• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜಿಂಕೆ ಕೊಂಬುಗಳ ತಿಕ್ಕಾಟಕ್ಕೆ ಮರಗಳು ನಾಶ..! ಶಿವಮೊಗ್ಗ ಸಫಾರಿಯಲ್ಲೊಂದು ಪರಿಹಾರ

by
March 10, 2020
in ಕರ್ನಾಟಕ
0
ಜಿಂಕೆ ಕೊಂಬುಗಳ ತಿಕ್ಕಾಟಕ್ಕೆ ಮರಗಳು ನಾಶ..! ಶಿವಮೊಗ್ಗ ಸಫಾರಿಯಲ್ಲೊಂದು ಪರಿಹಾರ
Share on WhatsAppShare on FacebookShare on Telegram

ಹದಿನೈದು ವರ್ಷಗಳ ಹಿಂದೆ, ಕಾಡು ಇಷ್ಟೊಂದು ಒತ್ತುವರಿಯಾಗಿರಲಿಲ್ಲ. ಸಾಗರದ ಅಂಬ್ಲಿಗೋಳ ಜಲಾಶಯದ ಅಂಚಿನ ರಿಸರ್ವ್‌ ಫಾರೆಸ್ಟ್‌ ಖ್ಯಾತ ಲೇಖಕ ತೇಜಸ್ವಿ ಬರೆದ ಬೆಳ್ಳಂದೂರು ನರಭಕ್ಷಕ ಹುಲಿ ಸರಹದ್ದನ್ನೂ ಹೊಂದಿಕೊಂಡಿತ್ತು. ಈ ಕಾಡಿನ ಮಧ್ಯೆ ಕಲ್ಲು ಮಣ್ಣುಗಳ ರಸ್ತೆಯಲ್ಲಿ ನಾನು ಶಾಲೆಗೆ ಹೋಗುತ್ತಿದ್ದೆ. ಅಂದು ಶನಿವಾರ ಮುಂಜಾನೆ ನಸುಕಿನಲ್ಲೇ ಸೈಕಲ್‌ ತುಳಿಯುತ್ತಿದ್ದ ನನಗೆ ವಿಚಿತ್ರ ಶಬ್ದ ಕೇಳಿತು. ಚಳಿಗಾಲವಾದ್ದರಿಂದ ಮಂಜು ಮುಸುಕಿಕೊಂಡಿತ್ತು. ಸ್ವಲ್ಪ ದೂರದಲ್ಲಿ ಜಿಂಕೆಗಳ ಹಿಂಡು ಕುರುಚಲು ಪೊದೆಗಳ ನಡುವಿನ ಮರಗಳಿಗೆ ಕೊಂಬನ್ನ ತೀಡುತ್ತಿದ್ದವು. ಸೈಕಲ್‌ ಸಪ್ಪಳ ಜೋರಾದಂತೆ ಚಂಗನೇ ಜಿಗಿದು ಮಾಯವಾದವು. ನಾನು ಓಡಾಡುವಾಗಲೆಲ್ಲಾ ಆ ಸ್ಥಳವನ್ನ ಹಾಗೂ ತೊಗಟೆ ಹರಿದ ಮರವನ್ನ ನೋಡಿಕೊಂಡು ಹೋಗುತ್ತಿದ್ದೆ. ಕೆಲವು ದಿನಗಳಲ್ಲಿ ಮರದ ಮೇಲಿನ ಗಾಯವೂ ಮಾಯವಾಗಿತ್ತು.

ADVERTISEMENT

ಕಳೆದ ವಾರ ಶಿವಮೊಗ್ಗದ ಹುಲಿ ಹಾಗೂ ಸಿಂಹಧಾಮಕ್ಕೆ ಹೋಗಿದ್ದೆ. ಅಲ್ಲಿನ ನಿರ್ದೇಶಕರು ಮುಕುಂದ್‌ ಚಂದ್ರ ಅವರು ಜಿಂಕೆ, ಸಾರಂಗದಂತಹ ಕೊಂಬಿರುವ ಪ್ರಾಣಿಗಳಿಂದ ಮರಗಳು ನಾಶವಾಗುವುದರ ಬಗ್ಗೆ ಹೇಳಿದಾಗ ಆಶ್ಚರ್ಯ ಎನಿಸಿತು. ಅವರು ಇದರ ಬಗ್ಗೆ ಮಾಹಿತಿ ನೀಡಲೆಂದು ಸಿಂಹಧಾಮದೊಳಗಿನ ಜಿಂಕೆಗಳ ಮೀಸಲು ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿನ ಸಾಕಷ್ಟು ಮರಗಳಿಗೆ ಮೆಶ್ (ಸುತ್ತಲೂ ತಂತಿಯ ಹೊದಿಕೆಯ ಜಾಲರಿ) ಹಾಕಲಾಗಿತ್ತು. ಕೆಲವು ಮರಗಳಿಗೆ ಒಣ ಕಟ್ಟಿಗೆಯನ್ನ ಚಾಚಲಾಗಿತ್ತು. ಈ ವಿಧಾನದಿಂದ ಮರಗಳ ರಕ್ಷಣೆಯ ಜೊತೆ, ಜಿಂಕೆಗಳಿಗೂ ಅಹ್ಲಾದಕಾರಿ ವಾತಾವರಣವನ್ನೇ ಸೃಷ್ಟಿಸುವುದಾಗಿತ್ತು.

ಮೊದಲನೆಯದಾಗಿ ಸಫಾರಿಯಲ್ಲಿನ ಸಾಕಷ್ಟು ಮರಗಳು ಕಡಿಮೆಯಾಗಲು ಕಾರಣ ವನ್ಯಜೀವಿಗಳೇ, ಅದಕ್ಕೆ ಕುರುಹುಗಳಂತೆ ಮರದ ತೊಗಟೆಗಳು ನಾರಿನಂತೆ ಸೀಳಿಕೊಂಡಿದ್ದವು. ಸುತ್ತಲೂ ತೊಗಟೆ ಬಿಡಿಸಿದರೆ ಮರಗಳು ಒಣಗಿ ನಿಲ್ಲುತ್ತವೆ. ಈ ಸೂಕ್ಷ್ಮ ಹಲವು ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ವೈಲ್ಡ್‌ಲೈಫ್‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಒಣ ಕಟ್ಟಿಗೆಯನ್ನೂ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಈ ಕಟ್ಟಿಗೆಗಳನ್ನೇ ಬಳಸಿ ಮರಗಳ ಸುತ್ತ ಚಾಚಿ ಅದನ್ನ ಹಗ್ಗದಿಂದ ಕಟ್ಟಲಾಗಿದೆ. ಈಗ ಜಿಂಕೆಗಳು ಕೊಂಬುಗಳನ್ನ ತೀಡಲೂ ಬಹುದು.

ತಂತಿ ಜಾಲರಿಗಿಂತ ಶಿವಮೊಗ್ಗ ಸಫಾರಿಯಲ್ಲಿ ಅಳವಡಿಸಿಕೊಂಡ ವಿಧಾನ ಉತ್ತಮ. ಜಪಾನ್‌ನಲ್ಲಿ ಸಿಕಾ ಜಿಂಕೆಗಳ ಸಂತತಿ (ಚಿಕ್ಕ ಗಾತ್ರದ ಜಿಂಕೆಗಳು) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರಿಂದ ಮೃಗಾಲಯದಲ್ಲಿ ಸಾಕಷ್ಟು ಮರಗಳೂ ನಾಶವಾಗಿದ್ದವು. ವೈರ್‌ ಮೆಶ್‌ (ತಂತಿ ಜಾಲರಿ) ಗಳನ್ನ ಅಳವಡಿಸಿ ಮರಗಳನ್ನ ರಕ್ಷಣೆ ಮಾಡಲು ಆರಂಭಿಸಿದರು. ಕೆಲವು ವರ್ಷಗಳಲ್ಲಿ ಈ ಮರಗಳು ಅದೇ ಮೆಶ್‌ನ ತುಕ್ಕಿನಿಂದ ಸಣಕಲಾಗಿದ್ದವು. ಹಾಗೂ ಜಾಲರಿಗಳನ್ನ ಅಳವಡಿಸುವುದರಿಂದ ಜಿಂಕೆಗಳ ಸ್ವಾಭಾವಿಕ ಪ್ರಕ್ರಿಯೆಗಳನ್ನ ಹತ್ತಿಕ್ಕಿದ್ದಂತಾಯ್ತು. ಇದೆಲ್ಲಾ ನೋಡಿದರೆ ಶಿವಮೊಗ್ಗ ಸಫಾರಿಯಲ್ಲಿನಂತೆ ಮರದ ಕಟ್ಟಿಗೆಗಳನ್ನ ಮರಗಳ ಸುತ್ತ ಚಾಚಿಡುವುದು ಉತ್ತಮ ವಿಧಾನ ಅನಿಸದೇ ಇರಲಾರದು.

ಸಾಮಾನ್ಯವಾಗಿ ಜಿಂಕೆಗಳಲ್ಲಿ ಕೊಂಬಿನ ಬುಡದಲ್ಲಿನ ಒಣ ಚರ್ಮದಿಂದ ತುರಿಕೆ ಉಂಟಾಗುತ್ತದೆ. ಇದನ್ನ ಉಜ್ಜಿ ತೆಗೆಯುತ್ತವೆ, ಕೆಲವು ಕೋಡುಗಳನ್ನೇ ಉದುರಿಸಿಕೊಳ್ಳುತ್ತವೆಂದು ಹೇಳುತ್ತಾರೆ. ಆದರೆ ವನ್ಯಜೀವಿ ತಜ್ಞರ ಪ್ರಕಾರ ಕೊಂಬನ್ನ ಉಜ್ಜುವುದಕ್ಕೆ ಹಲವು ಕಾರಣಗಳಿವೆ. ಪ್ರಾಣಿಗಳಲ್ಲಿಯೂ ತನ್ನ ಜಾಗವನ್ನ ಹಾಗೂ ಸರಹದ್ದನ್ನ ಘೋಷಿಸಿಕೊಳ್ಳುವ ಗುಣ ಇರುತ್ತದೆ. ಜಿಂಕೆಯೂ ಸಹ ಮರದ ತೊಗಟೆಯನ್ನತೆಗೆದು ಉಳಿದ ಜಿಂಕೆಗಳಿಗೆ ಸವಾಲು ಹಾಕುತ್ತೆ. ಕೆಲವೊಮ್ಮೆ ಕಾಲುಕೆದರಿ ಜಗಳ ಕಾಯುವಂತೆ ಕೋಡು ಉಜ್ಜಿ ಜಗಳಕ್ಕೆ ನಿಲ್ಲುತ್ತವೆ. ಬಹಳ ಸೂಕ್ಷ್ಮವಾಗಿ ಚಲನವಲನಗಳನ್ನ ಗಮನಿಸಿದರೆ ಅವುಗಳ ಸ್ನಾಯುಗಳಿಗೆ ವ್ಯಾಯಾಮವೂ ಕೆಲವೊಮ್ಮೆ ಆಗುತ್ತೆ.

ಹೀಗೆ ನಾನಾ ಕಾರಣದಿಂದ ತೊಗಟೆಯನ್ನ ಎತ್ತಿದ ಮೇಲೆ ಆ ಮರಗಳಿಗೆ ಬೇರುಗಳಿಂದ ಬರುವ ಪೋಷಕಾಂಶಗಳ ಪೂರೈಕೆ ಕಡಿತಗೊಳ್ಳುತ್ತದೆ. ಹೀಗೆ ಮರಗಳು ಕೆಲವೇ ದಿನಗಳಲ್ಲಿ ಬಾಡಿ ಬೀಳುತ್ತವೆ. ಮನುಷ್ಯ ಕೂಡ ಈ ವಿಧಾನ ಬಳಸಿ ಎಷ್ಟೋ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಸಫಾರಿ ತರಹ ಎಲ್ಲಾ ಕಡೆ ಕಟ್ಟಿಗೆಯ ಹೊದಿಕೆ ಹೊರಿಸಲಾಗದು ಆದರೆ ಕಾಯ್ದಿರಿಸಿದ ಸೀಮಿತ ಪ್ರದೇಶದಲ್ಲಿಯಾದರೂ ಅಳವಡಿಸಿಕೊಳ್ಳಬಹುದು.

Tags: Shivamogga SafariWildlifeಜಿಂಕೆಶಿವಮೊಗ್ಗ ಸಫಾರಿ
Previous Post

ಮಧ್ಯಂತರಕ್ಕೆ ಬಂದು ನಿಂತ ಮಧ್ಯಪ್ರದೇಶ ಸರ್ಕಾರ..!

Next Post

ಬೆಂಗಳೂರಿಗೆ ಶರಾವತಿ: ಮಲೆನಾಡಿಗರನ್ನು ರೊಚ್ಚಿಗೆಬ್ಬಿಸಿದ ಹೊಸ ಪ್ರಸ್ತಾಪ!

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಬೆಂಗಳೂರಿಗೆ ಶರಾವತಿ: ಮಲೆನಾಡಿಗರನ್ನು ರೊಚ್ಚಿಗೆಬ್ಬಿಸಿದ ಹೊಸ ಪ್ರಸ್ತಾಪ!

ಬೆಂಗಳೂರಿಗೆ ಶರಾವತಿ: ಮಲೆನಾಡಿಗರನ್ನು ರೊಚ್ಚಿಗೆಬ್ಬಿಸಿದ ಹೊಸ ಪ್ರಸ್ತಾಪ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada