ಜೆಡಿಯು ವಿರುದ್ದ ತೊಡೆ ತಟ್ಟಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ತಾಳಿರುವ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ನಿತೀಶ್ ಕುಮಾರ್ ವಿರುದ್ದ ಮತ್ತೆ ಗುಡುಗಿದ್ದಾರೆ. ಎಲ್ಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನಿತೀಶ್ ಕುಮಾರ್ರನ್ನು ಜೈಲಿಗಟ್ಟುವುದು ಖಚಿತ ಎಂದವರು ಹೇಳಿದ್ದಾರೆ.
ಬಿಹಾರದ ಬಕ್ಸರ್ ಜಿಲ್ಲೆಯಲ್ಲಿರುವ ಡುಮ್ರಾವೋನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಚಿರಾಗ್ ಅವರು, ನಾವು ಅಧಿಕಾರಿಕ್ಕೆ ಬಂದರೆ ನಿತೀಶ್ ಕುಮಾರ್ ಮತ್ತು ಅವರ ಅಧಿಕಾರಿಗಳು ಕಂಬಿ ಎಣಿಸುವಂತೆ ಮಾಡುತ್ತೇವೆ, ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ದರೂ, ಅದು ಸಂಪೂರ್ಣವಾಗಿ ವಿಫಲವಾಗಿದೆ. ಕಳ್ಳಭಟ್ಟಿ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಳ್ಳಭಟ್ಟಿ ದಂದೆಕೋರರಿಂದ ಸಿಎಂ ನಿತೀಶ್ ಕುಮಾರ್ ಕಿಕ್ಬ್ಯಾಕ್ ಪಡೆಯುತ್ತಿದ್ದಾರೆ,” ಎಂದು ಪಾಸ್ವಾನ್ ಆರೋಪಿಸಿದ್ದಾರೆ.
Also Read: ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?
ಇಷ್ಟಕ್ಕೇ ನಿಲ್ಲದ ಚಿರಾಗ್ ಅವರ ನಿತೀಶ್ ವಿರುದ್ದದ ವಾಗ್ದಾಳಿ ಟ್ವಿಟರ್ಗೂ ಮುಂದುವರೆದಿದೆ. ಟ್ವಿಟರ್ನಲ್ಲಿ ಬಿಜೆಪಿ ಮತದಾರರ ಗಮನವನ್ನು ಸೆಳೆಯುವ ಪ್ರಯತ್ನವನ್ನೂ ಚಿರಾಗ್ ಅವರು ಮಾಡಿದ್ದಾರೆ.
Also Read: ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!
“ರಾಜ್ಯದಲ್ಲಿ ಎಲ್ಲಿ ಎಲ್ಲಾ ಎಲ್ಜೆಪಿಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೋ, ಅಲ್ಲಿ ನಮಗೆ ಮತ ನೀಡಿ ಬಿಹಾರ ಮೊದಲು ಬಿಹಾರಿ ಮೊದಲು ನೀತಿಯನ್ನು ಅನುಷ್ಟಾನಗೊಳಿಸಲು ಅನುವು ಮಾಡಿಕೊಡಿ. ಬೇರೆ ಕಡೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಮತ ನೀಡಿ. ಮುಂದಿನ ಸರ್ಕಾರವು ನಿತೀಶ್ ಮುಕ್ತ ಸರ್ಕಾರವಾಗಿರಲಿದೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
Also Read: ಬಿಹಾರ ಚುನಾವಣೆ: ಬಿಜೆಪಿ ನಾಯಕರಿಗೆ ಮಗ್ಗುಲ ಮುಳ್ಳಾದ ಚಿರಾಗ್ ಪಾಸ್ವಾನ್
ನಿತೀಶ್ ಕುಮಾರ್ ಅವರೊಂದಿಗಿನ ವೈಮನಸ್ಸಿನಿಂದ ಬಿಹಾರದಲ್ಲಿ ಎನ್ಡಿಎ ತೊರೆದಿರುವ ಚಿರಾಗ್ ಪಾಸ್ವಾನ್ ಅವರು ತಮ್ಮನ್ನು ʼಪ್ರಧಾನಿ ಮೋದಿಯ ಹನುಮಂತʼ ಎಂದು ಹೇಳಿಕೊಂಡಿದ್ದರು. ಆದರೆ, ಬಿಜೆಪಿ ಇವರನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ನಿರಾಕರಿಸಿ, ಮತ ವಿಭಜಕ ಎಂದು ಜರೆದಿತ್ತು. ಇದರಿಂದ ಕುಪಿತರಾಗಿದ್ದ ಚಿರಾಗ್, “ಯೋಚಿಸಿ ಮಾತನಾಡಿ” ಎಂದು ಬಿಹಾರದ ಬಿಜೆಪಿ ಮುಖಂಡರಿಗೆ ಎಚ್ಚರಿಕೆಯನ್ನೂ ನೀಡಿದ್ದರು.
Also Read: ಬಿಹಾರ ಚುನಾವಣೆ: NDA ಮೈತ್ರಿಕೂಟದಿಂದ ಹೊರನಡೆದ LJP ಏನು ಸಾಧಿಸಬಲ್ಲದು?