ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರದ ಭರವಸೆಗಳನ್ನು ನಂಬುತ್ತಿಲ್ಲ. ಕೇಂದ್ರ ಕೃಷಿ ಸಚಿವರು ಈ ಹಿಂದೆ ಎರಡು ಬಾರಿ ರೈತರ ಜತೆ ನಡೆಸಿದ ಸಭೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆಯು ಹಾಗೆಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ವಿಪಕ್ಷಗಳು, ಕಾಂಗ್ರೆಸ್ ಮತ್ತು ಕೆಲವು ಸಂಘಟನೆಗಳು ರೈತರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಕನಿಷ್ಟ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ಭರವಸೆಗಳನ್ನು ರೈತರು ಸತತವಾಗಿ ತಿರಸ್ಕರಿಸಿದ್ದಾರೆ, ಏಕೆಂದರೆ ಅವರು ಕಳೆದ ಅಕ್ಟೋಬರ್ 2019 ರಿಂದ ಸರ್ಕಾರವು ಗೋಧಿ ಮತ್ತು ಅಕ್ಕಿ ಸಂಗ್ರಹವನ್ನು ಕಡಿತಗೊಳಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿದೆ ಎಂದು ಬಲವಾಗಿ ನಂಬಿದ್ದಾರೆ. ಈ ನಂಬಿಕೆಗೆ ಮೂಲ ಕಾರಣ 2019 ರ ಅಕ್ಟೋಬರ್ನಲ್ಲಿ ಕೇಂದ್ರ ಆಹಾರ ಇಲಾಖೆಯಿಂದ ಭಾರತದ ಆಹಾರ ನಿಗಮಕ್ಕೆ (ಎಫ್ಸಿಐ) ಬರೆದ ಪತ್ರ ಮತ್ತು ವಿವಿಧ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಶಿಫಾರಸು ಮಾಡುವ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಯು ಕಳೆದ ಮಾರ್ಚ್ 2020 ರಲ್ಲಿ ವರದಿಯೇ ಕಾರಣವಾಗಿದೆ.
ಎಫ್ಸಿಐ ಕೇಂದ್ರ ಪೂಲ್ಗಾಗಿ ಬೆಳೆಗಳನ್ನು ಖರೀದಿಸುವ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ಸಂಗ್ರಹಿಸಿದ ಬೆಳೆಗಳನ್ನು, ಮುಖ್ಯವಾಗಿ ಗೋಧಿ, ಭತ್ತ ಮತ್ತು ದ್ವಿದಳ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಫರ್ ಸ್ಟಾಕ್ ಅನ್ನು ನಿರ್ವಹಿಸಲು ಬಳಸಲಾಗುತ್ತದೆ. ಎಫ್ಸಿಐ ಈ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಖರೀದಿಸುತ್ತದೆ. ಇದರಿಂದ ರೈತರ ಬೆಳೆಗಳು ನಿರ್ದಿಷ್ಟ ಬೆಲೆಗಿಂತ ಕಡಿಮೆಯಾಗುವುದಿಲ್ಲ ಎಂದು ಭರವಸೆ ಇರುತ್ತದೆ. ಕೇಂದ್ರ ಸರ್ಕಾರದ ದಾಸ್ತಾನಿಗೆ ಗೋಧಿ ಮತ್ತು ಅಕ್ಕಿ ನೀಡುವಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಪ್ರಮುಖವಾಗಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈಗ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಪಂಜಾಬ್ನ ರೈತರು ಮುನ್ನಡೆಸುತ್ತಿದ್ದಾರೆ, ಅವರು ಮೋದಿ ಸರ್ಕಾರವು ಖರೀದಿ ವ್ಯವಸ್ಥೆಯನ್ನು ಮುಂದುವರೆಸಬೇಕು ಮತ್ತು ಎಂಎಸ್ಪಿಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ಎಂಎಸ್ಪಿ ಚೌಕಟ್ಟು ಅಥವಾ ಖರೀದಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ನಿರಂತರವಾಗಿ ರೈತರಿಗೆ ಭರವಸೆ ನೀಡಿದೆ.
Also Read: ಬಗೆಹರಿಯದ ರೈತರ ಸಮಸ್ಯೆ; ಇಂದು ಪ್ರಶಸ್ತಿ ವಾಪಸ್, ನಾಳೆ ಭಾರತ್ ಬಂದ್, ನಾಳಿದ್ದು ಮತ್ತೊಂದು ಸಭೆ
ಆದರೆ ಕಳೆದ ಅಕ್ಟೋಬರ್ 18, 2019 ರಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ವಿಭಾಗದ ಕೇಂದ್ರ ಜಂಠಿ ಕಾರ್ಯದರ್ಶಿ ಪ್ರಮೋದ್ ಕುಮಾರ್ ತಿವಾರಿ ಅವರು ಎಫ್ಸಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ರವೀಂದರ್ ಪಾಲ್ ಸಿಂಗ್ ಅವರಿಗೆ ಕಳುಹಿಸಿದ ಇಮೇಲ್ ನಲ್ಲಿ ಗೋಧಿ ಮತ್ತು ಅಕ್ಕಿ ದಾಸ್ತಾನನ್ನು ಕಡಿತಗೊಳಿಸುವ ಪ್ರಸ್ತಾವನೆ ಮಾಡಿದ್ದಾರೆ. ಕಳೆದ ನವೆಂಬರ್ 30 ರಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಅವರು ದೆಹಲಿ-ಹರಿಯಾಣ ಸಿಂಗ್ ಗಡಿಯಲ್ಲಿ ಪ್ರತಿಭಟನೆ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿವಾರಿ ಅವರ ಪತ್ರವನ್ನು ಉಲ್ಲೇಖಿಸಿ ಕನಿಷ್ಟ ಬೆಂಬಲ ಬೆಲೆ ಕುರಿತು ರೈತರ ಆತಂಕಗಳು ತಪ್ಪಾಗಿಲ್ಲ ಎಂದು ಹೇಳಿದ್ದಾರೆ.
Also Read: ರೈತರ ಪ್ರತಿಭಟನೆಗೆ ಖಲಿಸ್ತಾನ್ ಬಣ್ಣ: ಯಶಸ್ವಿ ಪ್ರತಿರೋಧ ಒಡ್ಡುತ್ತಿರುವ ಪಂಜಾಬ್ ಟೆಕ್ಕಿಗಳು
ಈ ಕುರಿತು ಮಾಧ್ಯಮದವರು ಇಮೇಲ್ ಮೂಲಕ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಮಾಹಿತಿ ಅಧಿಕಾರಿ ಅಲ್ಪನಾ ಪಂತ್ ಶರ್ಮಾ ಅವರನ್ನು ಪ್ರಶ್ನಿಸಿದಾಗ ಇವು ಇಲಾಖೆಯಲ್ಲಿನ ಆಂತರಿಕ ಸುತ್ತೋಲೆಗಳ ಭಾಗವಾಗಿದೆ ಮತ್ತು ನನಗೆ ನನ್ನ ಅಧಿಕಾರಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ, ಪಂಜಾಬ್ ಮತ್ತು ಹರಿಯಾಣದ ಎಫ್ಸಿಐ ಪ್ರಾದೇಶಿಕ ವ್ಯವಸ್ಥಾಪಕ ಅರ್ಷ್ದೀಪ್ ಸಿಂಗ್ ಅವರು ನಿಗಮವು ಕೇವಲ ಖರೀದಿ ಸಂಸ್ಥೆ ಮತ್ತು ಅದಕ್ಕೆ ಸೂಚನೆಗಳನ್ನು ನೀಡಲಾಗಿದೆ ಅಷ್ಟೆ ಎಂದು ಹೇಳಿದರು. ನಾವು ನೀತಿ ವಿಷಯಗಳ ಬಗ್ಗೆ ಗಮನಹರಿಸುವುದಿಲ್ಲ ಎಂದು ಅವರು ಹೇಳಿದರು.
ಆದರೆ ಇ ಮೇಲ್ ನಲ್ಲಿ ಧಾನ್ಯ ಸಂಗ್ರಹಣೆಯನ್ನು ನಿರ್ಬಂಧಿಸಲು ಸೂಚಿಸಲಾಗುವ ಮೂರು ಆಯ್ಕೆಗಳನ್ನು ಪಟ್ಟಿ ಮಾಡಿದೆ. ಮೊದಲನೆಯದು “ಸಾರ್ವಜನಿಕ ವಿತರಣಾ ವ್ಯವಸ್ಥೆ / ಇತರ ಕಲ್ಯಾಣ ಯೋಜನೆಗಳು ಮತ್ತು ಬಫರ್ ಸ್ಟಾಕ್ನ ಅಗತ್ಯಕ್ಕೆ ಕೇಂದ್ರ ಪೂಲ್ ನಲ್ಲಿ ಸಂಗ್ರಹವನ್ನು ನಿರ್ಬಂಧಿಸುವುದು ಆಗಿದೆ. ಈ ಆಯ್ಕೆಯನ್ನು ಅಧ್ಯಯನ ಮಾಡಲು, ಅದು ಉತ್ಪಾದನೆ ಮತ್ತು ಸಂಗ್ರಹಣೆಯ ರಾಜ್ಯವಾರು ಅನುಪಾತದ ಅಂಕಿ ಅಂಶಗಳನ್ನು ಕೋರಿದೆ. ಜೊತೆಗೆ ಪ್ರತೀ ಎಕರೆಗೆ ಸೀಲಿಂಗ್ ಅನ್ನು ನಿಗದಿಪಡಿಸುವ ಕಾರ್ಯಸಾಧ್ಯತೆ ಮತ್ತು ಸಂಗ್ರಹಕ್ಕಾಗಿ ಗರಿಷ್ಠ ಸಂಖ್ಯೆಯ ಬಿತ್ತನೆ ಪ್ರದೇಶದ ಮಾಹಿತಿ ಕೋರಿದೆ.
Also Read: ಕೃಷಿ ಕಾನೂನು ವಿರೋಧಿಸುವ ರೈತರಿಗೆ ಅನುಭೂತಿ ತೋರಿಸುತ್ತಲೇ ಅದೇ ಕಾನೂನನ್ನು ಜಾರಿಗೊಳಿಸಿದ AAP
ಅಧ್ಯಯನದ ಎರಡನೇ ಆಯ್ಕೆಯ ಪ್ರಕಾರ ಮುಕ್ತ ಮಾರುಕಟ್ಟೆಯಲ್ಲಿ ಎಂಎಸ್ಪಿಗಿಂತ ಕಡಿಮೆ ಬೆಲೆ ಇದ್ದರೆ ನಿಗದಿತ ಮಿತಿಯನ್ನು ಮೀರದ ಪ್ರಮಾಣದ ಬೆಳೆಗೆ ರೈತರಿಗೆ ಬೆಲೆ ವ್ಯತ್ಯಾಸದ ಹಣವನ್ನು ಪಾವತಿಸುವ ಯೋಜನೆಯನ್ನು ಪರಿಚಯಿಸಲಿದೆ. ಇದಕ್ಕಾಗಿ, ಸಂಘಟಿತ ಮಂಡಿಗಳು ಮತ್ತು ತಾತ್ಕಾಲಿಕ ಖರೀದಿ ಕೇಂದ್ರಗಳ ರಾಜ್ಯವಾರು ರಚನೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿಯ ಅಗತ್ಯವಿತ್ತು, ಹಾಗೆಯೇ ಪಟ್ಟಭದ್ರ ಹಿತಾಸಕ್ತಿಗಳಿಂದ ಕೃತಕ ಬೆಲೆಗಳ ಏರಿಳಿತವನ್ನು ತಡೆಯಲು ಸುರಕ್ಷತೆಯನ್ನು ಜಾರಿಗೆ ತರಬೇಕು. ಇದಲ್ಲದೆ ನಿಗದಿತ ಮಿತಿಯ ಹೊರಗೆ ರೈತರು ತಮ್ಮ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕ್ವಿಂಟಲ್ಗೆ ಫ್ಲಾಟ್ ದರದಲ್ಲಿ ಹಣಕಾಸಿನ ನೆರವು ನಿಗದಿಪಡಿಸಬಹುದು ಎಂದು ಸರ್ಕಾರ ಹೇಳಿದೆ. ಇದಕ್ಕಾಗಿ, ಇದು ಖರೀದಿ ಋತುವಿನಲ್ಲಿ ಸಂಗ್ರಹಿಸುವ ಅಕ್ಕಿ ಮತ್ತು ಗೋಧಿಯ ಬೆಲೆಯ ಸರಾಸರಿ ವ್ಯತ್ಯಾಸದ ಮಾಹಿತಿಯನ್ನು ರಾಜ್ಯಗಳಿಂದ ಪಡೆಯಲು ಯೋಜಿಸಿದೆ.ಇದಲ್ಲದೆ ಅಕ್ಕಿ ಮತ್ತು ಗೋಧಿ ಬೆಳೆಯುವ ರಾಜ್ಯಗಳಲ್ಲಿ ಇತರ ಬೆಳೆಗಳ ಸಂಗ್ರಹವನ್ನು ಉತ್ತೇಜಿಸುವುದು ಕೊನೆಯ ಆಯ್ಕೆಯಾಗಿದೆ.
Also Read: ರೈತ ಪ್ರತಿಭಟನೆ ಸುತ್ತ ಸುಳ್ಳು ಮಾಹಿತಿ ಬಿತ್ತರಿಸಿದ ಬಿಜೆಪಿ ಐಟಿ ಸೆಲ್
ಸಿಎಸಿಪಿ ವರದಿಯು ಸರ್ಕಾರವು ತನ್ನ ಖರೀದಿ ಹೊರೆಯನ್ನು ಕಡಿಮೆ ಮಾಡಲು “ಸೀಲಿಂಗ್” ಮಿತಿಯನ್ನು ಜಾರಿಗೆ ತರಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರವು ಸೀಲಿಂಗ್ ಮಿತಿ ಜಾರಿಗೆ ತಂದರೆ ರೈತನಿಗೆ ನಷ್ಟವೇ ಆಗಲಿದೆ. ಉದಾಹರಣೆಗೆ, ಎರಡು ಹೆಕ್ಟೇರ್ ಭೂಮಿ ಹೊಂದಿರುವ ರೈತನು ಉತ್ಪಾದಿಸುವ ಅಕ್ಕಿಯ ಮಿತಿಯನ್ನು ನಿಗದಿಪಡಿಸಿದರೆ, ಅದಕ್ಕಿಂತ ಹೆಚ್ಚು ಅಕ್ಕಿ ಉತ್ಪಾದನೆ ಆದರೆ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಎರಡು ಹೆಕ್ಟೇರ್ ಗಿಂತ ಹೆಚ್ಚು ಭೂಮಿ ಹೊಂದಿದ್ದವನು ಎರಡು ಹೆಕ್ಟೇರ್ ನಲ್ಲಿ ಬೆಳೆದಷ್ಟಕ್ಕೆ ಮಾತ್ರ ಕನಿಷ್ಟ ಬೆಂಬಲ ಬೆಲೆ ಪಡೆಯುತ್ತಾನೆ. ಹೆಚ್ಚುವರಿಯನ್ನು ಮುಕ್ತ ಮಾರುಕಟ್ಟೆಯಲ್ಲೆ ಮಾರಾಟ ಮಾಡಬೇಕಿದೆ. ಇಲ್ಲಿ ವ್ಯಾಪಾರಿಯೇ ಬೆಲೆ ನಿಗದಿ ಮಾಡುವುದರಿಂದ ರೈತನಿಗೆ ನಷ್ಟ ಖಚಿತ. ಸಂಗ್ರಹ ಪ್ರಮಾಣದ ಮಿತಿಯನ್ನು ಹೇರಿದರೆ, ಪಂಜಾಬ್ ಮತ್ತು ಹರಿಯಾಣದಿಂದ ಸಂಗ್ರಹವು ಪ್ರಸ್ತುತ ಸುಮಾರು 15.3 ಮಿಲಿಯನ್ ಟನ್ ಸಂಗ್ರಹದಿಂದ ಸುಮಾರು 10.3 ಮಿಲಿಯನ್ ಟನ್ಗಳಿಗೆ ಇಳಿಕೆ ಆಗುತ್ತದೆ. ಹೀಗಾಗಿ ರೈತ ಸಮುದಾಯ ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ಶತಾಯ ಗತಾಯ ವಿರೋಧಿಸುತ್ತಿದೆ.