ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಜೆಪಿ ಶಾಸಕ ಮುನಿರತ್ನ ತಮ್ಮ ರಾಜರಾಜೇಶ್ವರಿ ಕ್ಷೇತ್ರದಲ್ಲಿ ವಿಶೇಷ ಭಜನೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ರಾತ್ರಿ ಪೂರ ಜಾಗರಣೆ ಮಾಡುವ ಭಕ್ತರಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಮತ್ತು ಸಿನಿಮಾ ಸೆಲೆಬ್ರಿಟಿಗಳೂ ಕೂಡ ಆಗಮಿಸಿದ್ರು.
ಹಾಗೇ ವೇದಿಕೆಯ ಮೇಲೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದ್ದರು. ದರ್ಶನ್ ರನ್ನ ನೋಡಲು ನೂರಾರು ಸಂಖೆಯಲ್ಲಿ ಅಭಿಮಾನಿಗಳು ಆಗಮಿಸಿದ್ರು. ನೆರೆದಿದ್ದ ಜನರನ್ನು ಉದ್ದೇಶಿಸಿ ಶಾಸಕ ಮುನಿರತ್ನ ಮಾತನಾಡಲು ಆರಂಭಿಸಿದ್ದೇ ತಡ , ನಟ ದರ್ಶನ್ ಅಭಿಕಾನಿಗಳು ಡಿ ಬಾಸ್ ಡಿ ಬಾಸ್ ಘೋಷಣೆ ಕೂಗಲು ಆರಂಭಿಸಿದ್ರು.
ಆರಂಭದಲ್ಲಿ ಅಭಿಮಾನಿಗಳನ್ನು ಸಮಾಧಾನ ಪಡಿಸಿದ ಶಾಸಕ ಮುನಿರತ್ನ, ದರ್ಶನ್ ಇನ್ನ ಬಹಳ ಕಾಲ ಇಲ್ಲೇ ಇರ್ತಾರೆ, ನಿಮ್ಮ ಜೊತೆ ಮಾತನಾಡ್ತಾರೆ ನೀವೆಲ್ಲರೂ ಸಮಾದಂದಿಂದ ಇರ್ಬೇಕು ಎಂದು ಮನವಿ ಮಾಡಿಕೊಂಡ್ರು. ಆದ್ರೆ ಇದಕ್ಕೆ ಸ್ಪಂದಿಸದ ಅಭಿಮಾನಿಗಳು ಹಾಗೆ ಕೂಗಾಟ ಕಿರುಚಾಟ ಮುಂದುವರೆಸಿದರು.. ಇದ್ರಿಂದ ಶಾಸಕ ಮುನಿರತ್ನ ಗೆ ಮಾತನಾಡಲು ಅಡಚಣೆ ಉಂಟಾಗಿ ಅವರು ಬೇಸರಗೊಂಡರು
ಇದಾದನಂತರ ವೇದಿಕೆಯಲ್ಲಿದ್ದ ದರ್ಶನ್ ಕಡೆಗೆ ತೆರಳಿದ ಮುನಿರತ್ನ, ಇವರು ಯಾಕೋ ಮಾತು ಕೇಳಲ್ಲ.. ದರ್ಶನ್ ನೀವು ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತುಂಬಾ ಧನ್ಯವಾದ. ನೀವಿನ್ನೂ ಹೊರಡಬಹುದು ಎಂದು ಹೇಳ್ತಾರೆ. ಆಗ ದರ್ಶನ್ ಕೂಡ ಹೊರಡುವವರ ಹಾಗೇ ಎದ್ದು ನಿಲ್ತಾರೆ.
ಆದ್ರೆ ಇದು ಅಭಿಮಾನಿಗಳನ್ನ ಸುಮ್ಮನಾಗಿಸಲು ಒಂದು ತಮಾಷೆಯ ಟ್ರಿಕ್ ಆಗಿತ್ತು.ನೀವು ಸುಮ್ಮನಾಗಿಲ್ಲ ಅಂದ್ರೆ ದರ್ಶನ್ ಈಗ ಹೊರಟುಬಿಡ್ತಾರೆ ಎಂದು ಮುನಿರತ್ನ ಅಭಿಮಾನಿಗಳನ್ನ ಕಿಚಾಯಿಸಿದ್ರು. ನಂತರ ಅಭಿಮಾನಿಗಳಿಗೆ ದರ್ಶನ್ ಕೈ ಸನ್ನೆ ಮಾಡಿ ಸ್ವಲ್ಪ ಹೊತ್ತು ಸುಮ್ಮನಾಗಿ ಎಂದು ಮನವಿ ಮಾಡಿ ಸುಮ್ಮನಾಗಿಸಿದ ಘಟನೆ ನಡೆದಿದೆ.