ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಕೋವಿಡ್ ಕೇಂದ್ರದಿಂದ ಮುಂಬೈ ತಲೋಜಾ ಜೈಲಿಗೆ ಸ್ಥಳಾಂತರಿಸಿದ್ದಾರೆ. ಅಲಿಬಾಗ್ ಖೈದಿಗಳ ಕೋವಿಡ್ ಕೇಂದ್ರದಲ್ಲಿದ್ದ ಅರ್ನಾಬ್ ಅನಧಿಕೃತವಾಗಿ ಮೊಬೈಲ್ ಬಳಸಿದ ಹಿನ್ನಲೆಯಲ್ಲಿ ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Also Read: ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?
ಇಂಟೀರಿಯರ್ ಡಿಸೈನರ್ ಹಾಗೂ ಅವರ ತಾಯಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಲ್ಲೋರ್ವನಾಗಿರುವ ಅರ್ನಾಬ್ ರನ್ನು ವರ್ಲಿಯಲ್ಲಿರುವ ಅವರ ನಿವಾಸದಿಂದ ಬುಧವಾರ ಪೊಲೀಸರು ಬಂಧಿಸಿದ್ದರು.
Also Read: ಮತ್ತೆ ಸಂಕಷ್ಟದಲ್ಲಿ Republic Tv ಮುಖ್ಯಸ್ಥ ಅರ್ನಬ್ ಗೋಸ್ವಾಮಿ.!
ಶುಕ್ರವಾರ ತಡರಾತ್ರಿ, ಗೋಸ್ವಾಮಿ ಯಾರದೋ ಮೊಬೈಲ್ ಫೋನ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆಂದು ನಾವು ತಿಳಿದುಕೊಂಡಿದ್ದೇವೆ. ಬುಧವಾರ ಅವರನ್ನು ಬಂಧಿಸಿದಾಗ ನಾವು ಅವರ ವೈಯಕ್ತಿಕ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದೆವು. ಪ್ರಕರಣದ ತನಿಖಾ ಅಧಿಕಾರಿಯಾಗಿ ನಾನು ಅಲಿಬಾಗ್ ಜೈಲು ಅಧೀಕ್ಷಕರಿಗೆ ಪತ್ರ ಬರೆದು, ಅವರು ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಹೇಗೆ ಪಡೆದರು ಎಂಬ ಬಗ್ಗೆ ತನಿಖಾ ವರದಿಯನ್ನು ಕೋರಿದ್ದೇನೆ. ನಂತರ ನಾವು ಅವರನ್ನು ಭಾನುವಾರ ಬೆಳಿಗ್ಗೆ ತಾಲೋಜ ಜೈಲಿಗೆ ಸ್ಥಳಾಂತರಿಸಲು ನಿರ್ಧರಿಸಿದೆವು ಎಂದು ತನಿಖಾಧಿಕಾರಿ ಜಾಮಿಲ್ ಶೇಖ್ ಹೇಳಿದ್ದಾರೆ.
Also Read: ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ತಲೋಜಾ ಹೈಲಿಗೆ ಸ್ಥಳಾಂತರಿಸುವಾಗ, ಅಲಿಬಾಗ್ ಜೈಲರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಅರ್ನಾಬ್ ಕೂಗಿದ್ದಾರೆ. ಪೊಲೀಸ್ ವ್ಯಾನ್ ಒಳಗಡೆಯಿಂದ ಕೂಗಿರುವ ಅರ್ನಾಬ್ ತನ್ನ ಜೀವಕ್ಕೆ ಅಪಾಯವಿದೆ, ದಯವಿಟ್ಟು ನ್ಯಾಯಾಲಯಗಳಿಗೆ ಹೇಳಿ ಸಹಾಯ ಮಾಡಿ ಎಂದು ಕಿರುಚಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Also Read: ಅರ್ನಾಬ್ ಬಂಧನಕ್ಕೆ 40 ಮಂದಿಯ ತಂಡ ರಚಿಸಿದ್ದ ಮಹಾರಾಷ್ಟ್ರ ಗೃಹ ಇಲಾಖೆ