ಮಂಡ್ಯ (Mandya): ಈಗಲೂ ಸ್ಟಾರ್ ಮುಂದೇಯೂ ಸ್ಟಾರ್ ಬರುತ್ತೆ. ದುಡ್ಡು ಇದ್ದವನು ಗೆಲ್ಲಲು ಆಗಲ್ಲ, ಜನರ ಸೇವೆ ಮಾಡಿದವನು ಮಾತ್ರ ಗೆಲ್ತಾನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) (Star Chandru) ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ (Loksabha election) ಕಾಂಗ್ರೆಸ್ ಟಿಕೆಟ್ ಸಿಕ್ಕ ಬಳಿಕ ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡಿದ್ದವರು ಗೆಲ್ಲಲು ಆಗಲ್ಲ ಅದೇಲ್ಲ ಸುಳ್ಳು. ಜನರ ಸೇವೆ ಮಾಡಿದವನು ಮಾತ್ರ ಗೆಲ್ತಾನೆ. ನಾಳೆಯಿಂದ ಪ್ರಚಾರ ಶುರು ಮಾಡ್ತೇನೆ ಎಂದು ತಿಳಿಸಿದರು.
AICC ಹಾಗೂ ನಾಯಕರು ಸೇರಿ ಒಮ್ಮತದಿಂದ ನನ್ನ ಆಯ್ಕೆ ಮಾಡಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನ ಉಳಿಸಿಕೊಂಡು ಹೋಗ್ತೇನೆ ಎಂದರು.
ಮಂಡ್ಯ ಜಿಲ್ಲೆಗೆ ಏನೇನು ಕೆಲಸ ಆಗಬೇಕು ಅನ್ನುವುದನ್ನ ಅರಿತು ಕೆಲಸ ಮಾಡ್ತೇನೆ. ಸಂಭಾವ್ಯ ಅಭ್ಯರ್ಥಿ ಅಂತ ಇತ್ತು ಇವಾಗ ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ನನ್ನ ಶ್ರಮ ಮೀರಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.
ಶಿವರಾತ್ರಿ (shivaratri) ಹಬ್ಬದ ದಿನ ಟಿಕೆಟ್ ಘೋಷಣೆಯಾಗಿದೆ. ದೇವರ ಹತ್ತಿರ ಕೂಡ ಪ್ರಾರ್ಥನೆ ಮಾಡಿದ್ದೆ. ಪಂಚಲಿಂಗೇಶ್ವರ ಆಶೀರ್ವಾದ ಮಾಡಿದ್ದಾನೆ. ಮುಂದಿನ ದಿನಗಳಲ್ಲಿ ಗೆಲುವಾಗಲಿ ಎಂದು ಹರಕೆ ಮಾಡಿಕೊಂಡಿದ್ದೇನೆ ಎಂದರು.
ನಾನು ಹೊಸಬ ಅಲ್ಲ, ಕಾಂಗ್ರೆಸ್ ನಲ್ಲಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ನಮ್ಮ ಅಣ್ಣ, ಅಳಿಯ, ಬೀಗರು ಕೂಡ ಎಂಎಲ್ ಎ, ಎಂಪಿ. ನನಗೂ ಆಶೀರ್ವಾದ ಮಾಡಲಿ ಎಂದು ಮಂಡ್ಯ ಜನತೆಗೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ನಮ್ಮ ಜನರು ಕೈ ಹಿಡಿಯುತ್ತಾರೆ ಅನ್ನೋ ವಿಶ್ವಾಸ ಇದೆ. ಸರ್ಕಾರದ ಗ್ಯಾರಂಟಿ, ಹಾಗೂ ನನ್ನದು ರೈತರ ಕುಟುಂಬ ಅದಕ್ಕೆ ಜನರು ಕೈ ಹಿಡಿದು ಆಶೀರ್ವಾದ ಮಾಡ್ತಾರೆ. ಕಾಂಗ್ರೆಸ್ ನವರು ಕೂಡ ಒಗ್ಗೂಡಿ ಕೆಲಸ ಮಾಡ್ತಾರೆ. ಎಲ್ಲರನ್ನೂ ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ.
#karnataka #mandya #loksabhaelection #starchandru #congress