ದೇಹದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರು ಮೊದಲು ನಾಲಿಗೆಯನ್ನು ಪರೀಕ್ಷೆ ಮಾಡುತ್ತಾರೆ. ಕಾರಣ ನಾಲಿಗೆಯ ಬಣ್ಣದಲ್ಲಿ ವ್ಯತ್ಯಾಸವಾಗಿದ್ದಾಗ ಯಾವ ಸಮಸ್ಯೆ ಇರಬಹುದು ಎಂದು ಗುರುತು ಹಿಡಿಯುತ್ತಾರೆ. ಆಯುರ್ವೇದದ ಪ್ರಕಾರ ನಾಲಿಗೆಯನ್ನು ರೋಗನಿರ್ಣಯದ ಸಾಧನವೆಂದು ಪರಿಗಣಿಸಲಾಗುತ್ತದೆ.
ಮುಖ್ಯವಾಗಿ ನಾಲಿಗೆಯ ಬಣ್ಣ, ಆಕಾರ ಮತ್ತು ನಾಲಿಗೆಯ ಲೇಪನವು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಬಗ್ಗೆ ಸುಳಿವುಗಳನ್ನು ನೀಡುತ್ತದೆ.ಹಾಗಿದ್ರೆ ಯಾವ ನಾಲಿಗೆಯ ಯಾವ ಬಣ್ಣ ಯಾವ ಸಮಸ್ಯೆಯನ್ನು ಹೇಳುತ್ತದೆ.
ಆರೋಗ್ಯಕರವಾಗಿದ್ದಾಗ ನಾಲಿಗೆಯು ಸಾಮಾನ್ಯವಾಗಿ ಗುಲಾಬಿ ಬಣ್ಣದ್ದಾಗಿದ್ದು, ತೆಳುವಾದ ಬಿಳಿ ಲೇಪನವನ್ನು ಹೊಂದಿರುತ್ತದೆ.ಹಾಗು ಪ್ರತಿದಿನ ತಪ್ಪದೇ ನಾಲಿಗೆಯನ್ನು ಉಜ್ಜುವುದರಿಂದ ಕೂಡ ಆರೋಗ್ಯಕರವಾಗಿರಬಹುದು.
ಕೆಂಪು ನಾಲಿಗೆ
ಇನ್ನು ನಾಲಿಗೆಯ ಬಣ್ಣ ಕೆಂಪಾಗಿದ್ದರೆ ಜ್ವರ, ಉರಿಯೂತ, ಅಥವಾ ವಿಟಮಿನ್ ಕೊರತೆಗಳು ಅದರಲ್ಲು ಮುಖ್ಯವಾಗಿ ವಿಟಮಿನ್ B12 ಕೊರತೆ ಎಂದರ್ಥ. ಹಾಗೂ ದೇಹದಲ್ಲಿ ರಕ್ತಹೀನತೆಯಾಗಿದೆ ಎಂಬುವುದನ್ನು ಸೂಚಿಸುತ್ತದೆ.
ಬಿಳಿ ನಾಲಿಗೆ
ದೇಹದಲ್ಲಿ ರಕ್ತಹೀನತೆ ಕಂಡಾಗ,ಕಡಿಮೆ ರಕ್ತದೊತ್ತಡ, ಅಥವಾ ಕಡಿಮೆ ರಕ್ತಪರಿಚಲನೆ ಎಂದರ್ಥ ಹಾಗೂ ದೇಹದಲ್ಲಿ ವಿಟಮಿನ್ ಬಿ12 ಕಡಿಮೆಯಾದಾಗ ಅಥವಾ ಐರನ್ ಇಲ್ಲದಿದ್ದಲ್ಲಿ ನಾಲಿಗೆ ಬಿಳಿಯಾಗುತ್ತದೆ.
ಹಳದಿ ನಾಲಿಗೆ
ನಾಲಿಗೆ ಹಳದಿ ಕಟ್ಟಿದಾಗ ಲಿವರ್ ಪ್ರಾಬ್ಲಮ್, ಜೀರ್ಣಕ್ರಿಯ ಸಮಸ್ಯೆ ಅಥವಾ ಸೈನಸ್ ತೊಂದರೆ ಎಂದರ್ಥ.
ಕಪ್ಪು ಅಥವಾ ಕಂದು ನಾಲಿಗೆ
ಒರಲ್ ಹೈಜಿನ್ ಕಳಪೆಯಾಗಿದ್ದಾಗ, ಸ್ಮೋಕಿಂಗ್ ಅಥವಾ ಟೋಬಾಕವನ್ನ ಹೆಚ್ಚಾಗಿ ತೆಗೆದುಕೊಂಡಾಗ, ಗಮ್ ಡಿಸೀಸ್ ನಿಂದಲೂ ಕೂಡ ನಾಲಿಗೆಯ ಬಣ್ಣ ಕಪ್ಪಾಗುತ್ತದೆ.