ಶುಕ್ರವಾರದಂದು ಭಾರತದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆಗೆ 429ರಷ್ಟು ಹೊಸ ಪ್ರಕರಣಗಳು ಸೇರಿದ್ದು ಒಟ್ಟು ಸೋಂಕು ಪೀಡಿತರ ಸಂಖ್ಯೆ 2974 ಆಗಿದೆ. ಪೀಡಿತರಲ್ಲಿ 30 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಒಟ್ಟು 221 ಮಂದಿ ಗುಣಮುಖರಾಗಿದ್ದಾರೆ. ಇಂದು ಮತ್ತೆ ಐದು ಜನ ರೋಗಿಗಳು ಅಸುನೀಗಿದ್ದು, ಸಾವಿನ ಸಂಖ್ಯೆ 77ಕ್ಕೇರಿದೆ.
ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದ ಮಹಾರಾಷ್ಟ್ರದಲ್ಲಿ ಇಂದು ಯಾವ ಹೊಸ ಪ್ರಕರಣಗಳು ದಾಖಲಾಗದಿರುವುದು ಸಮಾಧಾನಕರ ಸಂಗತಿ. ತಮಿಳುನಾಡಿನಲ್ಲಿ 102 ಪ್ರಕರಣಗಳು ಪತ್ತೆಯಾಗಿದ್ದು ಇಂದು ಭಾರತದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಈ ಸಂಖ್ಯೆ ಅತೀ ಹೆಚ್ಚು. ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೆ 91 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಮೊತ್ತ 384 ಕ್ಕೆ ಏರಿದೆ. ನಿನ್ನೆ ಯಾವ ಪ್ರಕರಣಗಳೂ ದಾಖಲಾಗದ ತೆಲಂಗಾಣದಲ್ಲಿ 75 ಸೋಂಕಿತರು ಇಂದು ದಾಖಲಾಗಿದ್ದು ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 229 ಕ್ಕೇರಿದೆ.
ಕರ್ನಾಟಕದಲ್ಲಿ ಇಂದು ನಾಲ್ಕು ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕು ಪೀಡಿತರ ಮೊತ್ತ 128 ಕ್ಕೇರಿದೆ. ಇಂದು ಯಾವ ರೋಗಿಯು ಗುಣಮುಖರಾದ ಕುರಿತು ವರದಿಯಾಗಿಲ್ಲ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿಯೂ ಯಾವ ಬದಲಾವಣೆಗಳಿಲ್ಲ.
ಬೆಳಗಾವಿಯಲ್ಲಿ ಮೂರು ಮತ್ತು ಬಾಗಲಕೋಟೆಯಲ್ಲಿ ಒಂದು ಪ್ರಕರಣ ಸೇರಿ ಒಟ್ಟು ರಾಜ್ಯದಲ್ಲಿ ನಾಲ್ಕು ಪ್ರಕರಗಳು ದಾಖಲಾಗಿದ್ದು ಉಳಿದ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ.