ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ರೈತರ ಪ್ರತಿಭಟನೆಯಿಂದ ಸುದ್ದಿಯಾಗುತ್ತಿದೆ. ದೇಶದ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯದ ರೈತಸಂಘಟನೆಗಳು ಒಂದುಗೂಡಿ ಆಧುನಿಕ ಇತಿಹಾಸದಲ್ಲಿಯೇ ಪ್ರಪಥಮ ಬಾರಿಗೆ ದೀರ್ಘ ಮುಷ್ಕರಕ್ಕೆ ಮುಂದಾಗಿದ್ದು, ಮೋದಿ ಸರ್ಕಾರ ಜಾರಿಗೆತಂದ ಕೃಷಿ ವಿರೋಧಿ ಕಾಯ್ದೆಗಳನ್ನ ವಿರೋಧಿಸಿ ಅನ್ನದಾತರು ಮನೆಮಟ ಜೀವದ ಹಂಗು ತೊರೆದು ಅಲ್ಲೇ ಬೀಡುಬಿಟ್ಟು ಹೋರಾಟ ನಿರತರಾಗಿದ್ದಾರೆ. ಇತ್ತ ಸರ್ಕಾರ ಅನ್ನದಾತರ ಕೂಗಿಗೆ ಕನಿಷ್ಠ ಮಟ್ಟದ ಮಾನವೀಯತೆ ತೋರದಿರುವುದು ದುರಾದೃಷ್ಟಕರ ಸಂಗತಿ. ಮತ್ತೊಂದೆಡೆ ರೈತರಿಗೆ ಹವಮಾನ ವೈಪರಿತ್ಯ ಕಂಟಕವಾಗಿ ಎದುರಾಗಿದೆ. ದೆಹಲಿ ಈ ಹಿಂದೆ ಅಧಿಕ ತಾಪಮಾನ ವಾಯ್ಯುಮಾಲಿನ್ಯ ಕುರಿತು ಸುದ್ದಿಯಾಗುತ್ತಿತ್ತು. ಇದೀಗ ಅಧಿಕ ಶೀತವಾತಾವರಣ ಹೊಂದಿದ ನಗರವೆಂದು ಗುರುತಿಸಿಗೊಂಡಿದೆ.
ಇತ್ತ ರಸ್ತೆಯ ಇಕ್ಕೆಲಗಳಲ್ಲಿ ಶೆಡ್ ನಿರ್ಮಿಸಿಕೊಂಡ ರೈತರಿಗೆ ಪೊಲೀಸರ ಚಾಟಿಯೇಟು, ದೌರ್ಜ್ಯನದ, ಆಹಾರ ಸಮಸ್ಯೆ, ಮೂಲಭೂತ ಸೌರ್ಕಗಳ ಕೊರತೆ ಒಂದೆಡೆಯಾದರೆ ಹವಮಾನದಲ್ಲಿಯೂ ತೀವ್ರ ವೈಪರಿತ್ಯ ಉಂಟಾಗಿ ದೆಹಲಿಯಾದ್ಯಂತ ಚಳಿಯ ವಾತಾವರಣ ದಿನೇ ದಿನೇ ಹೆಚ್ಚುತಿದೆ. ನ್ಯಾಯ ಕೇಳುವ ಹೋರಾಟ ಒಂದೆಡೆಯಾದರೆ ಈಕಡೆ ಸಾವು ನೋವಿನ ಹೋರಾಟವೂ ಕಂಟಕವಾಗಿ ಎದುರಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಪ್ರತಿಭಟನಾಕಾರು ಪ್ರತಿಭಟನಾ ನಿರತ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದು, ಮತ್ತೊಂದೆಡೆ ಮೃತ ರೈತರ ಕುಟುಂಬ ಮನೆಯ ಮುಖ್ಯಸ್ಥನನ್ನು ಕಳೆದು ಕೊಂಡು ಬಡವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದು, ಅಧಿಕ ಚಳಿಗೆ ೧೦ ರಿಂದ ೧೪ ವರ್ಷದ ಮಕ್ಕಳು ಬಲಿಯಾಗಿದ್ದಾರೆಂದು ವರದಿಯಾಗಿದೆ. ದೆಹಲಿ ಹರಿಯಾಣ ಸಮೀಪದಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಾಕಾರರೊಬ್ಬರು ಬುಧವಾರ ಚಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯಲ್ಲಿ ಡಿಸೆಂಬರ್ 14 ರಿಂದೇ ಅಧಿಕ ಶೀತ ದಿನವೆಂದು ದಾಖಲೆಯಾಗಿದ್ದು, ಬುಧವಾರ ಗರಿಷ್ಟ 16 ಡಿಗ್ರಿ ತಾಪಮಾನದಿಂದ ಕನಿಷ್ಠ 6 ಡಿಗ್ರಿಗೆ ಇಳಿಕೆಯಾಗಿದೆ. ಗುರುವಾರ ಸಫ್ದರ್ ಜಂಗ್ ಮತ್ತು ಪಲಾಮಂ ನಿಲ್ದಾಣಗಳಲ್ಲಿ ತಾಪಮಾನ ಗರಿಷ್ಠ 18.5 ರಿಂದ ಕನಿಷ್ಠ 5 ದಕ್ಕಿಳಿದಿದೆ. ಕಳೆದ ಎರಡು ದಿನಗಳಿಂದ ಅಧಿಕ ಶೀತವಾತಾವರಣ ಹೊಂದಿದ ಸ್ಥಳವಾಗಿ ಮಾರ್ಪಟ್ಟಿದೆ. ಮುಂದಿನ ೨೪ ಗಂಟೆಗಳಲ್ಲಿ ದೇಶದ ಪಶ್ಚಿಮ ಭಾಗ, ಪಂಜಾಬ್, ಉತ್ತರಪ್ರದೇಶ, ಹರಿಯಾಣ, ಛಂಡಿಗಡ ಹಾಗೂ ದೆಹಲಿ ಸೇರಿದಂತೆ ಹಲವೆಡೆ ಚಳಿ ಹೆಚ್ಚಿರಲ್ಲಿದ್ದು, ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಭದ್ರತೆವಹಿಸ ಬೇಕೆಂದು ಭಾರತೀಯ ಹವಮಾನ ಇಲಾಖೆ (ಐಎಂಡಿ) ಇಂದಿನ ವರದಿಯಲ್ಲಿ ತಿಳಿಸಿದೆ.
