Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?

ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?
ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?

March 24, 2020
Share on FacebookShare on Twitter

ಕೊರೊನಾ ವೈರಸ್‌ ತಡೆಯಲು ವಿಶ್ವವೇ ಹರಸಾಹಸ ಮಾಡುತ್ತಿದೆ. ಆದರೆ ಭಾರತದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಮಾತ್ರ ಇನ್ನೂ ಕಠಿಣ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ ಬಳ್ಳಿಯಂತೆ ಹಬ್ಬುತ್ತಲೇ ಇದ್ದು ಐನೂರರ ಗಡಿ ತಲುಪಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕೇವಲ ಲಾಕ್‌ಡೌನ್‌ ಎಂದು ಆದೇಶ ಮಾಡಿದೆ. ಆದರೆ ಹೆದ್ದಾರಿಯಲ್ಲಿ ಬೈಕ್‌, ಕಾರುಗಳಲ್ಲಿ ಜನರು ಜಮಾಯಿಸಿದ್ದಾರೆ. ಇದರಿಂದ ಅಗತ್ಯ ಸೇವೆಗಳು ಹಾಗು ಮಾಧ್ಯಮ, ಆಸ್ಪತ್ರೆ, ವೈದ್ಯರು ಸರಿಯಾದ ಸಮಯಕ್ಕೆ ತಲುಪಲಾಗದೆ ಪರದಾಡುವಂತಾಗಿದೆ. ಪೊಲೀಸರ ಜೊತೆ ಸಾರ್ವಜನಿಕರು ವಾಗ್ವಾದ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ನ ಮೂಲ ಚೀನಾದ ವುಹಾನ್‌, ಕೊರೊನಾ ವೈರಸ್‌ನಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಇಡೀ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್‌ ಮಾಡಿ ಆದೇಶ ಮಾಡಿತ್ತು. ಅಗತ್ಯ ಮೂಲ ಸೌಕರ್ಯ ಸಾಗಣೆ ವಾಹನಗಳನ್ನು ಹೊರತು ಪಡಿಸಿ ಬೇರೆ ಯಾವುದೇ ವಾಹನ ಓಡಾಟಕ್ಕೂ ಅವಕಾಶ ಮಾಡಿಕೊಡಲಿಲ್ಲ. ಸೇನೆಯನ್ನು ಬಳಸಿಕೊಂಡು 2 ತಿಂಗಳ ಕಾಲ ಗೃಹಬಂಧನ ವಿಧಿಸಿದ ಚೀನಾ ಇಂದು ಇಡೀ ಪ್ರಪಂಚದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೂ ಹೆಮ್ಮಾರಿ ವೈರಸ್‌ ಅನ್ನು ನಿಯಂತ್ರಣದಲ್ಲಿ ಇರಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಯುಗಾದಿ ಹಬ್ಬಕ್ಕೆಂದು ನಗರದ ಜನ ಹಳ್ಳಿಗಳಿಗೆ ತೆರಳಬೇಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು. ಆದರೆ ಆ ಮನವಿ ಮಾಡುತ್ತಲೇ ನಗರ ಜನರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಸಾರಿಗೆ ಸೌಲಭ್ಯವನ್ನು ಬಂದ್‌ ಮಾಡಿದ್ದರೂ ಜನರು ಖಾಸಗಿ ವಾಹನಗಳನ್ನು ಆಶ್ರಯಿಸಿ ನಿನ್ನೆ ಇಡೀ ರಾತ್ರಿ ಪ್ರಯಾಣ ಮಾಡಿದ್ದಾರೆ. ರಸ್ತೆಗಳು ಕಿಕ್ಕಿರಿದು ತುಂಬಿ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಇಡೀ ಬೆಂಗಳೂರು ಹಳ್ಳಿಗಳತ್ತ ಹೊರಟಿದೆ. ನಗರದ ಜನರು ಹಳ್ಳಿಗಳಲ್ಲಿ ಹೋಗಿ ಕೊರೊನಾ ಸೋಂಕು ಹಬ್ಬಿಸುವ ಸಾಧ್ಯತೆಯಿದೆ ಎಂದಿದ್ದ ಸಿಎಂ ಯಡಿಯೂರಪ್ಪ ಹಳ್ಳಿಗಳಿಗೆ ತೆರಳುವ ಜನರನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸ್ವತಃ ಸುಪ್ರೀಂಕೋರ್ಟ್‌ ಕೂಡ ಸಂಪೂರ್ಣ ಬಂದ್‌ ಆಗುತ್ತಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಕಲಾಪ ನಡೆಸಲು ನಿರ್ಧಾರ ಮಾಡಲಾಗಿದೆ. ಆದರೆ ಹಳ್ಳಿಗಳಿಗೆ ತೆರಳಿ ಕೊರೊನಾ ಹರಡಬೇಡಿ ಎಂದಿದ್ದ ಸಿಎಂ ಯಡಿಯೂರಪ್ಪ, ಹಳ್ಳಿಗಳಿಗೆ ತೆರಳುವ ಲಕ್ಷಾಂತರ ಜನರನ್ನು ತಡೆಯುವ ಕೆಲಸ ಮಾಡಲಿಲ್ಲ ಎನ್ನುವುದೇ ದುರಂತ.

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಪಂಜಾಬ್ ಸರ್ಕಾರ ಕೂಡ ನಮ್ಮ ರಾಜ್ಯದಂತೆಯೇ ಲಾಕ್‌ಡೌನ್ ಆದೇಶ ಕೊಟ್ಟಿತ್ತು. ಆದ್ರೆ ಜನ ಸರ್ಕಾರದ ಆದೇಶಕ್ಕೆ ಕಿಂಚಿತ್ತು ಬೆಲೆ ಕೊಡಲಿಲ್ಲ. ಇದ್ರಿಂದ ಕೆಂಗಣ್ಣು ಬೀರಿದ ರಾಜ್ಯ ಸರ್ಕಾರ ಇದೀಗ ಕರ್ಫ್ಯೂ ಜಾರಿ ಮಾಡಿ ನಿಯಂತ್ರಣಕ್ಕೆ ತರುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ನಿಧಾನವಾಗಿಯಾದರೂ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ ಇನ್ನೂ ಕೆಲವು ಮಾರುಕಟ್ಟೆಯಲ್ಲಿ ಜನರು ಜಾತ್ರೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ಓಡಾಡುತ್ತಲೇ ಇವೆ. ಪಂಜಾಬ್‌ನಲ್ಲಿ ಇದುವರೆಗೂ 21 ಕೊರೊನಾ ವೈರಸ್ ಸೋಂಕುಗಳು ಪತ್ತೆಯಾಗಿದ್ದು, ಕರ್ನಾಟಕದಂತೆ ಪಂಜಾಬ್‌ನಲ್ಲೂ ಓರ್ವ ಸಾವನ್ನಪ್ಪಿದ್ದಾನೆ. ಆದರೂ ಪಂಜಾಬ್‌ ಸರ್ಕಾರ ಕಟ್ಟು ನಿಟ್ಟಿನ ಆದೇಶ ಮಾಡಿದೆ. ಆದರೆ ನಮ್ಮ ಕರ್ನಾಟಕ ಮಾತ್ರ ಇನ್ನೂ ಕೂಡ ಅಷ್ಟೊಂದು ಕಟ್ಟು ನಿಟ್ಟಿನ ಕ್ರಮ ಆಗಿಲ್ಲ ಎನಿಸುತ್ತಿದೆ.

ಇನ್ನು ಕೇಂದ್ರ ಸರ್ಕಾರ ಜೀವ ರಕ್ಷಕ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ನಿಷೇಧಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಾಸ್ಕ್ ತಯಾರಿಸಲು ಬಳಸಬಹುದಾದ ವಸ್ತುಗಳು, ವೆಂಟಿಲೇಟರ್‌ಗಳು, ಶಸ್ತ್ರಚಿಕಿತ್ಸಾ ಮಾಸ್ಕ್‌ಗಳು ಹಾಗೂ ಜವಳಿ ಕಚ್ಚಾ ವಸ್ತುಗಳ ರಫ್ತನ್ನು ಮಾರ್ಚ್ 19 ರಂದು ನಿಷೇಧಿಸಿತ್ತು. ಈ ನಿರ್ಧಾರ ಇದಕ್ಕೂ ಮೊದಲೇ ಕೈಗೊಳ್ಳಬೇಕಿತ್ತು. ಆದ್ರೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು WHO ಸಲಹೆ ಕೊಟ್ಟರೂ ಮಾರ್ಚ್ 19ರ ತನಕ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕ್ರಿಮಿನಲ್ ಪಿತೂರಿಯಲ್ಲವೆ..? ಎಂದು ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ. ಇನ್ನು ಕೊರೊನಾ ವೈರಸ್‌ ತಡೆಗೆ ನಮ್ಮ ಪಕ್ಕದ ಕೇರಳ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್‌ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಮರ್ಜಿಗಾಗಿ ಕಾಯದೆ ತನ್ನದೇ ಖಜಾನೆಯಿಂದ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಪ್ಯಾಕೇಜ್‌ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರವೂ ಯಾವುದೇ ರಾಜ್ಯಕ್ಕೆ ನಯಾಪೈಸೆ ಕೊಟ್ಟಿಲ್ಲ. ಎನ್‌ಡಿಆರ್‌ಎಫ್‌ ಫಂಡ್‌ನ ಶೇಕಡ 10 ರಷ್ಟು ಬಳಸುವಂತೆ ಸೂಚನೆ ಕೊಟ್ಟಿದೆ. ಅದೇ ಹಣದಲ್ಲಿ ಕೊರೊನಾ ಸಮಸ್ಯೆಗೆ ಮದ್ದು ಹುಡುಕಬೇಕಿದೆ. ಒಟ್ಟಾರೆ, ಇದನ್ನೆಲ್ಲಾ ನೋಡಿದರೆ ಕೊರೊನಾ ಸೋಂಕಿತರ ಸಂಖ್ಯೆ ಶಿಖರದಂತೆ ಏರುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗುವಂತೆ ಮಾಡಿದೆ.

ಇನ್ನೊಂದು ವಿಚಾರ ಎಂದರೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸೋಂಕಿತರಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಬಹುದು. ಸೋಂಕು ಹರಡುವ ಮುನ್ನ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು. ಆದರೆ ನಿಮ್ಮ ಮನೆಗೆ ಬಂದು ಕಾಯಿಲೆ ತಂದುಕೊಳ್ಳಬೇಡಿ ಎಂದು ಕಾಡಿ ಬೇಡಲು ಸಾಧ್ಯವಿಲ್ಲ. ಸುಮಾರು 15 ರಿಂದ 20 ದಿನಗಳ ಕಾಲ ಹಣ್ಣು, ತರಕಾರಿ ತಿನ್ನದಿದ್ದರೂ ಪರವಾಗಿಲ್ಲ ಎಂದು ಮನೆಯಲ್ಲಿ ಉಳಿದುಕೊಳ್ಳುವುದು ಲೇಸು. ಪ್ರಧಾನಿ ನರೇಂದ್ರ ಮೋದಿಯೇ ಮನೆಯಲ್ಲಿ ಲಾಕ್ಡೌನ್ ಆಗಿ ನಿಮ್ಮ ಪ್ರಾಣ ನೀವು ಉಳಿಸಿಕೊಳ್ಳಿ, ನಿಮ್ಮವರನ್ನೂ ಉಳಿಸಿ ಎಂದರೂ ಜನ ಕೇಳ್ತಿಲ್ಲ. ಮಾರ್ಕೆಟ್‌ಗಳಲ್ಲಿ ಜನ ಮುಗಿ ಬೀಳ್ತಿದ್ದಾರೆ. ಯುಗಾದಿ ಹಬ್ಬ ಅದ್ಧೂರಿ ಆಚರಣೆ ಮಾಡಲು ಮುಂದಾಗ್ತಿದ್ದಾರೆ. ಕೊರೊನಾ ಸೋಂಕು ರಾಜ್ಯ ಹಾಗೂ ದೇಶದಲ್ಲಿ ಗಹಗಹಿಸಿ ನಗುತ್ತಿದ್ದರೂ ಜನರಿಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿರುವುದನ್ನು ನಾವು ಗಮನಿಸಬಹುದು. ಜನ ಒಂದು ಮಾತು ಅರ್ಥ ಮಾಡಿಕೊಳ್ಳಲೇಬೇಕು ಅದೇನೆಂದರೆ, ಯಾವುದೇ ಸರ್ಕಾರ ಜನ ಜಾಗೃತಿ ಮಾಡಬಹುದು ಅಷ್ಟೇ..! ಬದುಕಿಸಲು ಸಾಧ್ಯವಿಲ್ಲ..!.

ರಾಜ್ಯ ಸರ್ಕಾರ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ಚಿಕಿತ್ಸೆಗೆಂದು ಮೀಸಲಿಟ್ಟಿದೆರ. ಇದೀಗ ಪ್ರತಿಯೊಂದು ಜಿಲ್ಲೆಯಲ್ಲೂ ಪತ್ಯೇಕ ಕೊರೊನಾ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಕಾಯ್ದಿರಿಸಲು ಸೂಚನೆ ಕೊಡಲಾಗಿದೆ. ಹೊಸದಾಗಿ 1,000 ಸಾವಿರ ವೆಂಟಿಲೇಟರ್ ಖರೀದಿಗೂ ನಿರ್ಧಾರ ಮಾಡಲಾಗಿದೆ. ಕೊರೊನಾ ವೈರಸ್‌ ನಿರೋಧ ಎನಿಸಿಕೊಂಡಿರುವ N – 95 10 ಲಕ್ಷ ಮಾಸ್ಕ್ ಖರೀದಿಗೂ ಆರ್ಡರ್ ಕೊಡಲಾಗಿದೆ. 15 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್ ಖರೀದಿಗೂ ಸರ್ಕಾರ ಮುಂದಾಗಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಖರೀದಿಗೂ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನು ಮನಗಂಡು ಇಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದರೂ ಜನರು ಇನ್ನೂ ಉದಾಸೀನತೆ ಮಾಡುತ್ತಿದ್ದಾರೆ ಎನಿಸುತ್ತದೆ. ಸದ್ಯ ಕೆಲಸದ ಬಗ್ಗೆ ಚಿಂತೆ ಮಾಡದೆ ಮನೆಯಲ್ಲೇ ಉಳಿದುಕೊಂಡು ಜೀವ ಉಳಿಸಿಕೊಳ್ಳುವುದನ್ನು ನೋಡಬೇಕಿದೆ. ತಿಂಗಳ ವೇತನ ಬಾರದಿದ್ದರೂ ಪರವಾಗಿಲ್ಲ, ಅನ್ನವನ್ನಾದರೂ ತಿಂದು ಜೀವ ಉಳಿಸಿಕೊಳ್ಳುವ ನಿರ್ಧಾರವನ್ನು ಜನರು ಮಾಡಬೇಕಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ʻವೀಕೆಂಡ್‌ ವಿತ್‌ ರಮೇಶ್‌ʼನಲ್ಲಿ ಪ್ರಭುದೇವ ಅತಿಥಿ… ಇವರಾದ್ರೂ ಕನ್ನಡದಲ್ಲಿ ಮಾತ್ನಾಡ್ತಾರಾ ಎಂದ ನೆಟ್ಟಿಗರು..!
ಸಿನಿಮಾ

ʻವೀಕೆಂಡ್‌ ವಿತ್‌ ರಮೇಶ್‌ʼನಲ್ಲಿ ಪ್ರಭುದೇವ ಅತಿಥಿ… ಇವರಾದ್ರೂ ಕನ್ನಡದಲ್ಲಿ ಮಾತ್ನಾಡ್ತಾರಾ ಎಂದ ನೆಟ್ಟಿಗರು..!

by ಪ್ರತಿಧ್ವನಿ
March 29, 2023
RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!
ಇದೀಗ

RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!

by ಪ್ರತಿಧ್ವನಿ
March 26, 2023
ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಸುಳ್ಯ ಪಿಎಫ್​ಐ ಕಚೇರಿ ಸೀಝ್​
ಇದೀಗ

ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಸುಳ್ಯ ಪಿಎಫ್​ಐ ಕಚೇರಿ ಸೀಝ್​

by ಮಂಜುನಾಥ ಬಿ
March 27, 2023
SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |
ಇದೀಗ

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |

by ಪ್ರತಿಧ್ವನಿ
March 29, 2023
ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?
ಅಂಕಣ

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

by ಡಾ | ಜೆ.ಎಸ್ ಪಾಟೀಲ
April 1, 2023
Next Post
ಇಂದು ಮತ್ತೆ ಪ್ರೈಮ್ ಸ್ಪೀಚ್ ನೀಡಲಿರುವ ಮೋದಿ ಬಗ್ಗೆ ನಿರೀಕ್ಷೆಗಳು ಅಪಾರ

ಇಂದು ಮತ್ತೆ ಪ್ರೈಮ್ ಸ್ಪೀಚ್ ನೀಡಲಿರುವ ಮೋದಿ ಬಗ್ಗೆ ನಿರೀಕ್ಷೆಗಳು ಅಪಾರ

ಎಟಿಎಂ ವಿಥ್‌ ಡ್ರಾ ಶುಲ್ಕ ತಾತ್ಕಾಲಿಕ ರದ್ದು

ಎಟಿಎಂ ವಿಥ್‌ ಡ್ರಾ ಶುಲ್ಕ ತಾತ್ಕಾಲಿಕ ರದ್ದು, ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಲ್ಲ

ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!

ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist