• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಜಸ್ಥಾನ ರಾಜಕೀಯ: ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್‌ಗೆ ಹಿನ್ನಡೆ

by
July 23, 2020
in ದೇಶ
0
ರಾಜಸ್ಥಾನ ರಾಜಕೀಯ: ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್‌ಗೆ ಹಿನ್ನಡೆ
Share on WhatsAppShare on FacebookShare on Telegram

Also Read: ರೋಚಕ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಗೆಹ್ಲೋಟ್, ಪೈಲಟ್ ಇಬ್ಬರಿಗೂ ಇಕ್ಕಟ್ಟು

ADVERTISEMENT

ಕಾಂಗ್ರೆಸ್ ಬಂಡಾಯ ಶಾಸಕ ಸಚಿನ್ ಪೈಲಟ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ಹೋರಾಟದಲ್ಲಿ ನ್ಯಾಯಾಲಯದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಕ್ಷವನ್ನು ವಿರೋಧಿ ಚಟುವಟಿಕೆಗಳಿಗೆ ಅನರ್ಹಗೊಳಿಸುವ ನೋಟಿಸ್‌ಗಳನ್ನು ಪ್ರಶ್ನಿಸಿ ಸಚಿನ್ ಪೈಲಟ್ ಮತ್ತು ಇತರ 18 ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯ ಕುರಿತು ನಾಳೆ ರಾಜಸ್ಥಾನ್ ಹೈಕೋರ್ಟ್ ತನ್ನ ನಿರ್ಧಾರವನ್ನು ಪ್ರಕಟಿಸುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ಕಳೆದ ವಾರ ಬಂಡಾಯ ಶಾಸಕರಿಗೆ ನೋಟಿಸ್‌ಗಳನ್ನು ಸಲ್ಲಿಸಿದ್ದ ರಾಜಸ್ಥಾನ್ ಸ್ಪೀಕರ್, ಈ ಹಂತದಲ್ಲಿ ಬಂಡಾಯ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ರಾಜಸ್ಥಾನ ಹೈಕೋರ್ಟ್‌ನ ತೀರ್ಪು ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ, ಕೇವಲ ಒಂದು ದಿನ ಕಾಯಲು ನಿಮಗೆ ಯಾಕೆ ಸಾಧ್ಯವಿಲ್ಲ ಎಂದು ಉನ್ನತ ನ್ಯಾಯಾಲಯವು ನಾಳೆಯ ಹೈಕೋರ್ಟ್ ತೀರ್ಪನ್ನು ತಡೆಯುವ ವಾದ-ವಿವಾದಗಳ ಸಂದರ್ಭದಲ್ಲಿ ಸಭಾಪತಿ ಅವರನ್ನು ಕೇಳಿದೆ. ಅಲ್ಲದೆ ತಟಸ್ಥ ನಿಲುವು ತಳೆಯಬೇಕಿರುವ ಸಭಾಪತಿ, ನ್ಯಾಯಾಲಯವನ್ನು ಏಕೆ ಸಂಪರ್ಕಿಸಬೇಕು ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ನಾಯಕನ ಮೇಲೆ ನಂಬಿಕೆ ಕಳೆದುಕೊಂಡಿರುವ ವ್ಯಕ್ತಿಯನ್ನು, ಆತ ಪಕ್ಷದಲ್ಲಿರುವಾಗಲೇ ಅನರ್ಹಗೊಳಿಸಲು ಸಾಧ್ಯವಿಲ್ಲ. ಬಳಿಕ ಇದು ಭಿನ್ನಾಭಿಪ್ರಾಯವನ್ನು ದಮನಿಸುವ ವಿಧಾನವಾಗಿಬಿಡುತ್ತದೆ. ಪ್ರಜಾಪ್ರಭುತ್ವದಲ್ಲಿ ಭಿನ್ನ ದನಿಯನ್ನು ಈ ರೀತಿ ದಮನ ಮಾಡಲು ಸಾಧ್ಯವಿಲ್ಲವೆಂದು ತ್ರಿಸದಸ್ಯ ಪೀಠದ, ಸದಸ್ಯ ನ್ಯಾಯಮೂರ್ತಿ ಎಕೆ ಮಿಶ್ರಾ ಅಭಿಪ್ರಾಯಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೈಕೋರ್ಟ್‌ ಬಂಡಾಯ ಶಾಸಕರ ಪರ ತೀರ್ಪು ನೀಡಲು ಈಗ ಸಾಧ್ಯವಿಲ್ಲ. ಸಭಾಪತಿ ಪ್ರಕರಣವನ್ನು ನಿಭಾಯಿಸುವಾಗ ಯಾವುದೇ ಕೋರ್ಟ್‌ ಮಧ್ಯಪ್ರವೇಶ ಮಾಡುವಂತೆ ಇಲ್ಲ ಎಂದು ರಾಜಸ್ಥಾನ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದಾರೆ.

Also Read: ಚಿನ್ನದ ಮೊಟ್ಟೆಯ ಕೋಳಿಗಳನ್ನು ಏಕೆ ಕಳೆದುಕೊಂಡಿತು ಕಾಂಗ್ರೆಸ್‌..?

ಕಳೆದ ವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕರೆದಿದ್ದ ಕಾಂಗ್ರೆಸ್ ಶಾಸಕರ ಎರಡು ಸಭೆಗಳನ್ನು ತಪ್ಪಿಸಿಕೊಂಡ ಬಳಿಕ ಸಚಿನ್ ಪೈಲಟ್ ಸೇರಿದಂತೆ 19 ಬಂಡಾಯ ಶಾಸಕರಿಗೆ ಸಭಾಪತಿ ಸಿಪಿ ಜೋಶಿ ನೋಟಿಸ್ ನೀಡಿದ್ದರು.

ತಾವು ನಾಯಕತ್ವದ ಬದಲಾವಣೆಯನ್ನು ಮಾತ್ರ ಬಯಸುತ್ತೇವೆ. ತಮಗೆ ಪಕ್ಷವನ್ನು ತೊರೆಯುವ ಉದ್ದೇಶವಿಲ್ಲ ಎಂದು ಬಂಡಾಯ ಶಾಸಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಆದರೆ ಪಕ್ಷ ಕರೆದ ಸಭೆಯನ್ನು ತಪ್ಪಿಸಿಕೊಳ್ಳುವುದು ಸದಸ್ಯತ್ವವನ್ನು ಬಿಟ್ಟುಕೊಡುವಂತೆ ಎಂದು ಕಪಿಲ್‌ ಸಿಬಲ್‌ ವಾದಿಸಿದ್ದಾರೆ.

Also Read: ವರ್ಷದೊಳಗೆ ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು; ಸಚಿನ್ ಪೈಲಟ್ ತಾಕೀತು

Tags: ರಾಜಸ್ಥಾನಸಚಿನ್ ಪೈಲಟ್
Previous Post

ಮಕ್ಕಳ ನಡುವೆ ‘ಡಿಜಿಟಲ್ ಡಿವೈಡ್’ ಸೃಷ್ಟಿಸುತ್ತಿದೆ ಸೇತುಬಂಧ!

Next Post

ಕರ್ನಾಟಕ: 5030 ಹೊಸ ಕರೋನಾ ಪ್ರಕರಣಗಳು ಪತ್ತೆ

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಕರ್ನಾಟಕ: 5030 ಹೊಸ ಕರೋನಾ ಪ್ರಕರಣಗಳು ಪತ್ತೆ

ಕರ್ನಾಟಕ: 5030 ಹೊಸ ಕರೋನಾ ಪ್ರಕರಣಗಳು ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada