• Home
  • About Us
  • ಕರ್ನಾಟಕ
Thursday, December 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ನಿಯಂತ್ರಣಕ್ಕೆ ʼಕಮ್ಯುನಿಸ್ಟ್ʼ ಸರ್ಕಾರ ಕೇರಳಕ್ಕೆ ವರವಾಯಿತೇ?

by
April 18, 2020
in ದೇಶ
0
ಕರೋನಾ ನಿಯಂತ್ರಣಕ್ಕೆ ʼಕಮ್ಯುನಿಸ್ಟ್ʼ ಸರ್ಕಾರ ಕೇರಳಕ್ಕೆ ವರವಾಯಿತೇ?
Share on WhatsAppShare on FacebookShare on Telegram

ಇಡೀ ವಿಶ್ವವೇ ಕರೋನಾ ಸೋಂಕಿನಿಂದ ತತ್ತರಿಸಲು ಕಾರಣವಾದ ಚೀನಾ ದೇಶ ನಂತರದಲ್ಲಿ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಜಾಗತಿಕ ಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿದ್ದರೆ, ಭಾರತದಲ್ಲಿ ಮೊಟ್ಟ ಮೊದಲ ಕರೋನಾ ಸೋಂಕು ಕಾಣಿಸಿಕೊಂಡ ದೇವರ ನಾಡು ಕೇರಳ ಕೂಡ ಅದೇ ರೀತಿ ಸೋಂಕು ನಿಯಂತ್ರಿಸುವಲ್ಲಿ ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಿದೆ. ಆದರೆ, ಇತರೆ ರಾಷ್ಟ್ರಗಳು ಮತ್ತು ಭಾರತದ ಇತರೆ ರಾಜ್ಯಗಳು ಇನ್ನೂ ಸೋಂಕು ತಡೆಗೆ ಪರದಾಡುತ್ತಲೇ ಇದೆ…!

ADVERTISEMENT

ಹೌದು, ಕೋವಿಡ್-19 ಅರ್ಥಾತ್ ಕರೋನಾ ಹಾವಳಿ ನಿಯಂತ್ರಣದಲ್ಲಿ ಚೀನಾ ಮತ್ತು ಕೇರಳ ಕೈಗೊಂಡ ಕ್ರಮಗಳು, ಸರ್ಕಾರ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ತೆಗೆದುಕೊಂಡ ಕಠಿಣ ನಿಲುವುಗಳು ಇಡೀ ಜಗತ್ತನ್ನೇ ಅಚ್ಚರಿಗೆ ತಳ್ಳಿದೆ. ವುಹಾನ್ ಸೇರಿದಂತೆ ಚೀನಾದಲ್ಲಿ ಕರೋನಾ ಹಬ್ಬಿದ ವೇಗ ಮತ್ತು ಸೋಂಕಿಗೆ ತುತ್ತಾಗಿ ಮೃತಪಟ್ಟವರ ಲೆಕ್ಕವನ್ನು ಚೀನಾ ಮರೆಮಾಚಿದೆ ಎಂಬ ಆರೋಪಗಳು ಇವೆಯಾದರೂ ಸೋಂಕು ತಡೆಗಟ್ಟಲು ಮತ್ತು ನಿಯಂತ್ರಣದಲ್ಲಿ ಆ ರಾಷ್ಟ್ರ ಮಾಡಿದ ಸಾಧನೆ ಕಡಿಮೆ ಏನೂ ಅಲ್ಲ. ಅದೇ ರೀತಿ ಭಾರತದಲ್ಲಿ ಮೊಟ್ಟ ಮೊದಲ ಕರೋನಾ ಕಾಣಿಸಿಕೊಂಡ ಮತ್ತು ಆರಂಭದಲ್ಲಿ ಅತಿ ವೇಗವಾಗಿ ಸೋಂಕು ಹರಡಲಾರಂಭಿಸಿದ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಪ್ರಸ್ತುತ ಪ್ರತಿನಿತ್ಯ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿರುವುದು ಮತ್ತು ಗುಣಮುಖರಾಗುತ್ತಿರುವವರ ಸಂಖ್ಯೆ ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿದೆ. ಇದರ ಹಿಂದೆ ಆ ರಾಜ್ಯ ಸರ್ಕಾರ ಮಾಡಿದ ಪ್ರಯತ್ನ ಕಮ್ಮಿಯೇನೂ ಅಲ್ಲ.

