ಅತಿಥೇಯ Sri Lanka ಹಾಗೂ ಪ್ರವಾಸಿ Afghanistan ತಂಡಗಳ ನಡುವಿನ ಏಕೈಕ Test Cricket ಪಂದ್ಯದ ವೇಳೆ ಅನಿರೀಕ್ಷಿತ ಅತಿಥಿಯೊಬ್ಬರು ಮೈದಾನಕ್ಕೆ ಎಂಟ್ರಿಕೊಟ್ಟಿದ್ದರು.
![](https://pratidhvani.com/wp-content/uploads/2024/02/ಉಡ.png)
ಉಭಯ ತಂಡಗಳ ನಡುವೆ ಕೊಲಂಬೊದಲ್ಲಿರುವ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದ ವೇಳೆ ಮೈದಾನಕ್ಕೆ ಅಪರೂಪವೆಂಬಂತೆ Monitor Lizard(ಉಡ) ಮೈದಾನವನ್ನು ಪ್ರವೇಶಿಸಿತು. ದಿನದಾಟದ 47ನೇ ಓವರ್ನ ವೇಳೆ ಮೈದಾನದ ಬೌಂಡರಿ ಗೆರೆಯನ್ನು ದಾಟಿ ಮೈದಾನಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದು, ಇದನ್ನು ಗಮನಿಸಿದ ಅಂಪೈರ್ ಕೆಲಸಮಯದವರೆಗೆ ಆಟವನ್ನು ಸ್ಥಗಿತಗೊಳಿಸಿದ್ದರು.
ಇನ್ನೂ ಮೈದಾನಕ್ಕೆ ಉಡ ಪ್ರವೇಶಿಸಿದ್ದು ಆಟಗಾರರು ಮತ್ತು ಅಂಪೈರ್ಗಳಲ್ಲಿ ಆತಂಕ ಉಂಟು ಮಾಡಿತು. 47ನೇ ಓವರ್ನಲ್ಲಿ ನಿಜತ್ ಮಸೂದ್ ಅವರು ಅನುಭವಿ ಏಂಜೆಲೊ ಮ್ಯಾಥ್ಯೂಸ್ಗೆ ಬೌಲಿಂಗ್ ಮಾಡುತ್ತಿದ್ದಾಗ, ಬೌಂಡರಿ ಗೆರೆಯ ಸಮೀಪದಲ್ಲಿ ಕಪ್ಪು ಬಣ್ಣದ ಉಡ ಕಾಣಿಸಿಕೊಂಡಿತು.
#SriLanka #Afghanistan #MonitorLizard #TestCricket