ಮಂಜುಮುಸುಕಿದ ವಾತಾವರಣವಿರಲ್ಲಿದ್ದು, ಇದರಿಂದಾಗಿ ಕೆಲವು ಮಾರಣಾಂತಿಕ ರೋಗಗಳಿಗೆ ಜನರು ತುತ್ತಾಗುವ ಸಾಧ್ಯತೆಯಿದೆ. ವಾತಾವರಣದಲ್ಲಿ ಶೀತ ಪ್ರಮಾಣ ಅಧಿಕವಾಗಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿ ಉಸಿರಾಟದ ಸಮಸ್ಯೆ, ಶೀತಾ, ಜ್ವರ, ಚರ್ಮಕ್ಕೆ ಸಂಬಂಧಿಸಿದಂತಹ ಕಾಯಿಲೆಗಳಿಗೆ ತುತ್ತಾಗು ಸಾಧ್ಯತೆ ಹೆಚ್ಚಿದೆ. ಇಂತಹ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಲಾಗಿದೆ.
ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಿರುವುರಿಂದ ಗಾಳಿಯಲ್ಲಿ ವಿಷಕಾರಿ ಅಂಶಗಳು ಹೆಚ್ಚಿದ್ದು, ಮಂಜಿನ ವಾತಾವರಣದಲ್ಲಿ ಸೇರ್ಪಡೆಯಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯೆತೆಯಿದೆ. ಈಗಾಗಲೆ ಪ್ರಪಂಚಕ್ಕೆ ಕಂಟಕವಾದ ಕರೋನಾದಿಂದ ಮನುಕುಲ ಸಾಕಷ್ಟು ನಲುಗಿಹೋಗಿದ್ದು, ಜನ ಆರೋಗ್ಯ ದೃಷ್ಟಿಯಿಂದ ಮುಂಜಾಗೃತಾ ಕ್ರಮ ವಹಿಸಬೇಕೆಂದು ಐಎಂಡಿ ವರದಿಯಲ್ಲಿ ತಿಳಿಸಿದೆ. ಮತ್ತೊಂದೆಡೆ ಹಿಮಾಲಯದಲ್ಲಿ ವಾಯುಭಾರ ಕುಸಿತ, ಈಸ್ಟರ್ಲಿ ಅಲೆಯ ಪರಿಣಾಮ ತಮಿಳುನಾಡು, ಪುದುಚೇರಿ, ಕಾರೇಕಲ್, ಕೇರಳ, ಮಾಹೆ, ಲಕ್ಷದ್ವೀಪ ಪ್ರದೇಶಗಳಿಗೆ ಪರಿಣಾಮ ಬೀರಲಿದ್ದು, ಡಿ16 ರಿಂದ 19ರವರೆಗೆ ತಮಿಳುನಾಡು, ಪುದುಚೇರಿ, ಕಾರೇಕಲ್ನಲ್ಲಿ ಮಳೆಯಾದರೆ, ಕೇರಳ ಮಾಹೆಯಲ್ಲಿ ಡಿ 17, 19 ರಂದು ಮಳೆಯಾಗಲಿದೆ. ಮುಂಜಾಗೃತಾ ಕ್ರಮವಹಿಸಬೇಕೆಂದು ಹವಮಾನ ಇಲಾಖೆಯ ಸೂಚನೆಯಾಗಿದೆ.
ಒಂದೆಡೆ ದೇಶದ ಬೆನ್ನೆಲುಬೆಂದು ಹೆಸರುವಾಸಿಯಾದ ರೈತ ಮಾತ್ರ ಸಮಸ್ಯೆಯಲ್ಲಿ ಸಿಲುಕಿ ಪರಿಹಾರ ಒದಗಿಸುವಂತೆ ಪಟ್ಟುಹಿಡಿದ್ದಿದ್ದು, ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ. ಇತ್ತ ಹವಾಮಾನ ಬದಲಾಗಿ ಚಳಿಯ ವಾತಾವರಣ ಉಲ್ಬಣವಾದ ಹಿನ್ನಲೆ, ರೈತರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಸ್ವಯಂ ಸೇವಕರು, ಹಲವಾರು ಸಂಘ ಸಂಸ್ಥೆಗಳು, ದಾನಿಗಳು ರೈತರು ಬೀಡುಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ ಮೂಲಭೂತ ಅಗತ್ಯ ವಸ್ತುಗಳನ್ನ ಹಂಚುತ್ತಿದ್ದಾರೆ..