ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಜುಲೈ 10 ರಂದು ಹೊರಡಿಸಿರುವ ಕೋವಿಡ್-19 ಮಾಧ್ಯಮ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4537 ಹೊಸ ಪ್ರಕರಣಗಳು ಪತ್ತೆಯಾಗಿದೆ. 1018 ಮಂದಿ ಕರೋನಾ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 21,775 ಮಂದಿ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಇದುವರೆಗೂ ಒಟ್ಟು 59,652 ಕರೋನಾ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿದೆ.ಇಂದು 93 ಮಂದಿ ಕರೋನಾ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಕರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1240 ತಲುಪಿದೆ. ರಾಜ್ಯದಲ್ಲಿ ಸದ್ಯ 36631 ಸಕ್ರಿಯ ಕರೋನಾ ಪ್ರಕರಣಗಳಿವೆ. 580 ಮಂದಿ ಸೋಂಕಿತರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ನಗರವೊಂದರಲ್ಲೇ 2125 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29621 ತಲುಪಿದೆ. ಅಂದರೆ ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ರಾಜ್ಯ ರಾಜಧಾನಿಯೊಂದರಲ್ಲೇ ಪತ್ತೆಯಾಗಿದೆ. ಅದೇ ವೇಳೆ ರಾಜ್ಯ ರಾಜಧಾನಿಯಲ್ಲಿ ಚೇತರಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ಇದುವರೆಗೂ ನಗರದಲ್ಲಿ 6540 ಪ್ರಕರಣಗಳಲ್ಲಷ್ಟೇ ಚೇತರಿಕೆ ಕಂಡು ಬಂದಿದೆ.
ಇನ್ನು ದೇಶದಾದ್ಯಂತ 34,884 ಹೊಸ ಕರೋನಾ ಪ್ರಕರಣಗಳು ಕಂಡುಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 10,38,716 ತಲುಪಿದೆ. ಇದುವರೆಗೂ 6,53,751 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 3,58,692 ಸಕ್ರಿಯ ಪ್ರಕರಣಗಳಿವೆ. ದೇಶದೊಳಗೆ ಕರೋನಾ ಸೋಂಕಿನಿಂದ 26,273 ಮಂದಿ ಮೃತಪಟ್ಟಿದ್ದಾರೆ.