ಮಲಯಾಳಂ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇತರ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಹತ್ರಾಸ್ಗೆ ತೆರಳುತ್ತಿದ್ದ ವೇಳೆ ಬಂಧಿಸಿದ್ದಾರೆ. ಹಾಗೂ ಬಂಧಿತರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ದೇಶದ್ರೋಹದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
Also Read: ದೇಶದ್ರೋಹ ಪ್ರಕರಣಗಳು: 2019ರಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಸಾಬೀತು
ದೆಹಲಿಯಿಂದ ಹತ್ರಾಸ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾಲ್ವರನ್ನು ಮಥುರಾದ ಟೋಲ್ ಪ್ಲಾಜಾದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಚಟುವಟಿಕೆಗಳನ್ನು “ಅನುಮಾನಾಸ್ಪದ” ಎಂದು ಕಂಡುಕೊಂಡ ಕಾರಣ ಕಾರನ್ನು ನಿಲ್ಲಿಸಲಾಯಿತು, ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಥುರಾ ಪೊಲೀಸರು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಂತ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದಾಖಲಾದ ಎಫ್ಐಆರ್ ಪ್ರಕಾರ, ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ), ಯುಎಪಿಎ ಸೆಕ್ಷನ್ 14 ಮತ್ತು 17, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 65, 72 ಮತ್ತು 76 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ನಾಲ್ವರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನೊಂದಿಗೆ ಸಂಬಂಧವಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರು ‘ಶಾಂತಿಯನ್ನು ಭಂಗಗೊಳಿಸಲು ದೊಡ್ಡ ಪಿತೂರಿಯ ಭಾಗವಾಗಿ ಹತ್ರಾಸ್ಗೆ ಹೋಗುತ್ತಿದ್ದಾರೆʼ ಎಂದು ಅವರ ವಿರುದ್ಧ ದಾಖಲಾದ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Also Read: ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ

ಬಂಧಿತರಿಂದ ಮೊಬೈಲ್ ಫೋನ್ಗಳು, ಅವರ ಲ್ಯಾಪ್ಟಾಪ್ ಹಾಗೂ ಸಾಹಿತ್ಯಕ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಂಧಿತ ಪತ್ರಕರ್ತ ಕೇರಳದ ಕಾರ್ಯನಿರತ ಪತ್ರಕರ್ತರ (KUWJ) ಒಕ್ಕೂಟದ ಸಕ್ರಿಯ ಸದಸ್ಯ ಹಾಗೂ ಒಕ್ಕೂಟದ ಕಾರ್ಯದರ್ಶಿಯಾಗಿದ್ದು, KUWJಯು ಪತ್ರಕರ್ತನನ್ನು ಅಕ್ರಮ ಬಂಧನದಿಂದ ಬಿಡುಗಡೆ ಕೋರಿ ಸುಪ್ರಿಂ ಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನೂ ಸಲ್ಲಿಸಿದೆ.
Also Read: ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು – UP ಪೊಲೀಸ್
“ಪ್ರಜಾಪ್ರಭುತ್ವದ ಅಂತಿಮ ಮೊಳೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿದೆ. ಮಾಧ್ಯಮವು ಪ್ರಜಾಪ್ರಭುತ್ವದ ಉಸಿರು. ವರದಿ ಮಾಡಲು ಪತ್ರಕರ್ತರಿಗೆ ಪ್ರವೇಶವನ್ನು ನಿರಾಕರಿಸುವುದು ಭಾರತದ ಸಂವಿಧಾನದ ವಿಧಿ 14 ಮತ್ತು ವಿಧಿ 21 ರ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.