ಚೀನಾಕ್ಕಿಂತ ವೈದ್ಯಕೀಯವಾಗಿ ಹೆಚ್ಚು ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳು ಸೋಂಕು ತಮ್ಮ ದೇಶಕ್ಕೆ ಬಂದು ಜನರಿಗೆ ಹಬ್ಬುವವರೆಗೂ ನಿರ್ಲಕ್ಷ್ಯ ವಹಿಸಿ ಈಗ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿಂದೆ ಸಾಕಷ್ಟು ಊಹಾಪೋಹಗಳು, ದಿನಕ್ಕೊಂದು ಕಥೆಗಳು ಸೃಷ್ಟಿಯಾಗುತ್ತಲೇ ಇದೆ. ಆದರೆ, ಚೀನಾದಲ್ಲಿ ಸೋಂಕು ತಡೆಗಟ್ಟಲು ಕೈಗೊಂಡ ಕ್ರಮಗಳು ಯಶಸ್ವಿಯಾಗಿ ಜಾರಿಗೊಂಡಿದ್ದು ಮಾತ್ರ ಸುಳ್ಳಲ್ಲ. ಅದೇರೀತಿ ಕೇರಳದಲ್ಲೂ ಸೋಂಕು ಹರಡುವುದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಜಾರಿಗೊಳಿಸುವ ವಿಚಾರದಲ್ಲೂ ಅಷ್ಟೇ ಕಠಿಣ ನಿಲುವು ಅನುಸರಿಸಿದ್ದರಿಂದ ಅಲ್ಲಿಯೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಸೋಂಕಿನ ಕುರಿತ ಅಂಕಿ-ಸಂಕಿಗಳೇ ಇದನ್ನು ಸಾಬೀತುಪಡಿಸುತ್ತವೆ.

ಕಮ್ಯುನಿಸ್ಟ್ ಸರ್ಕಾರವಿದ್ದುದೇ ಕೇರಳಕ್ಕೆ ವರವಾಯಿತು!

ಭಾರತದ ಮಟ್ಟಿಗೆ ಹೇಳುವುದಾದರೆ ದೇವರ ನಾಡು ಕೇರಳ. ದೇಶದಲ್ಲೇ ಮೊಟ್ಟ ಮೊದಲ ಕರೋನಾ ಸೋಂಕು ಕಾಣಿಸಿಕೊಂಡಿದ್ದು ಈ ರಾಜ್ಯದಲ್ಲಿ. ಅಷ್ಟೇ ಅಲ್ಲ, ಅದು ವೇಗವಾಗಿ ಹರಡಲಾರಂಭಿಸಿದ್ದು ಕೂಡ ಇದೇ ರಾಜ್ಯದಲ್ಲಿ. ಇದುವರೆಗೆ 396 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 255 ಮಂದಿ ಗುಣಮುಖರಾಗಿದ್ದಾರೆ. ಆದರೆ, ದೇಶದಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣ ಮತ್ತು ಅತಿ ಹೆಚ್ಚು ಚೇತರಿಕೆಯ ಪ್ರಮಾಣ ಇದಾಗಿದೆ.

ಕೋವಿಡ್ ಗೆ ಬಲಿಯಾದವರ ಸರಾಸರಿ ಜಾಗತಿಕವಾಗಿ ಶೇ. 5.75 ಇದ್ದರೆ, ಭಾರತದ ಸರಾಸರಿ ಶೇ. 2.83, ಕೇರಳದ ಸರಾಸರಿ ಶೇ,. 0.58 ಮಾತ್ರ. ಜನಸಂಖ್ಯೆ ಆಧರಿಸಿದ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಂಡ, ಪ್ಲಾಸ್ಮಾ ಚಿಕಿತ್ಸಾ ಪದ್ಧತಿ ಅಳವಡಿಸಿಕೊಂಡ ಮೊದಲ ರಾಜ್ಯ ಹೀಗೆಲ್ಲಾ ಹಲವು ಪ್ರಥಮಗಳಿಗೆ ಕಾರಣವಾದ ಕೇರಳ ಸೋಂಕು ತಡೆಗಟ್ಟಲು ಮತ್ತು ಚಿಕಿತ್ಸೆಗೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ವೈದ್ಯಕೀಯವಾಗಿ ಕೈಗೊಂಡ ಕ್ರಮಗಳು, ವಲಸಿಗರು, ಕಾರ್ಮಿಕರಿಗೆ ನೆರವು, ಜನರಿಗೆ ಪ್ಯಾಕೇಜ್, ಪಡಿತರ ವಿತರಣೆ, ಲಾಕ್ ಡೌನ್ ಸನ್ನಿವೇಶದಲ್ಲಿ ಪರಿಣಾಮಕಾರಿ ಸಂವಹನಕ್ಕಾಗಿ ಅಂತರ್ಜಾಲ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದು ಹೀಗೆ ಆಡಳಿತಾತ್ಮಕವಾಗಿ ಹಲವು ಪ್ರಮುಖ ನಿರ್ದಾರ ಕೈಗೊಂಡಿತು. ಸ್ವತಃ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರತಿ ದಿನವೂ ಸ್ಥಿತಿಗತಿಗಳ ಅವಲೋಕನ ನಡೆಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿತ್ತು.

ಇದೆಲ್ಲಕ್ಕಿಂತ ಮುಖ್ಯವಾಗಿ ಲಾಕ್‌ಡೌನ್ ಜಾರಿಗೊಳಿಸಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ದೇಶದಲ್ಲೇ ಮೊದಲ ಬಾರಿ ಸಾಂಕ್ರಾಮಿಕ ಸೊಂಕು ತಡೆ ಕಾಯ್ದೆ ರೂಪಿಸಿದ ಕೇರಳ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತು. ಯಾರಾದರೂ ಕರೋನಾ ಸೋಂಕು ಇರುವುದನ್ನು ಮುಚ್ಚಿಟ್ಟು ಬೇರೆಯವರಿಗೆ ಹರಡಿದ್ದು ಕಂಡುಬಂದರೆ ಅಂಥವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಕಾಯ್ದೆಯನ್ನು ಮುಂದಿಟ್ಟುಕೊಂಡು ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಈ ಕಠಿಣ ಕ್ರಮಗಳನ್ನು ವಿರೋಧಿಸಿದವರನ್ನು ಮುಲಾಜಿಲ್ಲದೆ ಮಟ್ಟ ಹಾಕಿತು.

