Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹಳ್ಳಿಹಕ್ಕಿ ಕನಸು ಕಮರಿದ್ದನ್ನು ಖಚಿತ ಪಡಿಸಿದ ಶ್ರೀನಿವಾಸ ಪ್ರಸಾದ್

ಹಳ್ಳಿಹಕ್ಕಿ ಕನಸು ಕಮರಿದ್ದನ್ನು ಖಚಿತ ಪಡಿಸಿದ ಶ್ರೀನಿವಾಸ ಪ್ರಸಾದ್
ಹಳ್ಳಿಹಕ್ಕಿ ಕನಸು ಕಮರಿದ್ದನ್ನು ಖಚಿತ ಪಡಿಸಿದ ಶ್ರೀನಿವಾಸ ಪ್ರಸಾದ್

January 7, 2020
Share on FacebookShare on Twitter

ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರ ಹಿಂದಿರುವ ಶಕ್ತಿ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಎಂಬುದು ಈಗ ಎಲ್ಲರಿಗೂ ತಿಳಿದಿರುವ ಬಹಿರಂಗ ರಹಸ್ಯ. ವಿಶ್ವನಾಥ್ ಏನೇ ಹೇಳಿದರು ಜನ ನಂಬುತ್ತಿಲ್ಲ. ಏಪ್ರಿಲ್-ಮೇ ಲೋಕಸಭಾ ಚುನಾವಣಾ ಮತದಾನ ಮುಗಿದ ಕೂಡಲೆ ಪ್ರಸಾದ್ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಸುಮಾರು 45 ನಿಮಿಷ ಮಾತುಕತೆ ನಡೆಸಿದಾಗಲೆ, ವಿಶ್ವನಾಥ್ ಆಪ್ತರಿಗೆ ಅವರ ಮುಂದಿನ ನಡೆ ಸ್ಪಷ್ಟವಾಗಿತ್ತು. ಸಿದ್ದರಾಮಯ್ಯ ಮೇಲಿನ ವೈಯಕ್ತಿಕ ದ್ವೇಷ, ಪ್ರಸಾದ್ ನಡೆಯ ಹಿಂದಿನ ಕಾರಣ ಎನ್ನುವುದು ಕೂಡಾ ಅವರಿಗೆ ಮನದಟ್ಟಾಗಿತ್ತು. ರಿಮೋಟ್ ಕಂಟ್ರೋಲ್ ಮೂಲಕ ಕೂಡಾ ಸಿದ್ದರಾಮಯ್ಯ ಆಡಳಿತ ಮೇಲೆ ಹಿಡಿತ ಹೊಂದಿರಬಾರದು ಎನ್ನುವ ಪ್ರಸಾದ್ ದ್ವೇಷದ ಜ್ವಾಲೆ ಅಂತಿಮವಾಗಿ ವಿಶ್ವನಾಥ್ ಸಮ್ಮಿಶ್ರ ಸರಕಾರದ ಪತನಕ್ಕೆ ಕೈ ಜೋಡಿಸುವುದರೊಂದಿಗೆ ಪರ್ಯಾವಸಾನಗೊಂಡಿತ್ತು. ಹುಣಸೂರು ಉಪ ಚುನಾವಣೆ ಸಂದರ್ಭದಲ್ಲಿ ಪ್ರಸಾದ್, ವಿಶ್ವನಾಥ್ ಗೆಲುವಿಗೆ ಅವಿರತ ಶ್ರಮವಹಿಸಿದರೂ, ಅಂತಿಮವಾಗಿ ಒಕ್ಕಲಿಗರ ಮತವನ್ನು ಕಾಂಗ್ರೆಸ್‍ನತ್ತ ಜೆಡಿಎಸ್ ತಿರುವುದರೊಂದಿಗೆ, ಇಡೀ ಕಾರ್ಯಾಚರಣೆ ವಿಶ್ವನಾಥ್ ಪಾಲಿಗೆ ತಿರುಗುಬಾಣವಾದದ್ದು ಇತಿಹಾಸ.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಪ್ರಸಾದ್ ಪ್ರಕಾರ ವಿಶ್ವನಾಥ್ ಮತ್ತೆ ಸಚಿವರಾಗಲು ಅಡ್ಡಿಯಾಗುತ್ತಿರುವುದು ಅನರ್ಹ ಶಾಸಕರ ಅರ್ಹತೆಗೆ ಸಂಬಂಧಿಸಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು.”ಗೆದ್ದರಷ್ಟೇ ಸಚಿವ ಸ್ಥಾನ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮತ್ತೆ ವಿಶ್ವನಾಥ್ ಸಚಿವರಾಗಲು ಇನ್ನೊಂದು ಚುನಾವಣೆ ಗೆಲ್ಲಬೇಕಿದೆ,” ಎನ್ನುವ ಪ್ರಸಾದ್ ಹೇಳಿಕೆ, ಬಿಜೆಪಿ ಅಂತರಂಗವನ್ನು ಬಹಿರಂಗಪಡಿಸಿದೆ.

ಆದರೆ ಇದೀಗ ಪ್ರಸಾದ್ ಪಾಳಯದಿಂದ ಹೊಸ ಸುದ್ದಿ ಬಂದಿದೆ. ಇದು ವಿಶ್ವನಾಥ್ ಪಾಲಿಗೆ ಮರ್ಮಾಘಾತದಂತಿದೆ. ಸ್ವತಃ ಪ್ರಸಾದ್ ಅವರೇ ವಿಶ್ವನಾಥ್ ಸಚಿವರಾಗಲು ಸಾಧ್ಯವಿಲ್ಲ ಎಂದು ಘೋಷಿಸುವ ಮೂಲಕ ವಿಶ್ವನಾಥ್ ರಾಜಕೀಯ ಜೀವನದ ಅಂತಿಮ ಷರಾ ಬರೆದಿದ್ದಾರೆ.

ಪ್ರಸಾದ್ ಪ್ರಕಾರ ಜನವರಿ 15ರ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ವಿಶ್ವನಾಥ್‍ಗೆ ಅವಕಾಶ ಸಿಗುತ್ತಿಲ್ಲ. ವಿಶ್ವನಾಥ್ ಮತ್ತೆ ಸಚಿವರಾಗಬೇಕಾದರೆ ಅವರು ಎಂಎಲ್‍ಸಿ ಅಥವಾ ಎಂಎಲ್‍ಎ ಆಗಬೇಕು. ಅದು ಸದ್ಯಕ್ಕೆ ಅಸಾಧ್ಯದ ಮಾತು.

ಮೂಲಗಳ ಪ್ರಕಾರ ಪ್ರಸಾದ್ ಮೂಲಕ ಈ ಹೇಳಿಕೆ ನೀಡಿರುವುದು ಬಿಜೆಪಿ ರಾಜ್ಯ ನಾಯಕತ್ವ. ರಾಜ್ಯದಲ್ಲಿ ಈಗಾಗಲೆ ಅಧಿಕಾರದ ಚುಕ್ಕಾಣಿ ಪಡೆದಿರುವ ಪಕ್ಷದ ಪಾಲಿಗೆ ವಿಶ್ವನಾಥ್ ಈಗೇನಿದ್ದರೂ ಗೊಡ್ಡು ಹಸು. ಏಕೆಂದರೆ, ಹಳೆ ಮೈಸೂರು ಭಾಗದಲ್ಲಿ ಅವರಿಗಿಂತ ಹೆಚ್ಚು ವರ್ಚಸ್ಸು ಹೊಂದಿರುವ ಮಾಜಿ ಸಚಿವ ಸಿ ಎಚ್ ವಿಜಯಶಂಕರ್ ಇದ್ದಾರೆ. ಹುಣಸೂರಿನಿಂದ ಸ್ಪರ್ಧೆಗಿಳಿಯಲು ಹಲವಾರು ಒಕ್ಕಲಿಗ ಮುಖಂಡರು ಸಜ್ಜಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇನ್ನೇನಿದ್ದರೂ ವಿಶ್ವನಾಥ್ ಅತಂತ್ರ.

ಮೈಸೂರಿನ ರಾಜಕೀಯ ಬಲ್ಲವರೆಲ್ಲರ ಪ್ರಕಾರ ಪ್ರಸಾದ್ ಮಧ್ಯಸ್ಥಿಕೆ ಇಲ್ಲದಿರುತ್ತಿದ್ದರೆ, ವಿಶ್ವನಾಥ್ ಕನಸು ಮನಸ್ಸಿನಲ್ಲೂ ಕೇಸರಿ ಪಾಳಯ ಸೇರುವ ಧೈರ್ಯ ಮಾಡುತ್ತಿರಲಿಲ್ಲ. ಏಕೆಂದರೆ ವಿಶ್ವನಾಥ್ ಕಂಡರೆ, ಮೈಸೂರಿನ ಬಿಜೆಪಿ ನಾಯಕರಿಗೆ ಅಷ್ಟಕಷ್ಟೇ. ಜತೆಗೆ ವಿಶ್ವನಾಥ್ ತಾವು ನಂಬಿದ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಬಹಳ ಜಾಗರೂಕರಾಗಿದ್ದರು. ಅರಸು ಸಿದ್ಧಾಂತಗಳ ಬಗ್ಗೆ ಬಹಳವಾಗಿ ವಾದ ಮಾಡುತ್ತಿದ್ದ ವಿಶ್ವನಾಥ್, ತಮ್ಮ ಬಹುಕಾಲದ ಗೆಳೆಯ ಪ್ರಸಾದ್ ಭರವಸೆ ನೀಡದಿರುತ್ತಿದ್ದರೆ ಕೇಸರಿ ಪಾಳಯಕ್ಕೆ ಜಿಗಿಯುತ್ತಿರಲಿಲ್ಲ. ಪ್ರಸಾದ್ ಅವರೆಷ್ಟೇ ಬೆಂಬಲ ನೀಡಿದರೂ, ಬಿಜೆಪಿ ಬಹುತೇಕ ನಾಯಕರು ಸ್ಥಳೀಯವಾಗಿ ವಿಶ್ವನಾಥ್ ಅವರ ನೆರವಿಗೆ ಚುನಾವಣೆಯಲ್ಲಿ ನಿಲ್ಲಲಿಲ್ಲ. ತಮ್ಮ ಸೋಲಿನ ಬಳಿಕ ಇದೇ ಕಾರಣಕ್ಕೆ ವಿಶ್ವನಾಥ್ ಹೇಳಿದ್ದು: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕರು ತನ್ನನ್ನು ಸೋಲಿಸಿದರು!

ಬಿಜೆಪಿ ಮೂಲಗಳ ಪ್ರಕಾರ ಪ್ರಸಾದ್ ಗುರಿ ಈಗೇನಿದ್ದರೂ ತನ್ನ ಅಳಿಯ ನಂಜನಗೂಡು ಶಾಸಕ ಹರ್ಷವರ್ಧನ್ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವುದು. ಸಾಧ್ಯವಾದರೆ ಯಡ್ಡಿ ಸಂಪುಟದಲ್ಲಿ ಸಚಿವಗಿರಿ ಕೊಡಿಸುವ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಹಿಡಿತ ಬಲಪಡಿಸುವ ಧಾವಂತದಲ್ಲಿ ಅವರಿದ್ದಾರೆ. ಅವರ ಪಾಲಿಗೂ ಈಗ ವಿಶ್ವನಾಥ್ ಹೊರೆ!

ದೇವರಾಜ್ ಅರಸು ಪ್ರಣೀತ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ನಾಯಕನೊಬ್ಬನ ರಾಜಕೀಯ ಅವನತಿ ಹೀಗೆ ಕೇಸರಿ ಪಾಳಯದಲ್ಲಾಗುತ್ತಿರುವುದು ಇಡೀ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿಯಂತಿದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಜನಸಾಮಾನ್ಯರಿಗೆ ಬಿಗ್​ ರಿಲೀಫ್​ : ಪಾನ್​ ಕಾರ್ಡ್​-ಆಧಾರ್​ ಲಿಂಕ್​ ಅವಧಿ ಜೂ.30ರವರೆಗೆ ವಿಸ್ತರಣೆ
Uncategorized

ಜನಸಾಮಾನ್ಯರಿಗೆ ಬಿಗ್​ ರಿಲೀಫ್​ : ಪಾನ್​ ಕಾರ್ಡ್​-ಆಧಾರ್​ ಲಿಂಕ್​ ಅವಧಿ ಜೂ.30ರವರೆಗೆ ವಿಸ್ತರಣೆ

by ಮಂಜುನಾಥ ಬಿ
March 28, 2023
ಸುಮಲತಾ ಅಂಬರೀಶ್ ಬಗ್ಗೆ ಚೇತನ್ ಅಹಿಂಸಾ ಹೇಳಿಕೆ: ಕ್ರಮಕ್ಕೆ ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿ
ಸಿನಿಮಾ

ಸುಮಲತಾ ಅಂಬರೀಶ್ ಬಗ್ಗೆ ಚೇತನ್ ಅಹಿಂಸಾ ಹೇಳಿಕೆ: ಕ್ರಮಕ್ಕೆ ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿ

by ಪ್ರತಿಧ್ವನಿ
March 31, 2023
SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |
ಇದೀಗ

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |

by ಪ್ರತಿಧ್ವನಿ
March 29, 2023
ʻವೀಕೆಂಡ್‌ ವಿತ್‌ ರಮೇಶ್‌ʼನಲ್ಲಿ ಪ್ರಭುದೇವ ಅತಿಥಿ… ಇವರಾದ್ರೂ ಕನ್ನಡದಲ್ಲಿ ಮಾತ್ನಾಡ್ತಾರಾ ಎಂದ ನೆಟ್ಟಿಗರು..!
ಸಿನಿಮಾ

ʻವೀಕೆಂಡ್‌ ವಿತ್‌ ರಮೇಶ್‌ʼನಲ್ಲಿ ಪ್ರಭುದೇವ ಅತಿಥಿ… ಇವರಾದ್ರೂ ಕನ್ನಡದಲ್ಲಿ ಮಾತ್ನಾಡ್ತಾರಾ ಎಂದ ನೆಟ್ಟಿಗರು..!

by ಪ್ರತಿಧ್ವನಿ
March 29, 2023
D.K Shivkumar : ಮೀಸಲಾತಿ ವಿರೋಧಿಸಿ ಬಿಜೆಪಿ ವಿರುದ್ಧ ಗುಡಿಗಿದ ಕಾಂಗ್ರೆಸ್ ನಾಯಕರು #Pratidhvani
ಇದೀಗ

D.K Shivkumar : ಮೀಸಲಾತಿ ವಿರೋಧಿಸಿ ಬಿಜೆಪಿ ವಿರುದ್ಧ ಗುಡಿಗಿದ ಕಾಂಗ್ರೆಸ್ ನಾಯಕರು #Pratidhvani

by ಪ್ರತಿಧ್ವನಿ
March 26, 2023
Next Post
JNU ನಲ್ಲಿ ಗದ್ದಲವೆಬ್ಬಿಸಲು ಕಾರ್ಯತಂತ್ರ ಹೆಣೆದಿದ್ದ ಎಬಿವಿಪಿ!

JNU ನಲ್ಲಿ ಗದ್ದಲವೆಬ್ಬಿಸಲು ಕಾರ್ಯತಂತ್ರ ಹೆಣೆದಿದ್ದ ಎಬಿವಿಪಿ!

ಗುಂಡು ಹಾರಿಸದಿದ್ದರೂ ವಿದ್ಯಾರ್ಥಿಗಳ ದೇಹದಲ್ಲಿ ಗುಂಡು ಎಲ್ಲಿಂದ ಬಂತು?

ಗುಂಡು ಹಾರಿಸದಿದ್ದರೂ ವಿದ್ಯಾರ್ಥಿಗಳ ದೇಹದಲ್ಲಿ ಗುಂಡು ಎಲ್ಲಿಂದ ಬಂತು?

ಚಂಬಲ್ ಕಣಿವೆಯ ಮಹಿಳಾ ‘ಡಕಾಯಿತೆ’ ಸಾಧನಾ…

ಚಂಬಲ್ ಕಣಿವೆಯ ಮಹಿಳಾ ‘ಡಕಾಯಿತೆ’ ಸಾಧನಾ…

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist