ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ರಿಗೆ ಕರೋನಾ ಸೋಂಕು ಇರುವುದು ಧೃಡಪಟ್ಟಿದೆ. ಅವರನ್ನು ರಾಜ್ಯ ರಾಜಧಾನಿ ಭೋಪಾಲ್ನ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಮುಖ್ಯಮಂತ್ರಿ COVID-19 ರೋಗಲಕ್ಷಣಗಳನ್ನು ಹೊಂದಿದ್ದ ಹಿನ್ನಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ಫಲಿತಾಂಶ ಕೋವಿಡ್ ಇರುವುದನ್ನು ಧೃಡೀಕರಿಸಿದೆ.
ಈ ಕುರಿತು ಸ್ವತಃ ಶಿವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿ ಬರೆದ ಟ್ವೀಟ್ನಲ್ಲಿ: “ನನ್ನ ಪ್ರಿಯ ದೇಶವಾಸಿಗಳೇ, ನನ್ನಲ್ಲಿ ಕೋವಿಡ್-19 ಲಕ್ಷಣಗಳು ಕಂಡುಬಂದದ್ದರಿಂದ ಪರೀಕ್ಷೆಗೆ ಒಳಗಾಗಿದ್ದೇನೆ. ವರದಿಯು ಕೋವಿಡ್-19 ಇದರುವುದನ್ನು ಧೃಡೀಕರಿಸಿದೆ. ವೈದ್ಯರ ಸಲಹೆಯ ಪ್ರಕಾರ ಎಲ್ಲಾ ಮಾರ್ಗಸೂಚಿಗಳನ್ನು ನಾನು ಅನುಸರಿಸುತ್ತಿದ್ದೇನೆ” ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಚೌಹಾನ್ ಮಂತ್ರಿಮಂಡಲದ ಸಚಿವ ಅರವಿಂದ್ ಸಿಂಗ್ ಭಡೋರಿಯಾ ಅವರು ಎರಡು ದಿನಗಳ ಹಿಂದೆ ಸೋಂಕಿಗೆ ಒಳಗಾಗಿದ್ದಾರೆ ಎಂಬ ವರದಿ ಬಂದಿತ್ತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಚಿವ ಭಡೋರಿಯಾ ಕೂಡ ಇದ್ದರು.