ಕರೋನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ
ಕಂದಾಯ ಸಚಿವ ಆರ್. ಅಶೋಕ್ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮತ್ತೆ ಹೇರುವುದಿಲ್ಲ ಎಂದಿದ್ದರೂ ಸರ್ಕಾರ ಮತ್ತೆ ಲಾಕ್ಡೌನ್ ಹೇರಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಲಾಕ್ಡೌನ್ ಜಾರಿಯಾಗುತ್ತದೆ ರಂಬ ಊಹಾಪೋಹ ಹರಿದಾಡುತ್ತಿದೆ, ಆ ಗೊಂದಲವನ್ನು ನಿವಾರಿಸಲು ಸ್ಪಷ್ಟೀಕರಣ ಕೊಡುತ್ತಿದ್ದೇನೆ, ಯಾವುದೇ ಕಾರಣಕ್ಕೂ ಮತ್ತೆ ಲಾಕ್ಡೌನ್ ಹೇರುವುದಿಲ್ಲ ಎಂದು ಬೆಂಗಳೂರು ಜನಪ್ರತಿನಿಧಿಗಳೊಡನೆ ನಡೆಸಿದ ಸಭೆ ಬಳಿಕ ಹೇಳಿದ್ದರು.
ಸರ್ಕಾರದ ತೀರ್ಮಾನಗಳು ಹಲವು ಗೊಂದಲಗಳನ್ನು ಸೃಷ್ಟಿಸುತ್ತಿದೆ. ಕಳೆದ ಮೇ 24 ರಂದು ಪ್ರತಿ ಭಾನುವಾರವೂ ಲಾಕ್ಡೌನ್ ಹೇರಲಾಗುವುದು ಎಂದು ಹೇಳಿದ್ದ ಸರ್ಕಾರ ನಂತರ ಅದನ್ನು ಕೈ ಬಿಟ್ಟಿತ್ತು. ಈಗ ಮತ್ತೆ ಲಾಕ್ಡೌನ್ ಹೇರಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಮಾತನಾಡಿದ ಸಚಿವ ಆರ್. ಅಶೋಕ್ ಅಂತಿಮ ನಿರ್ಧಾರಗಳೆಲ್ಲವೂ ಮುಖ್ಯಮಂತ್ರಿಯವರದ್ದೇ ಎಂದು ಹೇಳಿದ್ದಾರೆ.