ದೇಶದಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಕೂಡಾ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸುಪ್ರಿಂಕೋರ್ಟ್‌ಗೆ ತಿಳಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳಂತೆಯೇ ಡಿಜಿಟಲ್ ಮಾಧ್ಯಮಗಳ ಸುದಿಗಳು ಕೂಡಾ ವೈರಲ್ ಆಗುತ್ತಿರುವುದರಿಂದ, ಅವುಗಳ ನಿಯಂತ್ರಣವೂ ಆಗಬೇಕಿದೆ ಎಂದು ಕೇಂದ್ರ ಹೇಳಿದೆ.
Also Read: ಸುದರ್ಶನ್ ಟಿವಿ ʼUPSC ಜಿಹಾದ್ʼ ಕಾರ್ಯಕ್ರಮ: ಐಪಿಎಸ್ ಅಸೋಷಿಯೇಷನ್ ಖಂಡನೆ
ಮಾಧ್ಯಮಗಳು ದ್ವೇಷ ಹಬ್ಬಿಸುವುದನ್ನು ನಿಯಂತ್ರಿಸುವ ಸಲುವಾಗಿ ನಿಷ್ಪಕ್ಷಪಾತವಾಗಿರುವ ಸಲಹೆಗಾರ ಅಥವಾ ಸಲಹೆಗಾರರ ಸಮಿತಿಯನ್ನು ರಚಿಸಬೇಕೆಂದು ಕೇಂದ್ರ ಸುಪ್ರಿಂಕೋರ್ಟ್ ಬಳಿ ಕೇಳಿಕೊಂಡಿದೆ. “ಡಿಜಿಟಲ್ ಮಾಧ್ಯಮಗಳು ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿವೆ. ವಾಟ್ಸಾಪ್, ಟ್ವಿಟರ್ ಮತ್ತು ಫೇಸ್‌ಬುಕ್‌ಗಳನ್ನು ಉಪಯೋಗದಿಂದ ಸುದ್ದಿಗಳು ಶೀಘ್ರದಲ್ಲಿ ವೈರಲ್ ಆಗುತ್ತಿವೆ. ಡಿಜಿಟಲ್ ಮೀಡಿಯಾಗಳ ಪ್ರಭಾವ ಗಂಭೀರವಾದದ್ದು. ಕೋರ್ಟ್ ಈ ಕುರಿತಾಗಿ ಕ್ರಮ ಕೈಗೊಳ್ಳಬೇಕಿದೆ,” ಎಂದು ತನ್ನ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಟಿವಿ ಮತ್ತು ಪತ್ರಿಕೆಗಳ ನಿಯಂತ್ರಣಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಅವಕಾಶವಿಲ್ಲ. ಹಾಗಾಗಿ, ನ್ಯಾಯಾಲಯವು ಈ ಕುರಿತಾಗಿ ಕೂಡಾ ಗಮನ ಹರಿಸಬೇಕು. ಈ ವಿಚಾರಣೆ ಕೇವಲ ಸುದರ್ಶನ್ ಟಿವಿಗೆ ಮಾತ್ರ ಸೀಮಿತಗೊಳಿಸಬಾರದು,” ಎಂದು ಹೇಳಿದೆ.
ಸುದರ್ಶನ್ ಟಿವಿಯಲ್ಲಿ ಪ್ರಸಾರವಾಗಬೇಕಿದ್ದ ʼಯುಪಿಎಸ್‌ಸಿ ಜಿಹಾದ್ʼ ಕಾರ್ಯಕ್ರಮವನ್ನು ಪ್ರಸಾರವಾಗದಂತೆ ತಡೆಯಲು ಸುಪ್ರಿಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿತ್ತು.
Also Read: UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚಾಗಿ ಮುಸ್ಲಿಂ ಅಭ್ಯರ್ಥಿಗಳೇ ತೇರ್ಗಡೆಯಾಗುತ್ತಿದ್ದಾರೆ. ಇದು ಯುಪಿಎಸ್‌ಸಿ ಜಿಹಾದ್ ಎಂದು ಬಿಂಬಿಸುವ ರೀತಿಯಲ್ಲಿ ಆ ಕಾರ್ಯಕ್ರಮದ ಟ್ರೈಲರ್ ಅನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಮಾತನಾಡುವ ಸುದರ್ಶನ್ ನ್ಯೂಸ್ ಟಿವಿಯ ಸುರೇಶ್ ಚವ್ಹಾಂಕೆ, ತಮ್ಮ ಮಾತಿನ ಮಧ್ಯೆ ಜಾಮಿಯಾ ಮಿಲಿಯಾ ಯುನಿವರ್ಸಿಟಿಯಿಂದ ಬರುವಂತಹ ಜಿಹಾದಿಗಳು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಾದರೆ ಏನು ಮಾಡುತ್ತೀರಾ ಎಂಬಂತಹ ದ್ವೇಷಪೂರಿತವಾದ ಮಾತುಗಳನ್ನು ಆಡುತ್ತಾರೆ.
Also Read: ವಿವಾದಿತ ʼಯುಪಿಎಸ್‌ಸಿ ಜಿಹಾದ್ʼ ಕಾರ್ಯಕ್ರಮ ಪ್ರಸಾರಕ್ಕೆ ಹಸಿರು ನಿಶಾನೆ ನೀಡಿದ ಕೇಂದ್ರ
ಈ ಕಾರ್ಯಕ್ರಮದ ಪ್ರಸಾರಕ್ಕೆ ತಡೆ ನೀಡಿ ಆದೇಶ ಹೊರಡಿಸಿರುವ ಸುಪ್ರಿಂಕೋರ್ಟ್ ಭಾರತವು ನಾಗರಿಕತೆಗಳ, ಸಂಸ್ಕೃತಿಗಳ, ಧರ್ಮಗಳ ಮತ್ತು ಭಾಷೆಗಳ ದ್ರಾವಕ ಕೇಂದ್ರ ಎಂದ ಹೇಳಿದೆ. ಯಾವುದೇ ಧಾರ್ಮಿಕ ಸಮುದಾಯಕ್ಕೆ ಧಕ್ಕೆ ಉಂಟುಮಾಡುವಂತಹ ಪ್ರಯತ್ನವನ್ನು ಈ ನ್ಯಾಯಾಲಯವು ತೀವ್ರವಾಗಿ ಖಂಡಿಸುತ್ತದೆ, ಎಂದು ನ್ಯಾಯಾಲಯ ಹೇಳಿದೆ.