ಭಾರತದಲ್ಲಿ ಕರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭಾರತೀಯ ರೈಲ್ವೇ ತನ್ನ ಸೇವೆಯನ್ನು ಆಗಸ್ಟ್ 12 ರವರೆಗೆ ಸ್ಥಗಿತಗೊಳಿಸಿದೆ. ಈ ಕುರಿತು ನೋಟೀಸ್ ಹೊರಡಿಸಿರುವ ರೈಲ್ವೇ ಇಲಾಖೆಯು ಈಗಾಗಲೇ ಮುಂಗಡ ಟಿಕೆಟ್ ಕಾಯ್ದರಿಸಿದವರ ಸಂಪೂರ್ಣ ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದೆ.
ಎಲ್ಲಾ ರೀತಿಯ ಪ್ಯಾಸೆಂಜರ್ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರೈಲ್ವೇ ಇಲಾಖೆ ಆಗಸ್ಟ್ ತಿಂಗಳ 12 ನೇ ತಾರೀಕಿನವರೆಗೆ ಸೇವೆಯಿಲ್ಲ ಎಂದು ಹೇಳಿದೆ. ಅಂತರಾಜ್ಯ ಪ್ರಯಾಣಿಕರಲ್ಲಿ ಕರೋನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಂದಾಜಿಸಲಾಗಿದೆ.







