ಜೂನ್ 13 ರಸಂಜೆ 5 ಗಂಟೆಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ರಾಜ್ಯದಲ್ಲಿ 308 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ 308 ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 6,824 ತಲುಪಿದೆ. ಇದುವರೆಗೂ 3,648 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 81 ತಲುಪಿದೆ. ಸಕ್ರಿಯವಾಗಿರುವ 3092 ಪ್ರಕರಣದಲ್ಲಿ 15 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಒಟ್ಟು ಪ್ರಕರಣದಲ್ಲಿ 208 ಪ್ರಕರಣಗಳು ಅಂತರಾಜ್ಯ ಮೂಲದಿಂದ ಬಂದವು. 25 ಪ್ರಕರಣಗಳು ಅಂತರಾಷ್ಟ್ರೀಯ ಪ್ರಯಾಣದ ಹಿನ್ನಲೆ ಹೊಂದಿದೆ. ರಾಜ್ಯದಲ್ಲಿ ಇದುವರೆಗೂ 4,36,518 ಮಂದಿಯನ್ನು ಪರೀಕ್ಷಿಸಲಾಗಿದೆ.
ದೇಶಾದ್ಯಂತ 10,956 ಹೊಸ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3 ಲಕ್ಷದ 9 ಸಾವಿರ ದಾಟಿದೆ. ಸರಿ ಸುಮಾರು ಅರ್ಧದಷ್ಟು ಕರೋನಾ ಪ್ರಕರರಣಗಳಲ್ಲಿ ಸೋಂಕು ಸಂಪೂರ್ಣ ನಿವಾರಣೆಯಾಗಿದೆ. ಇದುವರೆಗೂ ದೇಶದಲ್ಲಿ 8,884 ರೋಗಿಗಳು ಕರೋನಾದಿಂದಾಗಿ ಸಾವನ್ನಪ್ಪಿದ್ದಾರೆ.