ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಲೋಕ ಕಂಡ ದಿಗ್ಗಜ ಆಟಗಾರರು. ಈ ಇಬ್ಬರು ಆಟಗಾರರು ಬಹುತೇಕ ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಅಂಗಳಕ್ಕೆ ಇಳಿದು ಭಾರತೀಯರು ಸೇರಿದಂತೆ ವಿಶ್ವದ ಕ್ರಿಕೆಟ್ ಪ್ರೇಮಿಗಳನ್ನು ಮನರಂಜಿಸಿದ್ರು ಎಂದರೆ ಸುಳ್ಳಲ್ಲ. ಬಂಗಾಳದ ಹುಲಿ ಸೌರವ್ ಗಂಗೂಲಿ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಮುಂಬೈಕರ್ ಸಚಿನ್ ತೆಂಡೂಲ್ಕರ್ ಬಲಗೈ ಬ್ಯಾಟ್ಸ್ಮನ್ಗಳಾಗಿ ಅಂಗಳದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಅಟ್ಟುವ ಮೂಲಕ ಮನರಂಜನೆಯ ಮಹಾಪೂರ ಉಣಿಸಿದ್ರು. ಇದೀಗ ಕ್ರಿಕೆಟ್ ದೇವರ ಮಹಾನ್ ಸೀಕ್ರೆಟ್ ಒಂದು ಬಯಲಾಗಿದೆ. ಆರಂಭಿಕ ಆಟಗಾರನಾಗಿ ಬಂದರೂ ಸಚಿನ್ ತೆಂಡೂಲ್ಕರ್ ಸ್ಕ್ರೈಕ್ ಮಾಡಲು ಮುಂದಾಗುತ್ತಿರಲಿಲ್ಲ. ನಾನ್ಸ್ಟ್ರೈಕ್ ಆಟಗಾರನಾಗಿ ನಿಲ್ಲುತ್ತಿದ್ದರು. ಇದಕ್ಕೆ ಕಾರಣ ಏನು ಎನ್ನುವುದನ್ನು ಬಂಗಾಳದ ಹುಲಿ ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.
ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಸಾಕಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. 176 ಇನ್ನಿಂಗ್ಸ್ ಆಡಿರುವ ಬಂಗಾಳದ ಹುಲಿ ಸೌರವ್ ಹಾಗೂ ಕ್ರಿಕೆಟ್ ದೇವರು ಸಚಿನ್ ಒಟ್ಟು 8227 ರನ್ ಕಲೆ ಹಾಕಿದ್ದಾರೆ. ಸಚಿನ್ ತಂಡೋಲ್ಕರ್ ಒಟ್ಟು 340 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಮೊದಲ ಬಾಲ್ ಎದುರಿಸಿದ್ದು ಕೇವಲ 47 ಬಾರಿ ಮಾತ್ರ. ಇನ್ನುಳಿದ ಪಂದ್ಯಗಳಲ್ಲಿ ಮೊದಲ ಬಾಲ್ ಎದುರಿಸುವ ಬದಲು ನಾನ್ ಸ್ಟ್ರೈಕ್ನಲ್ಲಿ ಆಡಲು ಮನಸ್ಸು ಮಾಡುತ್ತಿದ್ದರು. ಈ ಬಗ್ಗೆ ಸೌರವ್ ಗಂಗೂಲಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ನ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಜೊತೆ ಸಂಭಾಷಣೆ ನಡೆಸುತ್ತ ಈ ಸೀಕ್ರೆಟ್ ಬಯಲು ಮಾಡಿದ್ದಾರೆ. ಗಂಗೂಲಿ ಬಿಚ್ಚಿಟ್ಟಿರುವ ಈ ಮಾಹಿತಿ ಬಿಸಿಸಿಐನ ಟ್ವಿಟರ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಆರಂಭಿಕ ಆಟಗಾರರ ಜೊತೆ ಮಯಾಂಕ್ (‘Open Nets with Mayank’) ಕಾರ್ಯಕ್ರಮದಲ್ಲಿ ಮಾತನಾಡಿದ ಸೌರವ್ ಗಂಗೂಲಿ, 1996 ರಿಂದ 2007ರ ನಡುವೆ ಯಶಸ್ವಿ ಜೋಡಿ ಎನಿಸಿಕೊಂಡ ಹಲವಾರು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಸ್ವತಃ ಸೌರವ್ ಗಂಗೂಲಿ ನಾಯಕತ್ವದಲ್ಲಿ 136 ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಅಂಗಳಕ್ಕೆ ಇಳಿದಿದ್ದು, ಸರಾಸರಿ 49.32 ರಂತೆ 6,609 ರನ್ಗಳನ್ನು ಬಾರಿಸಿದ್ದಾರೆ. ಈ ಯಶಸ್ವಿ ಜೋಡಿ ತನ್ನೊಳಗೆ ಸಾಕಷ್ಟು ರಹಸ್ಯಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲಿ ಒಂದನ್ನು ಸೌರವ್ ಗಂಗೂಲಿ ಬಹಿರಂಗ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಬಹುತೇಕ ಸಮಯ ನಿಮ್ಮನ್ನು ಮೊದಲ ಬಾಲ್ ಆಡಲು ಕಳುಹಿಸುತ್ತಿದ್ದರಂತೆ ನಿಜನಾ..? ಎನ್ನುವ ಪ್ರಶ್ನೆಗೆ ಬಿಸಿಸಿಐ ಅಧ್ಯಕ್ಷ ಉತ್ತರ ಎಸ್ ಎನ್ನುವುದಾಗಿದೆ.