ಭಾರತದಲ್ಲಿ ಇಂದು ಕರೋನಾ ಸೋಂಕು ಹೆಚ್ಚು ಮಂದಿಗೆ ಹರಡಲು ಪ್ರಮುಖ ಕಾರಣವಾಗಿರುವುದು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡ ತಬ್ಲಿಘಿಗಳು ಮತ್ತು ದುಬೈ ರಾಷ್ಟ್ರದಿಂದ ಹಿಂದಿರುಗಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರು. ಕೇರಳದಲ್ಲಿ ತಬ್ಲಿಘಿಗಳ ಪ್ರಮಾಣ ಕಡಿಮೆಯಾಗಿದ್ದರೂ ದುಬೈನಿಂದ ಹಿಂತಿರುಗಿದವರ ಪ್ರಮಾಣ ಹೆಚ್ಚಾಗಿತ್ತು. ತಬ್ಲಿಘಿಗಳು ಮತ್ತು ದುಬೈನಿಂದ ಹಿಂತಿರುಗಿದವರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿರುವವರು ದೇಶದೆಲ್ಲಡೆ ಪರೀಕ್ಷೆಗೆ ನಿರಾಕರಿಸುತ್ತಿದ್ದರೆ ಸರ್ಕಾರಗಳು ಅವರಲ್ಲಿ ಕೈಮುಗಿದು ಚಿಕಿತ್ಸೆಗೆ ಸಹಕರಿಸಿ ಎಂದು ಕೇಳಿಕೊಳ್ಳುತ್ತಿದ್ದವು. ಆದರೆ, ಅವರು ಸ್ಪಂದಿಸುತ್ತಿರಲಿಲ್ಲ. ಆದರೆ, ಕೇರಳದಲ್ಲಿ ಆ ರೀತಿಯ ಅನುಮಾನ ಬಂದ ಕೂಡಲೇ ಮುಲಾಜಿಲ್ಲದೆ ಬಲವಂತವಾಗಿ ಇಲ್ಲವೇ ಶಕ್ತಿ ಪ್ರದರ್ಶನದ ಮೂಲಕ ಕ್ವಾರಂಟೈನ್ ಗೆ ಒಳಪಡಿಸುವ ಮತ್ತು ಪರೀಕ್ಷೆಗೆ ಒಳಪಡಿಸುವ ಕೆಲಸ ನಡೆಯುತ್ತಿತ್ತು. ಮಾಧ್ಯಮಗಳು ಕೂಡ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದರಿಂದ ಸರ್ಕಾರದ ನಿಲುವುಗಳಿಗೆ ಇಂಥ ಜನರ ವಿರೋಧ ಬಹಿರಂಗವಾಗಲೇ ಇಲ್ಲ. ಮೇಲಾಗಿ ಕಮ್ಯುನಿಸ್ಟ್ ಆಡಳಿತ ಇದ್ದುದರಿಂದ ಸಮುದಾಯಗಳು ಕೂಡ ಸರ್ಕಾರದ ವಿರುದ್ಧ ಸೊಲ್ಲೆತ್ತಲಿಲ್ಲ. ಇದರ ಪರಿಣಾಮ ಕರೋನಾ ನಿಯಂತ್ರಣ ವಿಚಾರದಲ್ಲಿ ಕೇರಳ ದೇಶಕ್ಕೇ ಮಾದರಿ ಎನ್ನುವಂತಾಗಿದೆ.

ಆದರೆ, ದೇಶದ ಇತರೆ ರಾಜ್ಯಗಳಲ್ಲಿ ಕೇರಳದಂತಹ ಪರಿಸ್ಥಿತಿ ಇಲ್ಲ. ಲಾಕ್‌ಡೌನ್ ನಿರ್ಬಂಧಗಳ ಜಾರಿಗೆ ಸರ್ಕಾರಗಳು ಕಠಿಣ ಕ್ರಮ ಕೈಗೊಂಡರೂ ಅದಕ್ಕೆ ಕೋಮು ಬಣ್ಣ ಕಟ್ಟಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿದೆ. ಕರೋನಾ ಸೋಂಕಿಗೆ ಮುಸ್ಲಿಮರನ್ನು ಬಲಿಪಶು ಮಾಡುವ ಮೂಲಕ ಕೋಮು ಬಣ್ಣ ಕಟ್ಟಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇನ್ನು ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ಕಡೆ ಎಲ್ಲಿ ತಮ್ಮ ಮತಬ್ಯಾಂಕ್ ಗೆ ಪೆಟ್ಟು ಬೀಳುವುದೋ ಎಂಬ ಕಾರಣಕ್ಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸೋಂಕು ಹರಡುವುದನ್ನು ತಡೆಗಟ್ಟಲು ಪರದಾಡುವಂತಾಗಿದೆ.

ಚೀನಾದಲ್ಲಿ ಗೊಂದಲ ಬಗೆಹರಿದಿಲ್ಲವಾದರೂ ಸೋಂಕು ನಿಯಂತ್ರಣಕ್ಕೆ ಬಂದಿದೆ

ಕರೋನಾ ವೈರಸ್‌ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವುಹಾನ್‌ ನಗರದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ವಿವರಗಳನ್ನು ಚೀನಾ ಪರಿಷ್ಕರಣೆ ಮಾಡಿರುನವುದರಿಂದ ಮೃತರ ಸಂಖ್ಯೆ ಏಕಾಏಕಿಶೇ. 50ರಷ್ಟು ಏರಿಕೆಯಾಗಿದೆ. ಅಂದರೆ, ಈ ಹಿಂದೆ 3863 ಇದ್ದ ಮೃತರ ಸಂಖ್ಯೆ ಈಗ 4,636ಕ್ಕೇರಿದೆ. ಈ ಮಧ್ಯೆ ಕರೋನಾ ಸೋಂಕು ಕಾಣಿಸಿಕೊಂಡ ಬಳಿಕ ಚೀನಾದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 2.15 ಕೋಟಿಯಷ್ಟು ಕುಸಿದಿದೆ. ಲ್ಯಾಂಡ್ ಲೈನ್ ಬಳಕೆದಾರರ ಸಂಖ್ಯೆಯೂ 84 ಲಕ್ಷದಷ್ಟು ಕುಸಿತ ಕಂಡಿದೆ. ವಲಸಿಗರು ಸಿಮ್ ತೆಗೆದಿರುವುದರಿಂದ ಈ ಕುಸಿತ ಕಂಡುಬಂದಿದೆ ಎಂದು ಇದಕ್ಕೆ ಚೀನಾ ಸಮರ್ಥನೆ ನೀಡುತ್ತಿದ್ದರೂ ಕರೋನಾದಿಂದಾಗಿ ಆಗಿರುವ ಸಾವಿನ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ. ಇದು 2.15 ಕೋಟಿ ಅಲ್ಲದೇ ಇದ್ದರೂ ಸಾಕಷ್ಟು ಸಾವಿನ ಪ್ರಕರಣಗಳನ್ನು ಆ ರಾಷ್ಟ್ರ ಬಹಿರಂಗಪಡಿಸಿಲ್ಲ ಎಂಬುದರ ಬಗ್ಗೆ ಅಲ್ಲಿನ ಜನರೇ ವೀಡಿಯೋ, ಮತ್ತಿತರ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ವಿಚಾರ ಒತ್ತಟ್ಟಿಗಿರಲಿ. ಆ ರಾಷ್ಟ್ರದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದಂತೂ ಸುಳ್ಳಲ್ಲ. ಅಲ್ಲಿ ಅಧಿಕಾರದಲ್ಲಿರುವುದು ಕೂಡ ಕಮ್ಯುನಿಸ್ಟ್ ಸರ್ಕಾರ.

Also Read: ʼಕೇರಳ ಮಾದರಿʼ ಮಧ್ಯೆ ದೇವರ ನಾಡನ್ನ ಕ್ರಮಿಸಿ ಬಂದ ತುಂಬು ಗರ್ಭಿಣಿ!

Tags: Chinacommunist partyCovid 19KeralaLDFಎಡರಂಗಕಮ್ಯನಿಸ್ಟ್‌ ಪಕ್ಷಕೇರಳಕೋವಿಡ್-19ಚೀನಾ
Previous Post

ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯೊಂದಿಗೆ ಚರ್ಚಿಸದೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆಯೇ ಮೋದಿ ಸರ್ಕಾರ?

Next Post

ಲಾಕ್‌ಡೌನ್ ಸಡಿಲಿಕೆ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ!

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ಲಾಕ್‌ಡೌನ್ ಸಡಿಲಿಕೆ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ!

ಲಾಕ್‌ಡೌನ್ ಸಡಿಲಿಕೆ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ!

Please login to join discussion

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ
Top Story

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada