ಇಂದು ಇಡೀ ವಿಶ್ವವನ್ನೇ ಭಾದಿಸುತ್ತಿರುವ ಕೋವಿಡ್-19 ಸೋಂಕಿಗೆ ಭಾರತೀಯ ಮೂಲದ ʼಹೈಡ್ರಾಕ್ಸಿಕ್ಲೋರೋಕ್ವಿನ್ʼ ಮಾತ್ರೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕೋವಿಡ್-19ಗೆ ನಿರ್ದಿಷ್ಟವಾಗಿ ಇನ್ನೂ ಔಷಧಿ ಕಂಡು ಹಿಡಿದಿಲ್ಲವಾದರೂ ಸದ್ಯಕ್ಕೆ ಲಭ್ಯವಿರುವ ಔಷಧಿಗಳಲ್ಲಿ ಇದು ಪರಿಣಾಮಕಾರಿ ಆಗಿದೆ ಎಂದು ವಿಶ್ವದ ಅನೇಕ ದೇಶಗಳಲ್ಲಿ ವೈದ್ಯರು ಇದನ್ನೇ ಶಿಫಾರಸು ಮಾಡುತಿದ್ದಾರೆ. ಇದನ್ನು ಸರಬರಾಜು ಮಾಡಲು ವಿಶ್ವದ ಕನಿಷ್ಟ 30 ದೇಶಗಳು ಭಾರತಕ್ಕೆ ದುಂಬಾಲು ಬಿದ್ದಿವೆ.
ಈ ಔಷಧದ ಹಿಂದಿದೆ ಬರೋಬ್ಬರಿ 120ವರ್ಷಗಳಿಗೂ ಹೆಚ್ಚಿನ ಕುತೂಹಲಕಾರಿ ರೋಚಕ ಇತಿಹಾಸ. 1799ರಲ್ಲಿ, ಟಿಪ್ಪು ಸುಲ್ತಾನ ನನ್ನು ಬ್ರಿಟಿಷರು ಸೋಲಿಸಿದಾಗ, ಇಡೀ ಮೈಸೂರು ಸಾಮ್ರಾಜ್ಯವು ಬ್ರಿಟಿಷರ ನಿಯಂತ್ರಣಕ್ಕೆ ಬಂದಿತು. ಮುಂದಿನ ಕೆಲವು ದಿನಗಳವರೆಗೆ, ಬ್ರಿಟಿಷ್ ಸೈನಿಕರು ತಮ್ಮ ವಿಜಯೋತ್ಸವದ ಆಚರಣೆಯಲ್ಲಿ ತೊಡಗಿದರು. ಆದರೆ ಕೆಲ ವಾರಗಳು ಕಳೆಯುತಿದ್ದಂತೆಯೇ ಹಲವು ಸೈನಿಕರು ಮಲೇರಿಯಾದಿಂದ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು. ಏಕೆಂದರೆ ಶ್ರೀರಂಗಪಟ್ಟಣವು ತೀವ್ರ ಸೊಳ್ಳೆಗಳ ಕಾಟದಿಂದ ಕೂಡಿದ ಜವುಗು ಪ್ರದೇಶವಾಗಿತ್ತು.
ಸ್ಥಳೀಯ ಭಾರತೀಯ ಜನತೆಯು ಸ್ವಯಂ ರೋಗನಿರೋಧಕ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಬಹುಶಃ ಭಾರತೀಯರು ಬಳಸುತಿದ್ದ ಮಸಾಲೆಯುಕ್ತ ಆಹಾರ ಪದ್ಧತಿಗಳು ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿರಬಹುದು. ಭಾರತೀಯ ಸೈನಿಕರು ಮತ್ತು ಅಧಿಕಾರಿಗಳು ಇದ್ದಕ್ಕಿದ್ದಂತೆ ಕಠಿಣ ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಂಡರು. ಆದರೆ ಬ್ರಿಟಿಷ್ ಸೈನಿಕರಿಗೆ ಇದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ.
ಸೊಳ್ಳೆ ಕಾಟದಿಂದ ಪಾರಾಗಲು ಬ್ರಿಟಿಷ್ ಸೈನ್ಯವು ತಕ್ಷಣವೇ ತಮ್ಮ ಕ್ಯಾಂಪ್ನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಿತು. ಆ ಪ್ರದೇಶವೇ ಇಂದಿನ ಬೆಂಗಳೂರು ಕಂಟೋನ್ಮೆಂಟ್ ಏರಿಯಾ ಆಗಿದೆ. ಆದರೆ ಮಲೇರಿಯಾ ಸಮಸ್ಯೆ ಇನ್ನೂ ಮುಂದುವರೆಯಿತು. ಏಕೆಂದರೆ ಬೆಂಗಳೂರು ಕೂಡ ಸೊಳ್ಳೆಗಳಿಗೆ ಹೊರತಾಗಿರಲಿಲ್ಲ. ಅದೇ ಸಮಯದಲ್ಲಿ, ಯುರೋಪಿಯನ್ ವಿಜ್ಞಾನಿಗಳು ಮಲೇರಿಯಾ ಚಿಕಿತ್ಸೆಗಾಗಿ ಬಳಸಬಹುದಾದ “ಕ್ವಿನೈನ್” ಎಂಬ ರಾಸಾಯನಿಕ ಸಂಯೋಜನೆಯ ಟಾನಿಕ್ ನ್ನು ಕಂಡುಹಿಡಿದಿದ್ದರು ಮತ್ತು ನಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದರು, ಆದರೆ ಇದನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸಲಾಗಿರಲಿಲ್ಲ. ಅನಿವಾರ್ಯವಾಗಿ ಬ್ರಿಟಿಷ್ ಸೈನ್ಯವು ಈ ಸಮಯದಲ್ಲಿ ʼಕ್ವಿನೈನ್ʼ ಅನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡಿತು. ಮತ್ತು ಎಲ್ಲಾ ಸೈನಿಕರಿಗೆ ವಿತರಿಸಲಾಯಿತು. ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಯಮಿತವಾಗಿ ಡೋಸೇಜ್ಗಳನ್ನು(ಆರೋಗ್ಯವಂತ ಸೈನಿಕರಿಗೆ ಸಹ) ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಭಾರತದ ಎಲ್ಲ ಪ್ರದೇಶಗಳಲ್ಲಿ ಇದನ್ನು ಬ್ರಿಟಿಷ್ ಸೈನಿಕರಿಗೆ ಹಂಚಲಾಯಿತು. ಏಕೆಂದರೆ ಎಲ್ಲ ಪ್ರದೇಶಕ್ಕೂ ಸ್ವಲ್ಪ ಮಟ್ಟಿಗೆ ಮಲೇರಿಯಾ ಸಮಸ್ಯೆ ಇತ್ತು.
ಆದರೆ ಒಂದು ಸಣ್ಣ ಸಮಸ್ಯೆ ಇತ್ತು. ಅನಾರೋಗ್ಯದದಿಂದಿದ್ದ ಸೈನಿಕರು ಶೀಘ್ರವಾಗಿ ಚೇತರಿಸಿಕೊಂಡರೂ, ಉಷ್ಣವಲಯದ ಭಾರತದ ಹವಾಗುಣಕ್ಕೆ ಹೊಂದಿಕೊಳ್ಳಲಾಗದೆ ಇನ್ನೂ ಅನೇಕ ಸೈನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಏಕೆಂದರೆ ಅವರು ʼಕ್ವಿನೈನ್ʼ ಔಷಧವನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿಲ್ಲ ಎಂದು ನಂತರ ತಿಳಿದು ಬಂತು. ಏಕೆ ಗೊತ್ತೆ? ಏಕೆಂದರೆ ಅದು ತುಂಬಾ ಕಹಿಯಾಗಿತ್ತು!!. ಆದ್ದರಿಂದ, ಕಹಿಯಾದ ʼಕ್ವಿನೈನ್ʼ ಸೇವಿಸದಿರುವ ಮೂಲಕ, ಭಾರತದಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್
ಸೈನಿಕರು ತಮ್ಮ ರೋಗನಿರೋಧಕ ಶಕ್ತಿ ಕಡಿಮೆ ಮಾಡಿಕೊಂಡಿದ್ದರು.
ನಂತರ ಎಲ್ಲಾ ಉನ್ನತ ಬ್ರಿಟಿಷ್ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತಮ್ಮ ಸೈನಿಕರಿಗೆ ಈ ಡೋಸೇಜ್ಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ಮನವೊಲಿಸತೊಡಗಿದರು. ಆಗ ಮದ್ಯದೊಂದಿಗೆ ಬೆರೆಸಿದ ಕಹಿಯಾದ ʼಕ್ವಿನೈನ್ʼ ಸ್ವಲ್ಪ ಮಟ್ಟಿಗೆ ಸಿಹಿಯಾಗುವುದು ಅವರ ಅನುಭವಕ್ಕೆ ಬಂತು. ಆಗ ʼಕ್ವಿನೈನ್ʼನೊಂದಿಗೆ ಬೆರೆಸಿ ಸೇವಿಸುತಿದ್ದ ಮದ್ಯವು ʼಜಿನ್ʼ ಆಗಿತ್ತು. ಮತ್ತು ʼಕ್ವಿನೈನ್ʼ ನೊಂದಿಗೆ ಬೆರೆಸಿದ ಜಿನ್ ಅನ್ನು “ಜಿನ್ ಟಾನಿಕ್” ಎಂದು ಕರೆಯಲಾಯಿತು, ಬ್ರಿಟಿಷ್ ಸೈನಿಕರು ಹಿಂಜರಿಕೆ ಇಲ್ಲದೆ ಇದನ್ನು ಸೇವಿಸಲು ಅರಂಬಿಸಿದರು.
ನಂತರ ಬ್ರಿಟಿಷ್ ಸೈನ್ಯವು ತಮ್ಮ ಮಾಸಿಕ ಪಡಿತರ ಭಾಗವಾಗಿ “ಟಾನಿಕ್ ವಾಟರ್” (ಕ್ವಿನೈನ್) ಜೊತೆಗೆ ಕೆಲವು ಬಾಟಲಿ ಜಿನ್ಗಳನ್ನು ವಿತರಿಸಲು ಪ್ರಾರಂಭಿಸಿತು. ಬ್ರಿಟಿಷ್ ಸೈನಿಕರಲ್ಲಿ ಹೆಚ್ಚುತ್ತಿರುವ ಜಿನ್ ಮತ್ತು ಇತರ ರೀತಿಯ ಮದ್ಯದ ಬೇಡಿಕೆಯನ್ನು ಪೂರೈಸಲು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ ಕೆಲವು ಡಿಸ್ಟಿಲ್ಲರಿಗಳನ್ನು ನಿರ್ಮಿಸಿತು. ನಂತರ ಅದನ್ನು ದೇಶದ ಇತರ ಭಾಗಗಳಿಗೆ ಸರಬರಾಜು ಮಾಡಲು ಆರಂಭಿಸಿತು. ಬೆಂಗಳೂರು ಭಾರತದ ಪಬ್ ರಾಜಧಾನಿಯಾಗಿ ಬ್ರಿಟಿಷ್ ಕಾಲದಲ್ಲಿಯೇ ಇತ್ತು. ಸ್ವಾತಂತ್ರ್ಯಾ ನಂತರ ಬ್ರಿಟಿಷರ ಈ ಡಿಸ್ಟಿಲ್ಲರಿಗಳನ್ನು ವಿಠಲ್ ಮಲ್ಯ (ವಿಜಯ್ ಮಲ್ಯ ಅವರ ತಂದೆ) ಅವರು ಖರೀದಿಸಿದರು. ನಂತರ ಯುನೈಟೆಡ್ ಬ್ರೂವರೀಸ್ ಎಂಬ ಹೆಸರಿನಡಿಯಲ್ಲಿ ಕಂಪೆನಿ ಸ್ಥಾಪಿಸಿದರು.
ನಂತರದ ದಿನಗಳಲ್ಲಿ ʼಕ್ವಿನೈನ್ʼ ಬಹಳಷ್ಟು ಬಾರಿ ಆವಿಷ್ಕಾರಗೊಂಡು ʼಹೈಡ್ರಾಕ್ಸಿಕ್ಲೋರೊಕ್ವಿನ್ʼ ಎಂದು ರೂಪಾಂತರಗೊಂಡಿದೆ. ಇಂದಿಗೂ ಮಲೇರಿಯಾ ಜ್ವರ ಅಥವಾ ಇತರ ಸೋಂಕಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಕೆ ಆಗುತ್ತಿರುವ ಔಷಧಿ ಆಗಿದೆ. ಏಕೆಂದರೆ ಇದು ಅತ್ಯಂತ ಕನಿಷ್ಟ ಸೈಡ್ ಎಫೆಕ್ಟ್ಗಳನ್ನು ಹೊಂದಿದೆ. ಇದರ ಪೇಟೆಂಟ್ ಭಾರತ ಹೊಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.