• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಾಕಿಸ್ತಾನ ಪರ ಗೂಢಚಾರಿಕೆ; ಪ್ರಮುಖ ಸಂಚುಕೋರನ ಬಂಧಿಸಿದ NIA

by
May 16, 2020
in ದೇಶ
0
ಪಾಕಿಸ್ತಾನ ಪರ ಗೂಢಚಾರಿಕೆ; ಪ್ರಮುಖ ಸಂಚುಕೋರನ ಬಂಧಿಸಿದ NIA
Share on WhatsAppShare on FacebookShare on Telegram

ಪಾಕಿಸ್ತಾನ ಪರ ಗೂಢಚರ್ಯೆ ನಡೆಸಿ ಮಾಹಿತಿ ಒದಗಿಸುತ್ತಿದ್ದ ಪ್ರಮುಖ ಸಂಚುಕೋರನನ್ನ ಬಂಧಿಸುವಲ್ಲಿ NIA ಯಶಸ್ವಿಯಾಗಿದೆ. 2019ರ ಡಿಸೆಂಬರ್‌ ನಲ್ಲಿ ನಡೆದ ಕಾರ್ಯಾಚರಣೆಯ ಮುಂದುವರಿದ ಭಾಗ ಇದಾಗಿದ್ದು, ಅಂದು ವಿಶಾಖಪಟ್ಟಣಂ ನಿಂದ ಏಳು ಮಂದಿ ನೌಕಾ ಸೇನೆಯ ಸಿಬ್ಬಂದಿಗಳನ್ನ ಕೇಂದ್ರ ಗುಪ್ತಚರ ಇಲಾಖೆ ಹಾಗೂ ನೌಕಾಸೇನೆಯ ಅಧಿಕಾರಿಗಳ ಮಾಹಿತಿಯಂತೆ ಆಂಧ್ರ ಪ್ರದೇಶ ರಾಜ್ಯ ಪೊಲೀಸರು ಅರೆಸ್ಟ್‌ ಮಾಡಿದ್ದರು. ಆ 7 ಮಂದಿಯಲ್ಲಿ ಇಬ್ಬರು ಕಾರವಾರದ ನೌಕಾನೆಲೆಯ ಸಿಬ್ಬಂದಿಗಳಾಗಿದ್ದರು. ʼಡಾಲ್ಫಿನ್ಸ್‌ ನೋಸ್‌ʼ ಹೆಸರಿನಲ್ಲಿ ಈ ಕಾರ್ಯಾಚರಣೆಯಲ್ಲಿ 7 ಮಂದಿ ಬಂಧನವಾಗುತ್ತಿದ್ದಂತೆ ದೇಶದಲ್ಲಿ ರಕ್ಷಣಾ ಇಲಾಖೆಯಲ್ಲಿರುವ ಸಿಬ್ಬಂದಿಗಳೇ ಶತ್ರುರಾಷ್ಟ್ರ ಪಾಕಿಸ್ತಾನ ಪರ ಗೂಢಚಾರಿಕೆ ಮಾಡುವುದು ಬಹಿರಂಗವಾಗಿತ್ತು.

ADVERTISEMENT

ಇದೀಗ ಈ ಪ್ರಕರಣದ ಪ್ರಮುಖ ಸಂಚುಕೋರನನ್ನು NIA ಅಧಿಕಾರಿಗಳು ಮುಂಬೈಯಲ್ಲಿ ಬಂಧಿಸಿದ್ದಾರೆ. ಈತನನ್ನು ಮುಂಬೈ ನಿವಾಸಿ ಮೊಹಮ್ಮದ್‌ ಹಾರೂನ್‌ ಹಾಜಿ ಅಬ್ದುಲ್‌ ರೆಹ್ಮಾನ್‌ ಲಕ್ಡಾವಾಲ (49) ಎಂದು ಗುರುತಿಸಲಾಗಿದೆ. ಈತ ಈ ಗೂಢಚರ್ಯೆ ದಂಧೆಯ ಹಿಂದಿದ್ದ ಪ್ರಮುಖ ಸಂಚುಕೋರ ಎಂದು NIA ತಿಳಿಸಿದೆ.

ಪಾಕಿಸ್ತಾನದ ಇಬ್ಬರು ಗೂಢಚಾರ ಸಿಬ್ಬಂದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಭಾರತೀಯ ನೌಕಾ ಸೇನೆಯ ಸಿಬ್ಬಂದಿಗಳಿಗೆ ಹಣದ ಆಮಿಷವೊಡ್ಡಿ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ಗುಪ್ತಚರ ಇಲಾಖೆಗೆ ನೀಡುತ್ತಿದ್ದ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಪಾಕಿಸ್ತಾನದ ಪರ ಉದ್ಯಮ ಆಸಕ್ತಿ ಹೊಂದಿರುವವರ ಮೂಲಕ ಇಂತಹ ರಕ್ಷಣಾ ಇಲಾಖೆಯ ಮಾಹಿತಿ ನೀಡುವವರಿಗೆ ಹಣ ಸಂದಾಯವಾಗುತ್ತಿತ್ತು.

ಬಂಧಿತರಾದ ನೌಕಾ ಸಿಬ್ಬಂದಿಗಳು ಹವಾಲಾ ಆಪರೇಟರ್‌ವೊಬ್ಬನಿಂದ ಈ ಹಣವನ್ನ ಸಂಗ್ರಹಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಇವರು ಭಾರತೀಯ ನೌಕೆಯ ಹಾಗೂ ಜಲಾಂತರ್ಗಾಮಿ ನೌಕೆಗಳ ಸಂಚಾರದ ಸಮಯ ಹಾಗೂ ಕಾರ್ಯಯೋಜನೆಯ ಬಗ್ಗೆ ಮಾಹಿತಿ ಒದಗಿಸುತ್ತಿದ್ದರು ಎನ್ನಲಾಗಿದೆ.

ಬಂಧಿತ ಹಾರೂನ್‌ ಈ ಹಿಂದೆ ಹಲವು ಬಾರಿ ಕರಾಚಿಗೆ ಭೇಟಿ ನೀಡಿರುವುದು ಕೂಡಾ NIA ಅಧಿಕಾರಿಗಳಿಗೆ ಗೊತ್ತಾಗಿದೆ. ಹೀಗೆ ಕರಾಚಿಯಲ್ಲಿ ಭೇಟಿಯಾದ ಅಕ್ಬರ್‌ ಹಾಗೂ ರಿಜ್ವಾನ್‌ ಎಂಬಿಬ್ಬರು ಪಾಕಿಸ್ತಾನ ಗೂಢಚರರ ಜೊತೆ ಸಂಪರ್ಕ ಸಾಧಿಸಿದ್ದ ಈತ, ಆನಂತರ ಭಾರತದ ನೌಕಾ ಸಿಬ್ಬಂದಿಗಳನ್ನ ಸೆಳೆದು ಅವರಲ್ಲಿ ಹಣದ ಆಮಿಷವೊಡ್ಡಿ ಮಾಹಿತಿ ಒದಗಿಸಲು ಕೇಳಿಕೊಳ್ಳುತ್ತಿದ್ದ. ಹೀಗೆ ಹಣದ ಆಮಿಷಕ್ಕೊಳಗಾದ ಸಿಬ್ಬಂದಿಗಳು ರಕ್ಷಣಾ ಇಲಾಖೆಯ ಮಾಹಿತಿಯನ್ನ ಒಂದಿಂಚೂ ಬಿಡದೇ ಪಾಕಿಸ್ತಾನಕ್ಕೆ ನೀಡುತ್ತಿದ್ದರು. ಮಾತ್ರವಲ್ಲದೇ ಜಾಲತಾಣಗಳಲ್ಲೂ ಪಾಕಿಸ್ತಾನದ ಕೆಲವರ ಜೊತೆ ನೌಕಾಸೇನೆಯ ಕೆಲವು ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌ ಹಾಗೂ ವಾಟ್ಸಾಪ್‌ ಗಳಲ್ಲಿ ಸಂಪರ್ಕದಲ್ಲಿರುವುದಾಗಿಯೂ NIA ಸ್ಪಷ್ಟಪಡಿಸಿದೆ.

“ಪಾಕಿಸ್ತಾನದ ಗೂಢಚರರು ತಮ್ಮ ಕಾರ್ಯತಂತ್ರಕ್ಕಾಗಿ ಭಾರತೀಯ ಮೂಲದ ಏಜೆಂಟ್‌ಗಳನ್ನ ನೇಮಿಸಿಕೊಳ್ಳುತ್ತಿದ್ದು, ಆ ಮೂಲಕ ನೌಕಾ ಸೇನೆ ಹಾಗೂ ಇತರೆ ರಕ್ಷಣಾ ಇಲಾಖೆಯ ಸ್ಥಳ ಗುರುತು ಹಾಗೂ ಸೂಕ್ಷ್ಮ ಮಾಹಿತಿಗಳನ್ನ ಪಾಕಿಸ್ತಾನ ಪಡೆಯುತ್ತಿದೆ” ಎಂದು NIA ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾರೂನ್‌ ಸೇರಿ ಇದುವರೆಗೆ 11 ಮಂದಿಯನ್ನ ಬಂಧಿಸಲಾಗಿದೆ. ಇದರಲ್ಲಿ ಓರ್ವ ಹವಾಲಾ ಆಪರೇಟರ್‌ ಕೂಡಾ ಸೇರಿದ್ದಾನೆ. ಮಾತ್ರವಲ್ಲದೇ ಪಾಕಿಸ್ತಾನ ಮೂಲದ ಭಾರತೀಯ ವ್ಯಕ್ತಿಯೊಬ್ಬನೂ ಬಂಧಿತರಲ್ಲಿ ಸೇರಿದ್ದವನಾಗಿದ್ದಾನೆ. ಇವರೆಲ್ಲರ ಮೇಲೂ Officials Secrets Act ಹಾಗೂ UAPA ಯಂತಹ ಕಠಿಣ ಕಾಯ್ದೆಗಳನ್ನೇ ಹಾಕಲಾಗಿದೆ.

ಬಂಧಿತ ಹಾರೂನ್‌ ನಿಂದ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿರುವ NIA ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ದೇಶದೊಳಗಿದ್ದು ಶತ್ರು ರಾಷ್ಟ್ರಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯತೆಯೂ NIA ಅಧಿಕಾರಿಗಳ ಮುಂದಿದೆ.

Tags: conspiracyNIAPakistanvishakhapattanamಎನ್‌ಐಎಗೂಢಚಾರಿಕೆಪಾಕಿಸ್ತಾನವಿಶಾಪಟ್ಟಣಂ
Previous Post

ಶಾಲಾ ತರಗತಿ ಅವಧಿಯಲ್ಲಿ ಬದಲಾವಣೆ; ಇನ್ಮುಂದೆ ನಡೆಯಲಿದೆ ಎರಡು ಪಾಳಿ ತರಗತಿ

Next Post

UPಯಲ್ಲಿ ಟ್ರಕ್ ಅಪಘಾತಕ್ಕೆ 23 ವಲಸೆ ಕಾರ್ಮಿಕರು ಬಲಿ

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
UPಯಲ್ಲಿ ಟ್ರಕ್ ಅಪಘಾತಕ್ಕೆ 23 ವಲಸೆ ಕಾರ್ಮಿಕರು ಬಲಿ

UPಯಲ್ಲಿ ಟ್ರಕ್ ಅಪಘಾತಕ್ಕೆ 23 ವಲಸೆ ಕಾರ್ಮಿಕರು ಬಲಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada