ಬಹಳಷ್ಟು ಆತಂಕಕ್ಕೆ ಕಾರಣವಾಗಿದ್ದ ಭಾರತ ಚೀನಾ ಘಡಿ ಸಂಘರ್ಷ ವಿಚಾರದಲ್ಲಿ ಕೊನೆಗೂ ಒಮ್ಮತ ಮೂಡಿದೆ. ಉಭಯ ರಾಷ್ಟ್ರಗಳ ನಡುವೆ ನಡೆದಂತಹ ಉನ್ನತ ಹಂತದ ಮಾತುಕತೆಯಲ್ಲಿ ಸಂಘರ್ಷದಿಂದ ಹಿಂದೆ ಸರಿಯಲು ಪರಸ್ಪರ ಸಹಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಭಾರತ ಮತ್ತು ಚೀನಾದ ಕೋರ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ, ವಾಸ್ತವ ಗಡಿ ರೇಖೆಯ ನಾಲ್ಕು ಕಡೆಗಳಲ್ಲಿ ನಿಯೋಜಿಸಿದ್ದಂತಹ ಸೇನಾ ತುಕಡಿಗಳನ್ನು ವಾಪಾಸು ಪಡೆಯುವ ಕ್ರಮಗಳ ಕುರಿತು ಚರ್ಚೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸದ್ಯದ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಸೇನಾಪಡೆ ಮುಖ್ಯಸ್ಥ ಎಂ. ಎಂ ನರವಾನೆ ಲಡಾಖ್ಗೆ ತೆರಳಲಿದ್ದು ಅಲ್ಲಿ 14 ಜನ ಕೋರ್ ಸೇನಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಈವರೆಗೆ ನಡೆದಿರುವ ಮಾತುಕತೆಯು ಸೌಹಾರ್ದಯುತವಾಗಿ ಹಾಗೂ ಸಕಾರಾತ್ಮಕವಾಗಿ ಇದ್ದವು ಎಂದು ಮೂಲಗಳು ತಿಳಿಸಿವೆ.
Also Read: ಭಾರತ-ಚೀನಾ ಗಡಿ ವಿವಾದ: ಭಾರತದ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳು