ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಮಿಕವಾಗಿ ಟೀಕೆ ಮಾಡಿದ್ದಾರೆ. ದೇಶವನ್ನು ಒಡೆದು ಆಳುವ ನೀತಿಯ ಕುರಿತು ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಕೇಂದ್ರದ ನೀತಿಯನ್ನು ತಿವಿಯುವ ಪ್ರಯತ್ನ ಮಾಡಿದ್ದಾರೆ.
ಇಂದು ಮುಂಜಾನೆ ಮಾಡಿರುವ ಟ್ವೀಟ್ನಲ್ಲಿ ಪಾಕಿಸ್ತಾಣ, ಇರಾಕ್, ಕೊರಿಯಾ, ವಿಯೆಟ್ನಾಂ ಸಿರಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಇರುವ ಸಾಮ್ಯತೆಗಳೇನು ಎಂದು ಪ್ರಶ್ನಸಿದ್ದರು. ಇದಕ್ಕೆ ತರಹೇವಾರಿ ಉತ್ತರಗಳು ಬಂದು, ಟ್ವಿಟರ್ನಲ್ಲಿ ಒಂದು ಒಳ್ಳೆಯ ಚರ್ಚೆ ಏರ್ಪಟ್ಟಿತ್ತು.
ಸಂಜೆಯ ವೇಳೆಗೆ ತಮ್ಮ ಪ್ರಶ್ನೆಗೆ ತಾವೇ ಉತ್ತರ ನೀಡಿರುವ ರಾಹುಲ್ ಅವರು, ಮೇಲಿನ ಎಲ್ಲಾ ರಾಷ್ಟ್ರಗಳ ನಾಯಕರು ಎಡೆದು ಆಳುವ ನೀತಿಯನ್ನು ಜಾರಿಗೆ ತಂದರು. ಇದರಿಂದಾಗಿ, ಪ್ರಪಂಚದ ಬಲಾಢ್ಯ ಶಕ್ತಿಗಳು ಆ ರಾಷ್ಟ್ರಗಳನ್ನು ತಮ್ಮ ಯುದ್ದದ ಮೈದಾನವಾಗಿ ಬಳಸಿಕೊಂಡವು, ಎಂದು ಹೇಳಿದ್ದಾರೆ.
“ಅಂತಹ ರಾಷ್ಟ್ರಗಳ ಜನರು ತಮ್ಮ ನಾಯಕರ ತಪ್ಪಿಗಾಗಿ ರಕ್ತ ಮತ್ತು ಕಣ್ಣೀರು ಹರಿಸಬೇಕಾಯಿತು,” ಎಂದು ಬರೆದುಕೊಂಡಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಈ ಮಾರ್ಮಿಕ ಟ್ವೀಟ್ಗೆ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ.