ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭ ಕಂಠದ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಗರ್ಭಕಂಠ ಕ್ಯಾನ್ಸರ್ನಿಂದ ಭಾರತದಲ್ಲಿ ಪ್ರತಿ 7 ನಿಮಿಷಕ್ಕೆ ಓರ್ವ ಮಹಿಳೆ ಸಾವನ್ನಪ್ಪುತ್ತಿದ್ದಾರೆ ಎನ್ನುವ ಅಂಕಿ ಅಂಶ ಬೆಚ್ಚಿ ಬೀಳಿಸುವಂತಿದೆ. ಪ್ರತೀ ವರ್ಷ ಸರಾಸರಿ 1.30 ಲಕ್ಷ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪತ್ತೆ ಆಗುತ್ತಿದೆ. ಗರ್ಭಕಂಠ ಕ್ಯಾನ್ಸರ್ಗೆ ಭಾರತದಲ್ಲೇ ಪ್ರತೀ ವರ್ಷ 75 ಸಾವಿರ ಸ್ತ್ರೀಯರು ಬಲಿಯಾಗುತ್ತಿದ್ದಾರೆ.
ವಿಶ್ವದಲ್ಲಿ ಗರ್ಭಕಂಠದಿಂದ ಹೆಚ್ಚು ಮಹಿಳೆಯರ ಸಾವು ಸಂಭವಿಸುತ್ತಿದೆ. ಗರ್ಭಕಂಠದ ಕ್ಯಾನ್ಸರ್ ಗೊತ್ತಾಗುವುದು 100 ಜನರಲ್ಲಿ ಒಬ್ಬರಿಗೆ ಮಾತ್ರ ಎನ್ನುವುದು ಮತ್ತಷ್ಟು ಆತಂಕಕಾರಿಯಾಗಿದೆ. ಹೊಟ್ಟೆನೋವು, ಋತುಚಕ್ರ ಸಮಸ್ಯೆ ಅಂತ ಸ್ತ್ರೀಯರು ನಿರ್ಲಕ್ಷ್ಯ ಮಾಡುತ್ತಾರೆ. ಅಂತಿಮ ಹಂತಕ್ಕೆ ಬಂದಾಗ ಮಾತ್ರ ಅದು ಗರ್ಭಕಂಠದ ಕ್ಯಾನ್ಸರ್ ಎನ್ನುವುದು ತಿಳಿಯುತ್ತದೆ ಎನ್ನುತ್ತಾರೆ ವೈದ್ಯರು.
![](https://pratidhvani.com/wp-content/uploads/2024/02/Screenshot-2024-02-03-191828.png)
ಏನಿದು ಗರ್ಭ ಕಂಠದ ಕ್ಯಾನ್ಸರ್..?
ಮೂತ್ರ ವಿಸರ್ಜನೆ ಜಾಗದಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತೋಳುಗಳು ಹಾಗು ತೊಡೆ ಸಂದು ಭಾಗದಲ್ಲಿ ಗುಳ್ಳೆಗಳ ಸೃಷ್ಟಿ ಆಗುತ್ತವೆ. ಉರಿ ಜೊತೆಗೆ ಕೀವು ತುಂಬಿಕೊಳ್ಳುತ್ತದೆ. ಗಂಟುಗಳು ಕಟ್ಟುತ್ತವೆ. ಹೆಣ್ತನ ಬಂದ 2-3 ವರ್ಷಗಳಲ್ಲಿ ಸೋಂಕು ಹೆಚ್ಚಾಗುತ್ತದೆ. 9 ರಿಂದ 14 ವರ್ಷದವರಿಗೆ ಈ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ. ಋತುಚಕ್ರ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಿದ್ರೆ ಕ್ಯಾನ್ಸರ್ ಪರಿಣಾಮ ಹೆಚ್ಚಾಗುತ್ತದೆ. ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದುಕೊಳ್ಳುವುದು ಬಹುಮುಖ್ಯ.
![](https://pratidhvani.com/wp-content/uploads/2022/09/students.jpg)
ತರುಣಿಯರೇ ನಿಗಿದು ಎಚ್ಚರಿಕೆ ಗಂಟೆ..!
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್ನಲ್ಲಿ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಪ್ರಸ್ತಾಪ ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿರುವ 9 ರಿಂದ 14 ವರ್ಷ ವಯಸ್ಸಿನ ಬಾಲಕಿಯರಿಗೆ ಲಸಿಕೆ ನೀಡುವ ಭರವಸೆ ನೀಡಿದ್ದರು. ಅದರಲ್ಲೂ ಕಡಿಮೆ ದರದಲ್ಲಿ ಗರ್ಭ ಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಬಜೆಟ್ನಲ್ಲಿ ಘೋಷಣೆ ಮಾಡಿದ ಒಂದು ದಿನದ ನಂತರ ಈ ಸುದ್ಧಿ ದೊಡ್ಡ ಮಟ್ಟದಲ್ಲಿ ಆಗಿದೆ. ಅದರಲ್ಲೂ ಖ್ಯಾತ ಮಾಡೆಲ್ 32 ವರ್ಷದ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ಗೆ ಬಲಿಯಾಗುವ ಮೂಲಕ ಎನ್ನುವುದು ದುರಂತ.
#PoonamPandey #cervicalcancer #Health