• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಳೆ ಸೂಚನೆ ನೀಡುವ ಚಾತಕ ಪಕ್ಷಿ..!

by
July 4, 2020
in ಕರ್ನಾಟಕ
0
ಮಳೆ ಸೂಚನೆ ನೀಡುವ ಚಾತಕ ಪಕ್ಷಿ..!
Share on WhatsAppShare on FacebookShare on Telegram

ಚಾತಕ ಪಕ್ಷಿಯಂತೆ ಕಾಯುತ್ತಾರೆ ಎಂಬ ವಾಕ್ಯವನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಈ ಚಾತಕ ಪಕ್ಷಿಗಳ ಕೂಗು ಕೇಳಿದ ಮೇಲೆ ಬಿತ್ತನೆಗೆ ಮುಂದಾಗುವ ರೈತರನ್ನು ಉತ್ತರ ಕರ್ನಾಟಕದ ಬಹತೇಕ ಭಾಗಗಳಲ್ಲಿ ಕಾಣಬಹುದು. ಅದರ ಬಗ್ಗೆ ಒಂದು ಚಾತಕ ಪಕ್ಷಿ ನೋಟ…..

ADVERTISEMENT

ಕರ್ನಾಟಕದ ಮುಂಗಾರಿಗೂ ಚಾತಕ ಪಕ್ಷಿಗೂ ಅವಿನಾಭಾವ ಸಂಬಂಧವಿದೆ. ಮುಂಗಾರ ಮಳೆಯ ಮೋಡ ಬರುವ ಸುಮಾರು ಒಂದು ವಾರದ ಮುಂಚೆ ಉತ್ತರ ಕರ್ನಾಟಕದ ಬಹು ಭಾಗಗಳಲ್ಲಿ ಕಾಣಿಸುವ ಈ ಹಕ್ಕಿ ಮುಂಚಿತವಾಗಿ ಮಳೆ ಆಗಮನವನ್ನು ಸೂಚಿಸುತ್ತದೆ. ಅದರಲ್ಲೂ ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡಲು ಆರಂಭಿಸಿದರೆ ಮಳೆ ಸುರಿದು ರೈತನ ದಾಹ ನೀಗಿಸುವ ಭರವಸೆಯನ್ನು ನೀಡುತ್ತವೆ ಎನ್ನುವ ಪ್ರತೀತಿ ಇದೆ.

ಈ ಚಾತಕ ಪಕ್ಷಿಯನ್ನು ಜುಟ್ಟು ಕೋಗಿಲೆ ಎಂದೂ ಕರೆಯಲಾಗುತ್ತದೆ. ಇವುಗಳು ವಲಸಿಗ ಹಕ್ಕಿಗಳು ಮತ್ತು ಹೆಚ್ಚಾಗಿ ಏಷ್ಯಾ ಹಾಗೂ ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತವೆ. ಇವು ಸದಾ ಮಳೆಯೊಂದಿಗೆ ಸಂಚಾರ ಮಾಡುತ್ತಿರುತ್ತವೆ. ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಆ ದಿಕ್ಕಿನತ್ತ ವಲಸೆ ಹೋಗುತ್ತವೆ. ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸುತ್ತಿ ಮೇ ಮತ್ತು ಜೂನ್ ತಿಂಗಳಿನ ಆರಂಭಕ್ಕೆ ಭಾರತಕ್ಕೆ ಆಗಮಿಸುತ್ತವೆ. ಮುಂಗಾರಿನ ಗಾಳಿಯಲ್ಲಿ ಅದೇ ದಿಕ್ಕಿನಲ್ಲಿ ಕ್ರಮಿಸಿ ಕರ್ನಾಟಕದ ವಿವಿಧೆಡೆ ಬಂದಿಳಿಯುತ್ತವೆ. ಈ ಪಕ್ಷಿಗಳು ಜೂನ್ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯಲು ಸಹಕರಿಸುವುದರಿಂದ ಇವುಗಳನ್ನು ’ಮಾರುತಗಳ ಮುಂಗಾಮಿ’ಎಂದೂ ಕರೆಯುತ್ತಾರೆ.

ಮಹಾಕವಿ ಕಾಳಿದಾಸ ತನ್ನ ಮೇಘದೂತ ಕಾವ್ಯದಲ್ಲಿ ವರ್ಣಿಸಿರುವಂತೆ ಚಾತಕ ಪಕ್ಷಿ ಮಳೆ ನೀರು ಕುಡಿದು ಮಾತ್ರ ಬದುಕುವಂತಹ ವಿಶಿಷ್ಟ ಹಕ್ಕಿ. ಮಳೆಗಾಲದಲ್ಲಿ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ. ನೀರಡಿಕೆಯಾದಾಗ ವರುಣ ದೇವನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತವೆ. ಆದ್ದರಿಂದ ರೈತರು ಮುಂಗಾರು ಬಿತ್ತನೆ ಮಾಡಿದ ಮೇಲೆ ಚಾತಕ ಪಕ್ಷಿಯ ಹಾರಾಟಕ್ಕೆ ಕಾಯುತ್ತಾರೆ.

