ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘುಗಡಿ ಭಾಗದಿಂದ ಬಂಧನಕ್ಕೊಳಗಾಗಿದ್ದ ಫ್ರೀಲ್ಯಾನ್ಸ್ ಪತ್ರಕರ್ತ ಮಂದೀಪ್ ಪೂನಿಯಾ ಅವರಿಗೆ ದೆಹಲಿ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಮಂದೀಪ್ ಅವರ ಅರ್ಜಿ ಆಲಿಸಿದ ಮೆಟ್ರೊಪಾಲಿಟನ್ ಮುಖ್ಯ ನ್ಯಾಯಾಧೀಶ ಸತ್ವೀರ್ ಸಿಂಗ್ ಲಂಭಾ ಅವರು, ದೂರುದಾರ, ಸಂತ್ರಸ್ತ ಹಾಗೂ ಸಾಕ್ಷೀದಾರ ಎಲ್ಲವೂ ಪೊಲೀಸ್ ಸಿಬ್ಬಂದಿಗಳೇ ಎನ್ನುವ ಅಂಶವನ್ನು ಗಮನಿಸಿ ಅರ್ಜಿದಾರರು ಪೊಲೀಸ್ ಸಿಬ್ಬಂದಿಗಳ ಮೇಲೆ ಪ್ರಭಾವ ಬೀರಲಾರರು ಎಂಬ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರು ಯಾವುದೇ ಪೊಲೀಸ್ ಸಿಬ್ಬಂದಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಮಂದೀಪ್ ಅವರನ್ನು ಬಂಧಿಸಿದ್ದ ದೆಹಲಿ ಪೊಲೀಸರು, ಐಪಿಸಿಯ 186 (Obstructing public servant in discharge of public functions), 353 (Assault or criminal force to deter public servant from discharge of his duty) ಹಾಗೂ 332 (Voluntarily causing hurt to deter public servant from his duty) ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು.ದೆಹಲಿ ಟ್ರ್ಯಾಕ್ಟರ್ ಮೆರವಣಿಗೆ: ತರೂರ್ ಸೇರಿ 6 ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ
ಜಾಮೀನು ನೀಡುವ ವೇಳೆ, ನ್ಯಾಯಾಲಯದ ಒಪ್ಪಿಗೆಯಿಲ್ಲದೆ ದೇಶವನ್ನು ಬಿಟ್ಟು ಹೊರಗೆ ಪ್ರಯಾಣಿಸಬಾರದೆಂದು ನ್ಯಾಯಾಲಯ ಮಣದೀಪ್ ಅವರಿಗೆ ಆದೇಶಿಸಿದೆ.
“ಜಾಮೀನಿನ ಮೇಲೆ ಬಿಡುಗಡೆಯಾದ ಸಂದರ್ಭದಲ್ಲಿ ಆರೋಪಿಯು ಇದೇ ರೀತಿಯ ಅಪರಾಧ ಅಥವಾ ಯಾವುದೇ ಅಪರಾಧದಲ್ಲಿ ತೊಡಗಬಾರದು ಹಾಗೂ ಆರೋಪಿಯು ಯಾವುದೇ ರೀತಿಯಲ್ಲಿ ಸಾಕ್ಷ್ಯಗಳನ್ನು ಹಾಳು ಮಾಡಬಾರದು, ” ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ತನಿಖಾ ಸಂಸ್ಥೆಗೆ ಅಗತ್ಯವಿರುವಾಗ ಆರೋಪಿಯು ವಿಚಾರಣೆ ಹಾಜರಾಗಬೇಕು ಹಾಗೂ ಸಹಕರಿಸಬೇಕೆಂದು ತಿಳಿಸಿದೆ.
inputs: indianexpress