ಒಂದೇ ಪ್ರಶ್ನೆಗೆ ಎರಡು ಉತ್ತರ ಕೊಟ್ಟಿರುವ ಸೌರವ್ ಗಂಗೂಲಿ, ಯಾವಾಗಲೂ ಸಚಿನ್ ಅದನ್ನೇ ಮಾಡುತ್ತಿದ್ದರು. ನೀನು ಕೆಲವೊಮ್ಮೆ ಯಾಕೆ ಮೊದಲ ಬಾಲ್ ಎದುರಿಸಬಾರದು ಎನ್ನುತ್ತಿದೆ. ಆದರೆ ಆತ ಒಪ್ಪುತ್ತಿರಲಿಲ್ಲ. ಸಚಿನ್ ಯಾವಾಗ ಉತ್ತಮ ಫಾರ್ಮ್ನಲ್ಲಿ ಇರ್ತಾರೋ ಆಗ ನಾನು ನಾನ್ಸ್ಟ್ರೈಕ್ನಲ್ಲಿ ಇರ್ತೇನೆ ಎನ್ನುತ್ತಿದ್ದರು. ಅದೇ ರೀತಿ ಫಾರ್ಮ್ನಲ್ಲಿ ಇಲ್ಲದಿದ್ದಾಗಲೂ ಒತ್ತಡ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಾನ್ಸ್ಟ್ರೈಕ್ನಲ್ಲಿ ಆಡಲು ಬಯಸುತ್ತಿದ್ದರು ಎಂದಿದ್ದಾರೆ.

ಸದ್ಯಕ್ಕೆ ಬಿಸಿಸಿಐ ಟ್ವಿಟರ್ ಪೇಜ್ನಲ್ಲಿ ಗಂಗೂಲಿ ಅವರ ಸಂದರ್ಶನದ ಪುಟ್ಟ ತುಣುಕೊಂದನ್ನು ಹಾಕಿದ್ದು, ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಬರಲಿದೆ ಎಂದಿದ್ದಾರೆ. ಆದರೆ ಸಚಿನ್ ಯಾವುದೇ ಕಾರಣಕ್ಕೂ ಪಂದ್ಯದ ಮೊದಲ ಬಾಲ್ ಎದುರಿಸಲು ಸಿದ್ಧರಿರಲಿಲ್ಲ ಎನ್ನುವುದನ್ನು ಜಗತ್ತಿನ ಎದುರು ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ. ಒಂದೆರಡು ಬಾರಿ ಸಚಿನ್ಗಿಂತಾ ಮುಂಚೆ ನಾನು ಬಂದು ನಾನ್ಸ್ಕ್ರೈಕ್ ಕಡೆ ನಿಂತಿರುವುದೂ ಇದೆ ಎಂದಿದ್ದಾರೆ. ಆದರೆ ಈ ಮಾತನ್ನು ಕ್ರಿಕೆಟ್ ದೇವರು ಎಂದೇ ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಳಿದುಕೊಂಡಿರುವ ಸಚಿನ್ ತೆಂಡೂಲ್ಕರ್ ಒಪ್ಪಿಕೊಳ್ಳಬೇಕಿದೆ. ಅಥವಾ ತಿರಸ್ಕರಿಸಬೇಕಿದೆ.
ಟೆಸ್ಟ್ನಲ್ಲಿ 15,921 ರನ್ ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ 51 ಸೆಂಚ್ಯೂರಿ ದಾಖಲಿಸಿದ್ದಾರೆ. ಏಕದಿನ ಪಂದ್ಯದಲ್ಲಿ 18,426 ಬಾರಿಸಿರುವ ಸಚಿನ್ ತೆಂಡೂಲ್ಕರ್, 49 ಶತಕದ ದಾಖಲೆಯನ್ನು ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ. 24 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಟವಾಡಿರುವ ಮುಂಬೈಕರ್ ಸಚಿನ್ ತೆಂಡೂಲ್ಕರ್, 6 ವಿಶ್ವಕಪ್ ಸರಣಿಯಲ್ಲಿ ಭಾರತಕ್ಕೆ ಶಕ್ತಿಯಾಗಿದ್ದವರು. 2011ರ ವಿಶ್ವಕಪ್ ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್, ಮೊದಲ ಬಾಲು ಎದುರಿಸಲು ಭಯ ಪಡ್ತಿದ್ರಾ..? ಎನ್ನುವುದಕ್ಕೆ ಸಚಿನ್ ಬಗ್ಗೆ ಗಂಗೂಲಿ ಹೇಳಿದ್ದಾರೆ. ಆದರೆ ಅದು ಸತ್ಯವೇ..? ಎನ್ನುವ ಬಗ್ಗೆ ಅವರೇ ಸ್ಪಷ್ಟನೆ ಕೊಡಲಬೇಕಿದೆ.