ಕೃಷಿ ಕಾಯ್ದೆ ತಿದ್ದುಪಡಿಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಉತ್ತರ ಭಾರತದಾದ್ಯಂತ ಸಂಚಾರ ಅಸ್ತವ್ಯಸ್ತವಾಗಿದೆ. ಮುಖ್ಯವಾಗಿ ಸರಕು ಸಾಗಾಟದ ವಾಹನಗಳ ಸಂಚಾರ ಸಾಕಷ್ಟು ತೋಂದರೆಗೆ ಸಿಲುಕಿಕೊಂಡಿದೆ.
ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಮ್ಮು ಕಾಶ್ಮೀರದಿಂದ ದೆಹಲಿಗೆ ಸಾಗುವ ಎಲ್ಲಾ ಹೆದ್ದಾರಿಗಳನ್ನು ರೈತರು ಮುಚ್ಚಿದ್ದಾರೆ. ಇದರಿಂದಾಗಿ ಯಾವುದೇ ರೀತಿಯ ಕೃಷಿ, ಕಟ್ಟಡ ನಿರ್ಮಾಣ ಹಾಗೂ ಇತರ ಕ್ಷೇತ್ರಗಳ ಸರಕುಗಳು ಕ್ಲಪ್ತ ಸಮಯದಲ್ಲಿ ತಲುಪುತ್ತಿಲ್ಲ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬುಧವಾರದಂದು ಮತ್ತೆ ರೈತರು ಇನ್ನೆರಡು ಹೆದ್ದಾರಿಗಳನ್ನು ಮುಚ್ಚಿದ್ದಾರೆ. ಟಿಕ್ರಿ ಹಾಗೂ ಧಾಂಸ ಹೆದ್ದಾರಿಗಳನ್ನು ಮುಚ್ಚಿರುವುದರಿಂದ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಒಂದು ವೇಳೆ ಸರ್ಕಾರ ಕೃಷಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಾಸ್ ಪಡೆಯದೇ ಇದ್ದರೇ, ಧರಣಿ ಮುಂದುವರೆಸುವುದಾಗಿ ರೈತರು ಪುನರುಚ್ಚರಿಸಿದ್ದಾರೆ.
ರೈತರ ಪ್ರತಿಭಟನೆಯ ಕುರಿತು ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, ಈ ಪ್ರತಿಬಟನೆಯು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿದೆ. ಇದಕ್ಕೆ ಶೀಘ್ರದಲ್ಲಿಯೇ ಪರಿಹಾರ ಕಂಡುಹುಡಕಲಾಗುವುದು. ರೈತ ಒಕ್ಕೂಟದ ಮುಖಂಡರೊಂದಿಗೆ ನಿರಂತರವಾಗಿ ಮಾತುಕತೆ ನಡೆಸಲಾಗುವುದು, ಎಂದು ಹೇಳಿದ್ದಾರೆ.