ಸಂತೋಷ ಕೆ, ಪರಿಸರವಾದಿಗಳು ರೋಣ ಇವರ ಪ್ರಕಾರ, “ಇಂದಿಗೂ ಹಲವಾರು ರೈತ ಕುಟುಂಬಗಳ ಚಾತಕ ಪಕ್ಷಿಯ ಕೂಗಿನ ನಂತರವೇ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ. ಮೊದಲಿನ ಜನರಿಗೆ ಹವಾಮಾನ ಇಲಾಖೆ ಹಾಗೂ ಗೂಗಲ್ ನ್ಯೂಸ್ ಹಾಗೂ ಇತರೆ ಮಾಧ್ಯಮಗಳಿರಲಿಲ್ಲ. ಆ ಸಮಯದಲ್ಲಿ ಈ ಚಾತಕ ಪಕ್ಷಿಗಳೇ ಅವರಿಗೆ ಮಳೆ ಬರುತ್ತದೆ ಎಂಬ ಸಂವಹನ ಮಾಡುವ ಮಾಧ್ಯಮಗಳಾಗಿದ್ದವು”.

ಜೀವ ವೈವಿಧ್ಯ ತಜ್ಞ ಮಂಜುನಾಥ ನಾಯಕ ಅವರ ಪ್ರಕಾರ, “ಚಾತಕ ಪಕ್ಷಿಯ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲ ಮೂಲಗಳ ಪ್ರಕಾರ, ವಾತಾವರಣದ ತೇವಾಂಶದಲ್ಲಿ ಬದಲಾದಾಗ ಸೂಕ್ಷ್ಮ ಜೀವಿಗಳು ಹಾಗೂ ಇರುವೆಗಳು ಭೂಮಿಯಿಂದ ಹೊರಬರುತ್ತವೆ. ಇಂತಹ ಜೀವಿಗಳೇ ಚಾತಕ ಪಕ್ಷಿಗಳಿಗೆ ಆಹಾರ, ಅದಕ್ಕೆ ಇವುಗಳನ್ನು ಮಳೆ ಸೂಚಕ ಎಂದು ನಮ್ಮ ಹಿರಿಯರು ಗುರುತಿಸಿದ್ದರು. ಇದರ ಇನ್ನೊಂದು ವಿಶೇಷತೆ ಏನೆಂದರೆ, ಇವು ಹೊಂಡ ಹಾಗೂ ಇನ್ನಿತರ ನೀರಿನ ಮೂಲದಿಂದ ನೀರನ್ನು ಕುಡಿಯುವುದಿಲ್ಲ. ತಿಂಗಳುಗಟ್ಟಲೇ ಮಳೆಗಾಗಿ ಕಾದು ಮಳೆಯ ನೀರನ್ನು ಜುಟ್ಟಿನ ಮೂಲಕ ಕುಡಿಯುತ್ತವೆ. ಅದಕ್ಕೆ ʼಚಾತಕ ಪಕ್ಷಿಯಂತೆ ಕಾಯುತ್ತʼ ಎಂಬ ವಾಕ್ಯವನ್ನು ನಾವೆಲ್ಲ ಕೇಳುತ್ತಿರುತ್ತೇವೆ”.

Tags: ಕೃಷಿಚಾತಕ ಪಕ್ಷಿಪಕ್ಷಿಮುಂಗಾರು ಮಳೆರೈತ
Previous Post

ಕೋವಿಡ್-19: ಭಾರತದಲ್ಲಿ 63% ಸೋಂಕಿತರಲ್ಲಿ ಚೇತರಿಕೆ

Next Post

ಜನರಿಗೆ ಸಂಕಷ್ಟ ತಂದ ಕರೋನಾ ಸೋಂಕು ಭಾರೀ ಲಾಭದ ದಂಧೆಯಾಗಿದ್ದು ಹೇಗೆ?

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಜನರಿಗೆ ಸಂಕಷ್ಟ ತಂದ ಕರೋನಾ ಸೋಂಕು ಭಾರೀ ಲಾಭದ ದಂಧೆಯಾಗಿದ್ದು ಹೇಗೆ?

ಜನರಿಗೆ ಸಂಕಷ್ಟ ತಂದ ಕರೋನಾ ಸೋಂಕು ಭಾರೀ ಲಾಭದ ದಂಧೆಯಾಗಿದ್ದು ಹೇಗೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada