಲ್ಲ..!

ನಾಗರಹೊಳೆ, ಬಂಡೀಪುರ ಅಭಯಾರಣ್ಯ, ದಾಂಡೇಲಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರತಿದಿನ ವನ್ಯಜೀವಿಗಳ ಮಾರಣ ಹೋಮ ನಡೆಯುತ್ತಿದೆ. ಮಾರ್ಚ್‌ ಕೊನೆಯ ವಾರ ಚಿಕ್ಕಮಗಳೂರಿನ ಕಡೂರಿನಲ್ಲಿ ಅರಣ್ಯ ಅಧಿಕಾರಿಗಳು ಲಗೇಜ್‌ ಆಟೋವನ್ನ ವಶಕ್ಕೆ ಪಡೆಯುತ್ತಾರೆ. ಅದರಲ್ಲಿ 80 ಕೆ.ಜಿ ಜಿಂಕೆ ಮಾಂಸವಿತ್ತು. ಆದರೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮೂವರನ್ನ ವಶಕ್ಕೆ ಪಡೆದು ಬಂಡಿಪುರ ಅಭಯಾರಣ್ಯದ ಬಫರ್‌ಝೋನ್‌ನಲ್ಲಿ ಬೇಟೆಯಾಡಿದ ಮೊಲಗಳು ಹಾಗೂ ಜಿಂಕೆಮರಿಗಳನ್ನ ವಶಕ್ಕೆ ಪಡೆದರು. ಕೊಡಗಿನಲ್ಲಿ ಓರ್ವನನ್ನ ಸೆರೆಹಿಡಿದರು. ಶಿವಮೊಗ್ಗದ ಕುಂಸಿ ಬಳಿಯ ಕೆಂಪಿನಕೊಪ್ಪ ಗ್ರಾಮದಲ್ಲಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಯ್ತು. ಪಕ್ಕದಲ್ಲಿದ್ದ ಫಾರ್ಮ್‌ ಹೌಸ್‌ ಮೇಲೆ ದಾಳಿ ನಡೆಸಿದಾಗ ಮಟನ್‌ಸ್ಟಾಲ್‌ ತರಹ ಜಿಂಕೆಗಳ ಕೊಂಬು, ತಲೆ, ಕೋಡುಗಳನ್ನ ತೂಗು ಹಾಕಲಾಗಿತ್ತು. ಓರ್ವನನ್ನ ವಶಪಡಿಸಿಕೊಂಡು ಮೃತ ಪ್ರಾಣಿಗಳ ಭಾಗಗಳನ್ನ ವಶಕ್ಕೆ ಪಡೆದರು. ಕರೋನಾ ವೈರಸ್‌ ದಾಳಿಗೆ ಪಟ್ಟಣಗಳು ಖಾಲಿ, ಮಾಂಸ-ಮೀನು ಅಂಗಡಿಗಳಿಗೆ ನಿರ್ಬಂಧ, ಅರಣ್ಯ ಅಧಿಕಾರಿಗಳು ಮನೆಯಲ್ಲಿ ಕೂತಿರಬಹುದು ಎಂಬ ಅದಮ್ಯ ನಂಬಿಕೆ ಈ ಕಳ್ಳರದ್ದು. ಹಾಗಾಗಿಯೇ ನಿಷೇಧಿತ, ಸಂರಕ್ಷಿತ ಅರಣ್ಯಗಳಿಗೆಲ್ಲಾ ದಾಳಿ ಇಡುತ್ತಿದ್ದಾರೆ.
ಕರೋನಾ ಮುಳುವಾಗಿದ್ದು ಕೇವಲ ಕಾಡು ಪ್ರಾಣಿಗಳಿಗಷ್ಟೇ ಅಲ್ಲ, ಅರಣ್ಯ ನಾಶಕ್ಕೂ ಎಡೆಮಾಡಿದಂತಿದೆ. ಕೆಲವು ಪರಿಸರವಾದಿಗಳು ರಸ್ತೆಯ ಮೇಲೆ ಕಾಡುಪ್ರಾಣಿಗಳು ಓಡಾಡಿವೆ, ಲಾಕ್‌ಡೌನ್‌ನಿಂದ ಜನರ ಉಪಟಳ ಇಲ್ಲ, ಕಾಡ್ಗಿಚ್ಚು ಕಡಿಮೆ ಎನ್ನುತ್ತಾರೆ.

ವಾಸ್ತವದಲ್ಲಿ ಕಾಡಿಗೆ ಬೆಂಕಿ ಇಡುವ ಕೆಲಸ ನಿಧಾನವಾಗಿ ನಡೆಯುತ್ತಿದೆ. ಸಾಕಷ್ಟು ಕಡೆಯಲ್ಲಿ ಕಾಡಿಗೆ ಕೊಳ್ಳಿಇಡುವ ಕೆಲಸ ಸಾಗಿದೆ. ಒತ್ತುವರಿಯೂ ಎಗ್ಗಿಲ್ಲದೇ ನಡೆಯುತ್ತಿದೆ. ಹೆದ್ದಾರಿ ಅಕ್ಕಪಕ್ಕದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಕೆಲಸ ಲಾಕ್‌ಡೌನ್‌ ಸಮಯದಲ್ಲೇ ಮುಗಿಸಿದ್ದಾರೆ. ಉರುವಲಿಗಾಗಿ ಸೌಧೆಯ ಅಗತ್ಯತೆಯೂ ಎದುರಾಗಿದೆ. ಕೃಷಿ ಚಟುವಟಿಕೆಗಳಿಗೆ ಭೂಮಿ ಸಿದ್ಧಪಡಿಸುವ ಭರಾಟೆಯಲ್ಲಿ ಇಟ್ಟ ಬೆಂಕಿ ಕಾಡುಗಳಲ್ಲಿ ಆವರಿಸಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಲಾಕ್‌ಡೌನ್‌ ಸಮಯದ ಅಗತ್ಯ ಸೇವೆಗಳಲ್ಲಿ ಅರಣ್ಯ ಇಲಾಖೆಯನ್ನೂ ಸೇರಿಸಬೇಕಿತ್ತು. ಆಗ ಅರಣ್ಯ ಇಲಾಖೆ ಕೂಡ ಜಾಗೃತವಾಗಿರುತ್ತಿತ್ತು.

Tags: Corona OutbreakLockdownShivamoggawildlife huntingಕರೋನಾ ಭೀತಿಲಾಕ್‌ಡೌನ್‌ವನ್ಯಜೀವಿ ಬೇಟೆಶಿವಮೊಗ್ಗ
Previous Post

ಕರುನಾಡಿನ ಮೊದಲ ಸ್ವಾತಂತ್ರ್ಯ ಸಂಗ್ರಾಮ ಅಮರ ಸುಳ್ಯ ದಂಗೆಯ ನೆನಪು

Next Post

ಕರೋನಾ ವೈರಸ್‌​ ಚಿಕಿತ್ಸೆ: ಅನಧಿಕೃತ ಮಾಹಿತಿಯನ್ನು ಅಧಿಕೃತವಾಗಿಸಿದ ಕೇಂದ್ರ ಸಚಿವ

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
Next Post
ಕರೋನಾ ವೈರಸ್‌​ ಚಿಕಿತ್ಸೆ: ಅನಧಿಕೃತ ಮಾಹಿತಿಯನ್ನು ಅಧಿಕೃತವಾಗಿಸಿದ ಕೇಂದ್ರ ಸಚಿವ

ಕರೋನಾ ವೈರಸ್‌​ ಚಿಕಿತ್ಸೆ: ಅನಧಿಕೃತ ಮಾಹಿತಿಯನ್ನು ಅಧಿಕೃತವಾಗಿಸಿದ ಕೇಂದ್ರ ಸಚಿವ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada