• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ನಿರ್ಭಯ ಪ್ರಕರಣಕ್ಕೂ ಹಥ್ರಾಸ್‌ ಪ್ರಕರಣಕ್ಕೂ ಇರುವ ವ್ಯತ್ಯಾಸವೇನು?

by
October 7, 2020
in ದೇಶ
0
ನಿರ್ಭಯ ಪ್ರಕರಣಕ್ಕೂ ಹಥ್ರಾಸ್‌ ಪ್ರಕರಣಕ್ಕೂ ಇರುವ ವ್ಯತ್ಯಾಸವೇನು?
Share on WhatsAppShare on FacebookShare on Telegram

2012-13ರಲ್ಲಿ ದೆಹಲಿ ಬಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ರೀತಿಯಲ್ಲಿಯೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯಬಹುದೇ ಎಂಬ ಕಲ್ಪನೆಯೂ ಇರದಿದ್ದ ದೇಶದ ಕೋಟ್ಯಾಂತರ ಜನ ಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸಿದ್ದರು. ಬಹುಶಃ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ಇದಾಗಿದ್ದು ಇಡೀ ದೇಶಾದ್ಯಂತ ಜಾತಿ ಮತ ಧರ್ಮ ಲೆಕ್ಕಿಸದೆ ಜನರು ಸ್ವ ಇಚ್ಚೆಯಿಂದ ಪ್ರತಿಭಟನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಮಹಿಳೆಯರು ಬೀದಿಗಿಳಿಯುತ್ತಿದ್ದಾಗ, ಪ್ರತಿಭಟನಾ ಆಂದೋಲನದಲ್ಲಿದ್ದ ನೂರಾರು ಯುವ ಭಾರತೀಯರು ಸೇರಿದಂತೆ ಸ್ತ್ರೀವಾದಿ ಪ್ರತಿಭಟನಾಕಾರರಲ್ಲಿ ಆಕ್ರೋಶ ಮತ್ತು ಆಯಾಸ ಕಂಡು ಬಂದಿತ್ತು. ಆದಾಗ್ಯೂ, ಆಕ್ರೋಶ ಮತ್ತು ಆಯಾಸದ ಮೂಲಕ, ಸಾಮಾಜಿಕ ಜಾಗೃತಿ ಮತ್ತು ಸಾಂಸ್ಥಿಕ ಬದಲಾವಣೆಯ ಭರವಸೆಯು ಪ್ರತಿಭಟನೆಗೆ ಶಕ್ತಿ ತುಂಬಿತು.

ದೇಶದಲ್ಲಿ ಹೆಚ್ಚಿದ ಅತ್ಯಾಚಾರ ಸಂಸ್ಕೃತಿ, ಸಂತ್ರಸ್ಥೆಯ ಮೇಲೆಯೇ ಆಪಾದನೆ ಹೊರಿಸುವುದು ಮತ್ತು ಮಹಿಳಾ ಸುರಕ್ಷತೆಯ ಹೆಸರಿನಲ್ಲಿ ಮಹಿಳೆಯರ ಸ್ವಾಯತ್ತತೆಯ ಮೇಲಿನ ಆಕ್ರಮಣಗಳ ಬಗ್ಗೆ ಮಹಿಳಾವಾದಿಗಳ ಬಗೆಗಿನ ಕಾಳಜಿಗಳಿಗೆ ಸಮಾಜವು ಮೊದಲ ಬಾರಿಗೆ ಸ್ಪಂದಿಸಿತು. ಲೈಂಗಿಕ ದೌರ್ಜನ್ಯವನ್ನು ವ್ಯಾಖ್ಯಾನಿಸುವ ಪ್ರಸ್ತುತ ಕಾನೂನುಗಳು ಇಡೀ ಶ್ರೇಣಿಯ ಸಂತ್ರಸ್ಥೆಯರ ಅನುಭವಗಳನ್ನು ಹೊರತುಪಡಿಸಿವೆ ಎಂದು ತಿಳಿದುಕೊಳ್ಳಲು ಸರ್ಕಾರಗಳಿಗೆ ಬಹಳ ಸಮಯ ಬೇಕಾಗಬಹುದು. 2020ರಲ್ಲಿ, ಹತ್ರಾಸ್ನಲ್ಲಿ ದಲಿತ ಯುವತಿಯೊಬ್ಬರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಸುತ್ತ ದೇಶಾದ್ಯಂತ ಸ್ಪಂದನೆಯೊಂದಿಗೆ, ಪರಿಸ್ಥಿತಿಯು 2012 ರ ನಿರ್ಭಯ ಪ್ರಕರಣಕ್ಕೆ ಕೆಲವು ರೀತಿಯಲ್ಲಿ ಹೋಲುತ್ತದೆ ಮತ್ತು ಕೆಲವು ವಿಷಯದಲ್ಲಿ ಭಿನ್ನವಾಗಿಯೂ ಇದೆ.

Also Read: ಯೋಗಿ ಆದಿತ್ಯನಾಥ್ ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳಬಲ್ಲರೆ?

ಈ ಸಮಯದಲ್ಲಿ, ಪ್ರತಿಭಟನೆಯು ಸಾಮಾಜಿಕ ಬದಲಾವಣೆಯ ಜ್ವಾಲೆಯನ್ನು ಜೀವಂತವಾಗಿರಿಸುವುದರ ಬಗ್ಗೆ, ಜಾತಿ ವಿರೋಧಿ ಮತ್ತು ಪಿತೃಪ್ರಭುತ್ವದ ವಿರೋಧಿ ಜಾಗೃತಿಯನ್ನು ಬಹಿರಂಗವಾಗಿ ಮನುವಾದಿ ಆಡಳಿತದ ಮುಖಾಂತರ ಆ ಜ್ವಾಲೆಯನ್ನು ನಂದಿಸಲು ನಿರ್ಧರಿಸಿದೆ. 2012 ರಲ್ಲಿ, ದೆಹಲಿ ಸರ್ಕಾರ, ಕೇಂದ್ರದಲ್ಲಿನ ಯುಪಿಎ ಸರ್ಕಾರ, ಮತ್ತು ಆಡಳಿತ ಪಕ್ಷ – ಕಾಂಗ್ರೆಸ್ ಪ್ರತಿಭಟನೆಯಿಂದ ರಕ್ಷಣಾತ್ಮಕತೆಯನ್ನು ತೋರಿತು, ಅವರು ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆಯ ಮೂಲಕ ಪ್ರತಿಕ್ರಿಯಿಸಿದರು. ಆಡಳಿತ ಪಕ್ಷದ ಮುಖಂಡರು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ನ್ಯಾಯಮೂರ್ತಿ ವರ್ಮಾ ಸಮಿತಿಯನ್ನು ರಚಿಸಿತು, ಇದು ಎಲ್ಲಾ ಸ್ತ್ರೀವಾದಿಗಳ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿತು. ಸ್ತ್ರೀವಾದಿ ವಿದ್ವಾಂಸರು ಮತ್ತು ಕಾರ್ಯಕರ್ತರು, ದಲಿತ ಸ್ತ್ರೀವಾದಿಗಳು, LGBTQ ಸ್ತ್ರೀವಾದಿಗಳು, ಸಂಘರ್ಷದ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ತ್ರೀವಾದಿಗಳು, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಸಂಘಟಿಸುವುದು ಹೀಗೆ. ವರ್ಮಾ ಸಮಿತಿಯ ಶಿಫಾರಸುಗಳು ಮಹಿಳೆಯರಿಗಾಗಿ ಹಕ್ಕುಗಳ ಮಸೂದೆಯನ್ನು ರೂಪಿಸಿವೆ, ವರ್ಮಾ ಸಮಿತಿಯು ಶಿಫಾರಸು ಮಾಡಿದ ಕಾನೂನಿನ ಬದಲಾವಣೆಗಳನ್ನು ಆ ಸಮಯದಲ್ಲಿ ಸರ್ಕಾರವು ಭಾಗಶಃ ಜಾರಿಗೆ ತಂದಿತ್ತು, ಆದರೆ ಇನ್ನೂ, ಕೆಲವು ಕಾನೂನು ಬದಲಾವಣೆಗಳ ತಿದ್ದುಪಡಿ ಪ್ರಕ್ರಿಯೆಗಳು ಸರಿಯಾದ ದಿಕ್ಕಿನಲ್ಲಿ ಮುಂದುವರಿದಿವೆ.

Also Read: ಹಾಥ್ರಾಸ್‌ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿ ಸಭೆ ಕರೆದ ಮೇಲ್ಜಾತಿಯ ಬಿಜೆಪಿ ನಾಯಕ

2020 ರಲ್ಲಿ, ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ, ಮಹಿಳೆಯರು ಮತ್ತು ದಲಿತರ ಸಾಂವಿಧಾನಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಭಾವಿಸುವ ಸರ್ಕಾರವಿದೆ. ಬದಲಾಗಿ, ನಮ್ಮಲ್ಲಿರುವುದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಯಾಂಗದ ಸಂಪೂರ್ಣ ಬಲವನ್ನು ಬಳಸಿಕೊಂಡು ಮನುವಾದಿ ಜಾತಿ ಪಿತೃಪ್ರಭುತ್ವದ ಆದೇಶವನ್ನು ಹೇರಲು ಮತ್ತು ಜಾತಿ ವಿರೋಧಿ, ಅತ್ಯಾಚಾರ ವಿರೋಧಿ ಆಂದೋಲನವನ್ನು ದಮನಿಸಲು ಬಳಸುತಿದ್ದಾರೆ. ಪ್ರತಿಪಕ್ಷದ ನಾಯಕರು, ದಲಿತ ಮತ್ತು ಮಹಿಳಾ ಸಂಘಟನೆಗಳು ಸಂತ್ರಸ್ತೆಯ ಕುಟುಂಬಕ್ಕೆ ಸ್ತೈರ್ಯ ತುಂಬಲು ಒಗ್ಗಟ್ಟನ್ನು ತೋರಿಸಲು ಭೇಟಿಯಾಗುತ್ತಿದ್ದಾರೆ – ಆದರೆ ಯುಪಿಎ ಸರ್ಕಾರವನ್ನು ಗುರಿಯಾಗಿಸಿಕೊಂಡು ಭ್ರಷ್ಟಾಚಾರ-ವಿರೋಧಿ ಮತ್ತು ಅತ್ಯಾಚಾರ-ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದ ವಿರೋಧ ಪಕ್ಷಗಳ ಪರವಾಗಿ ಕಾರ್ಯನಿರ್ವಹಿಸಿದ ಅದೇ ಮಾಧ್ಯಮವು ಈಗ ಅತ್ಯಾಚಾರದ ಬಗ್ಗೆ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದೆ. 2012 ರಲ್ಲಿ, ಕಾಂಗ್ರೆಸ್ ತನ್ನ ತಪ್ಪುಗಳಿದ್ದರೂ ಅತ್ಯಾಚಾರವನ್ನು ನಿರಾಕರಿಸಲು, ಸಂತ್ರಸ್ಥೆಯನ್ನು ಸುಳ್ಳು ಎಂದು ಬ್ರಾಂಡ್ ಮಾಡಲು ಅಥವಾ ಕೋಮು ಭಾವನೆಗಳನ್ನು ಹರಡಲು ಪ್ರಯತ್ನಿಸಲಿಲ್ಲ. 2020 ರಲ್ಲಿ, ಇದಕ್ಕೆ ವಿರುದ್ಧವಾಗಿ, ಆಡಳಿತಾರೂಢ ಬಿಜೆಪಿ ತನ್ನ ಕೋಮುವಾದಿ ಮನಸ್ಥಿತಿಯೊಂದಿಗೆ ಪ್ರತಿಕ್ರಿಯಿಸುತ್ತಿದೆ. ಆರೋಪಿಗಳು ಮುಸ್ಲಿಮರಾಗಿರುವ ಅತ್ಯಾಚಾರದ ಪ್ರಕರಣಗಳನ್ನು ಇದು ತೆಗೆಯುತ್ತಿದೆ ಮತ್ತು ವಿಪಕ್ಷಗಳು ಮಹಿಳಾ ಹೋರಾಟಗಾರ್ತಿಯರು ಆ ಪ್ರಕರಣಗಳ ಬಗ್ಗೆ ಏಕೆ ಪ್ರತಿಭಟಿಸುತ್ತಿಲ್ಲ ಎಂದು ಕೇಳುತ್ತದೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ನಡೆದ ಅತ್ಯಾಚಾರವನ್ನು ಇವರು ಏಕೆ ವಿರೋಧಿಸುವುದಿಲ್ಲ ಎಂದು ಅದು ಕೇಳುತ್ತಿದೆ.

Also Read: ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶ ಪೊಲೀಸರು ಸಾಧಿಸಹೊರಟಿರುವುದೇನು ?

ವಿಷಯವೆಂದರೆ, ಆ ನಿದರ್ಶನಗಳಲ್ಲಿ, ಅತ್ಯಾಚಾರದ ಆರೋಪಿತರನ್ನು ರಕ್ಷಿಸುವ ಸಮುದಾಯ ಮತ್ತು ನಂಬಿಕೆ ಆಧಾರಿತ ಪಂಚಾಯಿತಿಗಳು ಇರಲಿಲ್ಲ. ಪೊಲೀಸರು ಮತ್ತು ಜಿಲ್ಲಾಡಳಿತವು ಸಂತ್ರಸ್ತೆಯ ದೇಹವನ್ನು ಸುಡಲು ಪೆಟ್ರೋಲ್ ಬಳಸಿತ್ತೆ? ಇಲ್ಲ, ಅದು ಕೂಡ ಹತ್ರಾಸ್ ಘಟನೆ ಭಿನ್ನವಾಗಿದೆ ಇಲ್ಲಿ ಸರ್ಕಾರವು ಸಂತ್ರಸ್ತೆಯ ಕುಟುಂಬದೊಂದಿಗೆ, ಮಾಧ್ಯಮ, ವಿಪಕ್ಷ ನಾಯಕರು, ಹೋರಾಟದ ಸಂಘಟನೆಗಳೊಂದಿಗೆ ಮಾತನಾಡುವುದನ್ನು ನಿರ್ಬಂದಿಸಿತ್ತು. ಅತ್ಯಾಚಾರ-ವಿರೋಧಿ ಪ್ರತಿಭಟನೆಗಳನ್ನು ತಡೆಗಟ್ಟಲಾಗಿದೆ ಆದರೆ ಅತ್ಯಾಚಾರ ಆರೋಪಿಗಳ ರಕ್ಷಣೆಯಲ್ಲಿ ಠಾಕೂರ್ ಜಾತಿ ಪ್ರಾಬಲ್ಯದ ಹಿಂಸಾತ್ಮಕ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಕೊಟ್ಟಿದೆ., ಅಷ್ಟೇ ಅಲ್ಲ ಆಡಳಿತ ಪಕ್ಷವು, ತೆರಿಗೆದಾರರ ಹಣವನ್ನು ಪಿಆರ್ ಕಂಪನಿಗೆ ನೀಡಿ ಸಂತ್ರಸ್ತೆಯನ್ನೆ ಸುಳ್ಳುಗಾರ್ತಿ ಎಂದು ಬ್ರಾಂಡ್ ಮಾಡಲು ಮತ್ತು ನಾಲ್ಕು ಠಾಕೂರ್ ಯುವಕರಿಂದ ಅತ್ಯಾಚಾರ ಮತ್ತು ಕೊಲೆ ಆಗಿರುವುದನ್ನು ನಿರಾಕರಿಸುತ್ತಿದೆ. ಹತ್ರಾಸ್ ಘಟನೆ ಮೇಲಿನ ಆಕ್ರೋಶವು ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧವಾಗಿದೆ ಮತ್ತು ಠಾಕೂರ್ ಯುವಕರು ಮಾಡಿದ ಜಾತಿ-ಪ್ರಾಬಲ್ಯದ ಅತ್ಯಾಚಾರದ ಸತ್ಯವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರವು ಮಾಡಿದ ಪ್ರಯತ್ನದ ವಿರುದ್ದ ಆಕ್ರೋಶವಾಗಿದೆ.

Also Read: ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ

2012 ರಲ್ಲಿ, ಅತ್ಯಾಚಾರವನ್ನು ಪ್ರತಿಭಟಿಸಿದ್ದ ಸ್ತ್ರೀವಾದಿ ಮತ್ತು ಜಾತಿ ವಿರೋಧಿ ಕಾರ್ಯಕರ್ತರು ಸಾಮಾನ್ಯವಾಗಿ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಆರೋಪಗಳನ್ನು ಎದುರಿಸಿಲ್ಲ. ಆದರೆ ಈಗ, ಸ್ತ್ರೀವಾದಿ, ಜಾತಿ ವಿರೋಧಿ ಮತ್ತು ಸಮಾನ ಪೌರತ್ವ ಹಕ್ಕುಗಳ ಹೋರಾಟವನ್ನು ಭಯೋತ್ಪಾದನೆಗೆ ಸಮಾನವಾದ ಅಪರಾಧವೆಂದು ಪರಿಗಣಿಸುವ ಸಂಘಟಿತ ಜಾತಿ ಪ್ರಾಬಲ್ಯ ದ ಸರ್ಕಾರವು ಅಧಿಕಾರದಲ್ಲಿದೆ. ಭೀಮಾ ಕೋರೆಗಾಂವ್ ಹೋರಾಟದಲ್ಲಿ ಮತ್ತು ಸಿಏಏ ಮತ್ತು ಎನ್ ಅರ್ಸಿ ವಿರುದ್ದ ಹೋರಾಟ ಮಾಡಿದ ಕಾರ್ಯಕರ್ತರನ್ನು ಯುಎಪಿಎ ಅಡಿಯಲ್ಲಿ ಜೈಲಿಗೆ ಹಾಕಿರುವನ್ನೂ ನಾವು ನೋಡಿದ್ದೇವೆ. ಈಗ ಅತ್ಯಾಚಾರ ವಿರೋಧಿ ಮತ್ತು ಜಾತಿ ವಿರೋಧಿ ಪ್ರತಿಭಟನಾಕಾರರು ದೇಶದಲ್ಲಿ ಜಾತಿ ಗಲಭೆ ಸೃಷ್ಟಿಸುವ ಮೂಲಕ ಮತ್ತು ಮುಖ್ಯಮಂತ್ರಿಗಳನ್ನೆ ಅವಹೇಳನ ಮಾಡುವ ಅಂತರ್ರಾಷ್ಟ್ರೀಯ ಸಂಚಿನ ಭಾಗವೆಂದು ಆರೋಪಿಸಿ ಹತ್ರಾಸ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಈ ಅಮೂಲಾಗ್ರ ವ್ಯತ್ಯಾಸವು ಎರಡೂ ಅತ್ಯಾಚಾರ ಪ್ರಕರಣಗಳಲ್ಲಿ ಕಂಡು ಬಂದಿದ್ದು ಇದಕ್ಕೆ ಮುಂದಿನ ಚುನಾವಣೆಯಲ್ಲೆ ಜನತೆ ಸೂಕ್ತ ಉತ್ತರ ನೀಡಬೇಕಿದೆ.

Tags: ಉತ್ತರ ಪ್ರದೇಶನಿರ್ಭಯಾ ಅತ್ಯಾಚಾರ ಪ್ರಕರಣನಿರ್ಭಯಾ ಪ್ರಕರಣಸಾಮೂಹಿಕ ಅತ್ಯಾಚಾರಹಥ್ರಾಸ್‌ ಪ್ರಕರಣ
Previous Post

‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?

Next Post

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
Next Post
ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು

Please login to join discussion

Recent News

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ
Top Story

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

by ಪ್ರತಿಧ್ವನಿ
January 14, 2026
Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!
Top Story

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

by ನಾ ದಿವಾಕರ
January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!
Top Story

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

by ಪ್ರತಿಧ್ವನಿ
January 14, 2026
Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

January 14, 2026
ನಡುರಸ್ತೆಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ನಡುರಸ್ತೆಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

January 14, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada