ಟೈಮ್ ನಿಯತಕಾಲಿಕೆಯು ತನ್ನ 2020 ರ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಪಟ್ಟಿಯಲ್ಲಿ ಶಾಹೀನ್ ಭಾಗ್ ಹಿರಿಯ ಹೋರಾಟಗಾರ್ತಿಯೂ ಸೇರಿದ್ದಾರೆ.

ಶಾಹೀನ್ ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿ ಪ್ರತಿಭಟನಾಕಾರ್ತಿಯಾದ 82 ವರ್ಷದ ಬಿಲ್ಕಿಸ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ʼಶಾಹೀನ್ ಬಾಗ್ ದಾದಿಗಳು ಅಥವಾ ಅಜ್ಜಿಯರುʼ ಎಂದು ಕರೆಯಲ್ಪಡುವ ಮಹಿಳೆಯರ ಗುಂಪಿನ ಭಾಗವಾಗಿದ್ದ ಅವರು ದೆಹಲಿಯ ಭೀಕರ ಚಳಿಗಾಲದ ಸಮಯದಲ್ಲಿಯೂ ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಪ್ರಜಾಪ್ರಭುತ್ವವು ನಿರಂಕುಶ ಪ್ರಭುತ್ವಕ್ಕೆ ಜಾರುತ್ತಿರುವುದರ ವಿರುದ್ಧ, ಜನಪ್ರಿಯವಲ್ಲದ ಸತ್ಯದ ಪರ ನಿಂತಿದ್ದಕ್ಕಾಗಿ ಕಂಬಿಗಳ ಹಿಂದೆ ಹೋದ ಚಳವಳಿಗಾರರು ಮತ್ತು ವಿದ್ಯಾರ್ಥಿ ಮುಖಂಡರಿಗೆ ಬಿಲ್ಕಿಸ್ ಭರವಸೆ ಮತ್ತು ಶಕ್ತಿಯನ್ನು ನೀಡಿದರು ಮತ್ತು ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳಿಗೆ ಪ್ರೇರೇಪಣೆಯಾದರು” ಎಂದು ಪತ್ರಕರ್ತೆ ರಾಣಾ ಅಯೂಬ್ ಟೈಮ್ ನಿಯತಕಾಲಿಕೆಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

ʼನನ್ನ ರಕ್ತನಾಳಗಳಲ್ಲಿ ನೆತ್ತರು ಹರಿಯುವುದು ನಿಲ್ಲಿಸುವವರೆಗೂ ನಾನು ಇಲ್ಲಿ ಕುಳಿತುಕೊಳ್ಳುತ್ತೇನೆ, ಆದ್ದರಿಂದ ಈ ದೇಶದ ಮತ್ತು ಪ್ರಪಂಚದ ಮಕ್ಕಳು ನ್ಯಾಯ ಮತ್ತು ಸಮಾನತೆಯ ಗಾಳಿಯನ್ನು ಉಸಿರಾಡುತ್ತಾರೆ.ʼ ಎನ್ನುವ ಬಿಲ್ಕಿಸ್ ʼಟೈಮ್ಸ್ʼ ಪ್ರಭಾವಿಗಳ ಪಟ್ಟಿಯಲ್ಲಿ ಮಾನ್ಯತೆ ಪಡೆಯಲು ಅರ್ಹರಾಗಿದ್ದಾರೆ ಎಂದು ದಿ ವೈರ್ ಬರೆದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಕರಾತ್ಮಕ ಕಾರಣಗಳಿಗಾಗಿ ಅಲ್ಲದಿದ್ದರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಮೂಲಭೂತ ಅಂಶಗಳನ್ನು ಮೋದಿ ಪ್ರಶ್ನಾರ್ಹಗೊಳಿಸಿದ್ದಾರೆ ಎಂದು ಟೈಮ್ ನಿಯತಕಾಲಿಕೆ ಹೇಳಿದೆ.

ನರೇಂದ್ರ ಮೋದಿ ʼನಾಯಕರʼ ವಿಭಾಗದಡಿಯಲ್ಲಿ ಬಂದರೆ, ಬಿಲ್ಕಿಸ್ ʼಐಕಾನ್ʼ ವಿಭಾಗದಲ್ಲಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಭಾರತದ ನಟ ಆಯುಷ್ಮಾನ್ ಖುರಾನ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.










