ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ಗೆ ಇನ್ನೊಂದೆ ದಿನ ಬಾಕಿ ಇದೆ. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ತವಕಲ್ಲಿದೆ. ಇತ್ತ ಟೂರ್ನಿಯ ಶ್ರೇಷ್ಠ ಆಟಗಾರ ಯಾರಾಗಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದು, ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್, ಫೈನಲ್‌ನಲ್ಲಿ ಏನೇ ಆದರೂ ಟೂರ್ನಿ ಶ್ರೇಷ್ಠ ಆಟಗಾರನ ಪ್ರಶಸ್ತಿ ಮೊಹಮ್ಮದ್ ಶಮಿ ಅವರಿಗೇ ಸಿಗಬೇಕು ಎಂದು ಹೇಳಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ನನ್ನ ಪಾಲಿಗೆ ಮೊಹಮ್ಮದ್ ಶಮಿ ಟೂರ್ನಿ ಶ್ರೇಷ್ಠ ಆಟಗಾರ. ಫೈನಲ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲಿ, ಗೆಲ್ಲದೇ ಇರಲಿ ಮಹಮ್ಮದ್ ಶಮಿಗೆ ಟೂರ್ನಿ ಶ್ರೇಷ್ಠ ಆಟಗಾರನ ಗೌರವ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಗೌತಮ್ ಗಂಭೀರ್ ಹೇಳಿರುವಂತೆ ನಮಗೆ ಟೂರ್ನಿಗಳನ್ನು ಗೆದ್ದುಕೊಡುವುದು ಬೌಲರ್‌ಗಳೇ ಹೊರತು ಬ್ಯಾಟರ್‌ಗಳಲ್ಲ. ಟೂರ್ನಿಯ ಆರಂಭದಿಂದ ಆಡುವ ಅವಕಾಶ ಶಮಿಗೆ ಸಿಗಲಿಲ್ಲ. ಗಾಯಾಳು ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಬಳಿಕ ಅವರು ಮಾಡಿರುವ ಸಾಧನೆ ನೋಡಿ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಹೇಳಿದ್ದಾರೆ.

ನವೆಂಬರ್ 19ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ರೋಹಿತ್ ಪಡೆ ವಿಶ್ವಕಪ್ ಗೆಲ್ಲಲು ತವಕದಲ್ಲಿದೆ.