• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼಕಶ್ಮೀರ್ ಟೈಮ್ಸ್ʼ ಪತ್ರಿಕಾ ಕಛೇರಿಯನ್ನು ಬಲವಂತದಿಂದ ಮುಚ್ಚಿಸಿದ ಸರ್ಕಾರ; EGI ಖಂಡನೆ

by
October 22, 2020
in ದೇಶ
0
ʼಕಶ್ಮೀರ್ ಟೈಮ್ಸ್ʼ ಪತ್ರಿಕಾ ಕಛೇರಿಯನ್ನು ಬಲವಂತದಿಂದ ಮುಚ್ಚಿಸಿದ ಸರ್ಕಾರ; EGI ಖಂಡನೆ
Share on WhatsAppShare on FacebookShare on Telegram

ಕಶ್ಮೀರ್‌ ಟೈಮ್ಸ್‌ ಪತ್ರಿಕೆಯನ್ನು ಜಮ್ಮು&ಕಾಶ್ಮೀರ ಆಡಳಿತ ಮುಚ್ಚಿದರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜಮ್ಮು ಕಾಶ್ಮೀರದ ಹಳೆಯ ಪತ್ರಿಕೆಯಾದ ಕಶ್ಮೀರ್‌ ಟೈಮ್ಸ್‌ ಅನ್ನು ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಪತ್ರಿಕೆಯ ಆಡಳಿತ ಮಂಡಳಿ, ಕಛೇರಿಗೆ ಬಂದ ಅಧಿಕಾರಿಗಳು ಸರಿಯಾದ ಕ್ರಮವಿಲ್ಲದೆ ಏಕಾಏಕಿ ಪತ್ರಿಕಾ ಕಛೇರಿಯನ್ನು ಮುಚ್ಚಿಸಿದ್ದಾರೆ, ಅಧಿಕಾರಿಗಳೊಂದಿಗೆ ಕಛೇರಿ ಮುಚ್ಚಲು ಇರುವ ಆದೇಶ ಪತ್ರದ ಪ್ರತಿಯನ್ನು ಕೇಳಿದಾಗ, ನಮ್ಮಲ್ಲಿ ಯಾವುದೇ ಆದೇಶ ಪತ್ರವಿಲ್ಲ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸರ್ಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಣಿವೆ ರಾಜ್ಯದ ಪತ್ರಕರ್ತರು ಕಶ್ಮೀರ್‌ ಟೈಮ್ಸ್‌ ನ ಬೆಂಬಲಕ್ಕೆ ನಿಂತಿದ್ದಾರೆ. ಇದು ಅವಿಭಜಿತ ಜಮ್ಮು ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯವನ್ನು ಹಣಿಯುವ ಬೆದರಿಕೆ ತಂತ್ರ ಎಂದು ಹೇಳಲಾಗಿದೆ.

ಸರ್ಕಾರದ ಕ್ರಮವನ್ನು ಭಾರತದ ಸಂಪಾದಕರ ಸಂಘವೂ (Editors Guild of India) ಖಂಡಿಸಿದ್ದು, ಸರ್ಕಾರದ ನಡೆಯು ಕೇಂದ್ರಾಡಳಿತ ಪ್ರದೇಶಗಳ ಸ್ವತಂತ್ರ ಮಾಧ್ಯಮಗಳ ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಪ್ರಕ್ರಿಯೆ ಎಂದು ಕರೆದಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ EGI, ಕಶ್ಮೀರಿ ಟೈಮ್ಸ್‌ ನ ಮುಚ್ಚುವಿಕೆಯು ಖಂಡನೀಯ, ಇದು ಕೇಂದ್ರಾಡಳಿತ ಪ್ರದೇಶಗಳಾದ ಲಢಾಖ್‌, ಜಮ್ಮು ಮತ್ತು ಕಾಶ್ಮೀರದ ಮಾಧ್ಯಮಗಳಿಗೆ ಗೊಂದಲದ ಪರಿಣಾಮವನ್ನು ಬೀರಿದೆ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಮಾಧ್ಯಮಗಳು, ಪತ್ರಿಕೆಗಳು ಈಗಾಗಲೇ ಸಂಘರ್ಷಗಳಿಂದ ಧ್ವಂಸಗೊಂಡಿವೆ. ಸಂಪಾದಕರು ಹಾಗೂ ವರದಿಗಾರರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ದಶಕದಿಂದ ಸ್ಥಿರವಾಗಿ ಜಾಹಿರಾತನ್ನು ಕಳೆದುಕೊಂಡಿವೆ, ಕರೋನಾ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ನಿಂದಾಗಿ ಆದಾಯ ನಿಂತಿದೆ. ಇಂಟರ್‌ನೆಟ್‌ ವೇಗವನ್ನು ಸರ್ಕಾರ ನಿಯಂತ್ರಿಸುತ್ತಿರುವುದರಿಂದ ಆನ್‌ಲೈನ್‌ ಆವೃತ್ತಿಗಳೂ ನಿರಾಶದಾಯಕವಾಗಿದೆ.

The Editors Guild has issued a statement on government actions against media in Jammu and Kashmir pic.twitter.com/dpdaK5z8oN

— Editors Guild of India (@IndEditorsGuild) October 22, 2020


ADVERTISEMENT

ಈ ಕರಾಳ ಕಾಲದಲ್ಲಿ ಹೆಚ್ಚು ಅಗತ್ಯವಿರುವ ಮಾಧ್ಯಮಗಳಿಗೆ ಸಹಾಯ ಮಾಡುವ ಬದಲು, ಯಾವುದೇ ಮುನ್ಸೂಚನೆಯಿಲ್ಲದೆ ಆಡಳಿತವು ಕಾಶ್ಮೀರ ಟೈಮ್ಸ್ ಕಚೇರಿಯ ಮೇಲೆ ಹಿಡಿತ ಸಾಧಿಸಿ, ಅದನ್ನು ಮುಚ್ಚಿಸಿದೆ. ಸಂಪಾದಕರೂ ಸೇರಿದಂತೆ ಕಛೇರಿ ನೌಕರರಿಗೆ ಕಛೇರಿಯಲ್ಲಿರುವ ದಾಖಲೆಗಳನ್ನು, ಕಂಪ್ಯೂಟರ್‌, ಪೀಠೋಪಕರಣಗಳನ್ನು ಪಡೆಯಲೂ ನಿರಾಕರಿಸಲಾಗಿದೆ.

ರಾಜ್ಯ ಆಡಳಿತದ ಕ್ರಮವು ಕಾಶ್ಮೀರ ಟೈಮ್ಸ್‌ಗೆ ಮಾತ್ರವಲ್ಲ, ಕೇಂದ್ರಾಡಳಿತ ಪ್ರದೇಶದ ಸಂಪೂರ್ಣ ಮುಕ್ತ ಮಾಧ್ಯಮಕ್ಕೂ ಪ್ರತೀಕಾರಕ ಮತ್ತು ಹಾನಿಕಾರಕವೆಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪರಿಗಣಿಸುತ್ತದೆ. ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಮತ್ತು ಮಾಧ್ಯಮಗಳು ಯಾವುದೇ ಅಡೆತಡೆಯಿಲ್ಲದೆ ಮತ್ತು ಭಯವಿಲ್ಲದೆ ಕಾರ್ಯನಿರ್ವಹಿಸುವಂತಹ ಸಂದರ್ಭಗಳನ್ನು ಸೃಷ್ಟಿಸಲು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ಕೋರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

Tags: Editors Guild of IndiaEGIJammu and KashmirKashmir Timesಕಶ್ಮೀರ್ ಟೈಮ್ಸ್
Previous Post

ಆರ್ಥಿಕತೆಯೆಂದರೆ ರಿಂಗ್‌ಮಾಸ್ಟರ್‌ ಕೋಲಿಗೆ ಪ್ರತಿಕ್ರಿಯಿಸುವ ಸರ್ಕಸ್ ಸಿಂಹವಲ್ಲ – ಪಿ ಚಿದಂಬರಂ

Next Post

ಪ್ರವಾಹ: ಪ್ರಧಾನಿ ಬಳಿ 10,000 ಕೋಟಿ ವಿಶೇಷ ಅನುದಾನ ಕೋರಿದ ಯಡಿಯೂರಪ್ಪ

Related Posts

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?
ದೇಶ

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

by ಪ್ರತಿಧ್ವನಿ
July 5, 2025
0

ಪ್ರಶ್ನೆಯೊಂದಿಗೆ ಕನ್ನಡದ ಎಎಂಆರ್‌ ರಮೇಶ್ ರಾಜೀವ್‌ ಗಾಂಧಿ ಹತ್ಯೆ ಕುರಿತು ಚಿತ್ರ/ ವೆಬ್‌ ಸೀರೀಸ್‌ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಕನಸುತ್ತಿರುವ ಕನ್ನಡದ ಎಎಂಆರ್‌ ರಮೇಶ್‌ ಈಗ...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
Next Post
ಪ್ರವಾಹ: ಪ್ರಧಾನಿ ಬಳಿ 10

ಪ್ರವಾಹ: ಪ್ರಧಾನಿ ಬಳಿ 10,000 ಕೋಟಿ ವಿಶೇಷ ಅನುದಾನ ಕೋರಿದ ಯಡಿಯೂರಪ್ಪ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada