Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನರಸಿಂಹಮೂರ್ತಿ ಬಂಧನ ಹುಟ್ಟು ಹಾಕಿದ ಪ್ರಶ್ನೆಗಳು

ನರಸಿಂಹಮೂರ್ತಿ ಬಂಧನ ಹುಟ್ಟು ಹಾಕಿದ ಪ್ರಶ್ನೆಗಳು
ನರಸಿಂಹಮೂರ್ತಿ ಬಂಧನ ಹುಟ್ಟು ಹಾಕಿದ ಪ್ರಶ್ನೆಗಳು

November 3, 2019
Share on FacebookShare on Twitter

ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯವಾಗಿರುವ ಗೌರಿ ಮೀಡಿಯಾ ಟ್ರಸ್ಟ್‌ ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ದಿಢೀರ್‌ ಬಂಧನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಯಚೂರು ಪೊಲೀಸರು ಈ ಬಂಧನಕ್ಕೆ ನೀಡಿರುವ ಕಾರಣ ನರಸಿಂಹಮೂರ್ತಿ 25 ವರ್ಷಗಳ ಹಿಂದೆ ನಕ್ಸಲ್‌ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಆರೋಪಿಯಾಗಿದ್ದಾರೆ ಎಂಬುದಾಗಿದೆ. ಆದರೆ ಇಲ್ಲಿ ಬಹು ಮುಖ್ಯ ಪ್ರಶ್ನೆ ಎಂದರೆ ಕಳೆದ 25 ವರ್ಷಗಳಿಂದಲೂ ನರಸಿಂಹಮೂರ್ತಿ ಭೂಗತರಾಗಿರಲಿಲ್ಲ. ಹಲವು ಪ್ರಗತಿ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗೇ ಭಾಗವಹಿಸಿದ್ದರು. ಹಾಗಾದರೆ ಪೊಲೀಸರು ಹಠಾತ್ತಾಗಿ ಬಂಧಿಸಲು ಕಾರಣವೇನು ?

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಗೌರಿ ಲಂಕೇಶ್ ಬಳಗ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ನರಸಿಂಹಮೂರ್ತಿ ರಾಯಚೂರಿಗೆ ಬಂದಿದ್ದರು. ಅಕ್ಟೋಬರ್ 25 ರಂದು ನಡೆದ ಕಾರ್ಯಕ್ರಮದ ಸ್ಥಳದಲ್ಲಿ ಅವರನ್ನು ಬಂಧಿಸಲಾಯಿತು. 25 ವರ್ಷಗಳಿಂದ ತಲೆ ತಪ್ಪಿಸಿಕೊಂಡಿದ್ದ ಎಂಬ ಹೇಳಿಕೆಯನ್ನು ಸ್ವತಃ ರಾಯಚೂರು ಎಸ್ಪಿ ಸಿ ಬಿ ವೇದಮೂರ್ತಿ ನೀಡಿದ್ದಾರೆ.

1994ರಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮತ್ತು ನೇತಾಜಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಗೂ 2001ರಲ್ಲಿ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮತ್ತೆರೆಡು ಕ್ರಿಮಿನಲ್ ಪ್ರಕರಣಗಳಲ್ಲಿ ವಿನೋದ್ ಎಂಬಾತ ಆರೋಪಿಯಾಗಿದ್ದು ಆತನೇ ಈ ದೊಡ್ಡಿಪಾಳ್ಯ ನರಸಿಂಹಮೂರ್ತಿ ಎಂಬುದಾಗಿ ಪೊಲೀಸ್ ಸಾಕ್ಷಿದಾರನೊಬ್ಬ ಗುರುತಿಸಿದ್ದು ನ್ಯಾಯಾಲಯದ ವಾರಂಟ್ ಇರುವುದರಿಂದ ಬಂಧಿಸಲಾಗಿದೆ ಎಂಬುದು ಪೋಲೀಸರು ನೀಡುತ್ತಿರುವ ವಿವರಣೆ. ಹಾಗಾದರೆ, ಸಾಕ್ಷೀದಾರನೊಬ್ಬನ ಹೇಳಿಕೆಯಿಂದ ಯಾರನ್ನು ಬೇಕಾದರೂ ಯಾವ ಆಪಾದನೆಯ ಮೇಲೂ ಬಂಧಿಸಿ ಜೈಲಿಗೆ ಕಳಿಸಬಹುದೆನ್ನುವುದು ಸ್ಪಷ್ಟವಾಗುತ್ತದಲ್ಲವೇ?

ಈ ಪ್ರಕರಣದ ಕುರಿತು ನರಸಿಂಹಮೂರ್ತಿ ಅವರ ಸ್ನೇಹಿತ ಕುಮಾರ್‌ ಬುರಡಿಕಟ್ಟಿ ಅವರು ಹೇಳುವ ಸತ್ಯ ಬೇರೆಯೇ ಇದೆ. 1980ರ ದಶಕದಲ್ಲಿ ರಾಯಚೂರು ಭಾಗದಲ್ಲಿ ರೈತರನ್ನು ಸಂಘಟಿಸಲು ಹುಟ್ಟಿಕೊಂಡಿದ್ದ ಕರ್ನಾಟಕ ರೈತ ಕೂಲಿ ಸಂಘ, ವಿದ್ಯಾರ್ಥಿ ಸಂಘಗಳನ್ನು ಸಂಘಟಿಸುತ್ತಿದ್ದ ಪ್ರಗತಿಪರ ವಿದ್ಯಾರ್ಥಿ ಕೇಂದ್ರ, ಯುವಜನರನ್ನು ಸಂಘಟಿಸುತ್ತಿದ್ದ ಪ್ರಗತಿಪರ ಯುವಜನ ಸಂಘಗಳು ಭಾರೀ ಸದ್ದು ಮಾಡುತ್ತಿದ್ದ ಕಾಲವದು. ಆಂಧ್ರದಿಂದ ಬಂದಿದ್ದ ನಕ್ಸಲ್ ಕಾರ್ಯಕರ್ತರು, ಕರ್ನಾಟಕದ ಕ್ರಾಂತಿಕಾರಿ ಯುವಕರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತ, ಗುಪ್ತದಳಗಳಾಗಿ ಹಳ್ಳಿಗಳಲ್ಲಿ ಭೂಮಾಲೀಕರಿಗೆ, ಗುತ್ತಿಗೆದಾರರಿಗೆ, ಪೊಲೀಸರಿಗೆ ಸವಾಲಾಗಿದ್ದ ಸಮಯವದು. ಆವತ್ತು ವಿವಿಧ ಕ್ರಾಂತಿಕಾರಿ ಸಂಘಟನೆಯಲ್ಲಿ ಭಾಗಿಯಾಗಿದ್ದ ಅನೇಕರು ಎನ್ ಕೌಂಟರ್ ನಲ್ಲಿ ಸಾವಿಗೀಡಾಗಿದ್ದಾರೆ. ಕೆಲವರಿನ್ನೂ ತಲೆಮರೆಸಿಕೊಂಡಿದ್ದಾರೆ. ರಕ್ತಪಾತದ ಹಾದಿ ಸರಿಯಲ್ಲ ಎಂಬುದನ್ನು ನಿರ್ಧರಿಸಿದವರು ಸಮಾಜದ ಮುಖ್ಯವಾಹಿನಿಯಲ್ಲಿ ವಿವಿಧ ಹೋರಾಟ, ಚಳವಳಿಗಳಲ್ಲಿದ್ದಾರೆ. ಹೋರಾಟದ ಹಾದಿಯಿಂದ ಹೊರ ಬಂದವರು ಅಧ್ಯಾಪಕರು, ಪತ್ರಕರ್ತರು, ರೈತರೂ ಆಗಿದ್ದಾರೆ. ಆದರೆ ಅವತ್ತಿನ ಕ್ರಾಂತಿಕಾರಿ ಚಟುವಟಿಕೆ, ಚಳವಳಿಯ ಕಾವು ಕರ್ನಾಟಕದಲ್ಲಿ ಇವತ್ತಿಗೂ, ಒಂದು ಎಚ್ಚರದ ಸ್ಥಿತಿಯನ್ನು ಚಾಲ್ತಿಯಲ್ಲಿಟ್ಟಿದೆ. ಮುಖ್ಯವಾಗಿ ಸಂಘ ಪರಿವಾರಕ್ಕೆ, ಕೋಮುವಾದಕ್ಕೆ ಸವಾಲಾಗಿ ಹತ್ತು ಹಲವು ರೀತಿಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಮಾಜವನ್ನು ಪ್ರಭಾವಿಸುತ್ತಲೇ ಇದೆ.

ಕೋಮು ರಾಜಕಾರಣಕ್ಕೆ ಕಳೆದೆರಡು ದಶಕದಿಂದ ಸವಾಲಾಗಿರುವ ಈ ವಿಚಾರಧಾರೆಯನ್ನು ಬಗ್ಗುಬಡಿಯುವ ಯತ್ನವು ಚಾಲ್ತಿಯಲ್ಲಿದೆ. ನಕ್ಸಲರ ರಕ್ತ ಸಿಕ್ತ ಹಾದಿಯನ್ನು ಒಪ್ಪದೆಯೂ ಆ ಸೈದ್ಧಾಂತಿಕ ವಿಚಾರಗಳಿಂದ ಪ್ರಭಾವಿತರಾದ ನೂರಾರು ಮಂದಿ ಇನ್ನು ಕ್ರಿಯಾಶೀಲರಾಗಿರುವುದೇ ಇವತ್ತಿಗೂ ಸರ್ಕಾರಗಳಿಗೆ ತಲೆ ನೋವಾಗಿದೆ. ಇವರನ್ನೆಲ್ಲ ಮಟ್ಟ ಹಾಕಲು ಇರುವ ಸುಲಭದ ಹಾದಿಯೆಂದರೆ ನಕ್ಸಲರ ಜೊತೆ ಸಂಪರ್ಕದಲ್ಲಿದ್ದರು ಅಥವಾ ಈಗಲೂ ಸಂಪರ್ಕದಲ್ಲಿದ್ದಾರೆ ಎಂಬುದಾಗಿ ಬ್ರಾಂಡ್ ಮಾಡಿ ಕೇಸು ಹಾಕುವುದು. ಅದು ರಾಷ್ಟ್ರಮಟ್ಟದಲ್ಲಿ ಯಾವತ್ತೋ ಶುರುವಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಧಾ ಭಾರದ್ವಾಜ್‌ರಂತಹವರನ್ನೇ ಜೈಲಿಗಟ್ಟಲಾಗಿತ್ತು. ಈಗ ಇಲ್ಲಿ ಅಂತಹುದೇ ಪ್ರಕರಣ ಸೃಷ್ಟಿಸಿ ನರಸಿಂಹಮೂರ್ತಿ ಅವರನ್ನೂ ಬಂಧಿಸಲಾಗಿದೆ ಎಂದೂ ಕುಮಾರ್‌ (ಅವರ ಫೇಸ್ ಬುಕ್ ನಿಂದ) ಆರೋಪಿಸುತ್ತಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ

ನರಸಿಂಹಮೂರ್ತಿ ಬಂಧನದ ವಿರುದ್ಧದ ಆಂದೋಲನವನ್ನು ಬೆಂಬಲಿಸುವ ಸಂಸ್ಥೆಗಳಲ್ಲಿ ಒಂದಾದ ಜನಶಕ್ತಿ, ಈ ವಿಷಯದಲ್ಲಿ ಪೊಲೀಸರು ಬಹಳ ಆತುರದಿಂದ ವರ್ತಿಸಿದ್ದಾರೆ ಎಂದು ಅವರ ಅಭಿಪ್ರಾಯಪಟ್ಟಿದೆ. ಜನಶಕ್ತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಾಸು ಎಚ್ವಿ, “ಕಳೆದ ಎರಡು ದಶಕಗಳಿಂದ ನರಸಿಂಹಮೂರ್ತಿ ಸಹಚರನಾಗಿ, ನಾನು ಅವನನ್ನು ಮತ್ತು ಅವನ ಕುಟುಂಬವನ್ನು ಮತ್ತು ಅವನ ಜೀವನದ ಹೋರಾಟವನ್ನು ನೋಡಿದ್ದೇನೆ. ಅವನು ಭೂಗತನಾಗಿದ್ದ ವ್ಯಕ್ತಿಯಲ್ಲ. ಅವನ ಜೀವನೋಪಾಯದ ಎಲ್ಲಾ ವಿಧಾನಗಳು ಕಾನೂನುಬದ್ಧವಾಗಿದ್ದವು ಮತ್ತು ಅವನು ಬ್ಯಾಂಕಿನಿಂದ ಹೆಚ್ಚು ಸಾಲ ಪಡೆದಿದ್ದನು ಮತ್ತು ಅದನ್ನು ಸಹ ಮರುಪಾವತಿಸಿದ್ದಾನೆ. ಅವನು ಮತ್ತು ಅವನ ಸಹೋದರರು ತಮ್ಮ ವ್ಯವಹಾರದ ದಾಖಲೆಯನ್ನು ಉಳಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ಸಮೀಪದ ದೊಡ್ಡಿಪಾಳ್ಯ ದ ಖಾಯಂ ನಿವಾಸಿಯಾಗಿರುವ ನರಸಿಂಹಮೂರ್ತಿ ಭೂಗತವಲ್ಲ ಅಥವಾ ನಕ್ಸಲರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಮತ್ತು ಸಾಮಾನ್ಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆಂದು ಹೇಳುತ್ತಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ
ಸಿನಿಮಾ

“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ

by ಪ್ರತಿಧ್ವನಿ
March 27, 2023
ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |
ಇದೀಗ

ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |

by ಪ್ರತಿಧ್ವನಿ
March 29, 2023
C.M.BOMMAI : ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ; ಸಿಎಂ ಫಸ್ಟ್ ರಿಯಾಕ್ಷನ್ #pratidhvani
ಇದೀಗ

C.M.BOMMAI : ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ; ಸಿಎಂ ಫಸ್ಟ್ ರಿಯಾಕ್ಷನ್ #pratidhvani

by ಪ್ರತಿಧ್ವನಿ
March 27, 2023
ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?
Top Story

ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?

by ಪ್ರತಿಧ್ವನಿ
March 26, 2023
ಲಕ್ಷ್ಮೀ ಪೆಂಡೆಂಟ್‌ ನೆಕ್ಲೆಸ್‌ ಧರಿಸಿದ್ದ ಬಾಲಿವುಡ್‌ ನಟಿ ಮೇಲೆ ಎಫ್‌ಐಆರ್‌..!
ಸಿನಿಮಾ

ಲಕ್ಷ್ಮೀ ಪೆಂಡೆಂಟ್‌ ನೆಕ್ಲೆಸ್‌ ಧರಿಸಿದ್ದ ಬಾಲಿವುಡ್‌ ನಟಿ ಮೇಲೆ ಎಫ್‌ಐಆರ್‌..!

by ಪ್ರತಿಧ್ವನಿ
March 29, 2023
Next Post
2020ಕ್ಕೆ ಕಚ್ಚಾತೈಲ ದರ 25 ಡಾಲರ್ ಗೆ ಇಳಿಯಲಿದೆ! ದೇಶೀಯ ದರವೂ ತಗ್ಗಲಿದೆಯೇ?

2020ಕ್ಕೆ ಕಚ್ಚಾತೈಲ ದರ 25 ಡಾಲರ್ ಗೆ ಇಳಿಯಲಿದೆ! ದೇಶೀಯ ದರವೂ ತಗ್ಗಲಿದೆಯೇ?

ಬಿಎಸ್​ವೈ ಆಡಿಯೋ ಬಾಂಬ್ ಬಳಸುವಲ್ಲಿ ಯಶಸ್ವಿಯಾಗುವುದೇ ಕಾಂಗ್ರೆಸ್?

ಬಿಎಸ್​ವೈ ಆಡಿಯೋ ಬಾಂಬ್ ಬಳಸುವಲ್ಲಿ ಯಶಸ್ವಿಯಾಗುವುದೇ ಕಾಂಗ್ರೆಸ್?

ನೂರಾರು ಕೋಟಿ ವೆಚ್ಚ ಮಾಡಿ ಮೊಬೈಲುಗಳಿಗೆ ಕನ್ನ ಹಾಕುತ್ತಿರುವವರು ಯಾರು?

ನೂರಾರು ಕೋಟಿ ವೆಚ್ಚ ಮಾಡಿ ಮೊಬೈಲುಗಳಿಗೆ ಕನ್ನ ಹಾಕುತ್ತಿರುವವರು ಯಾರು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist