ಜನರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಕ್ಯಾಬ್ ಡ್ರೈವರ್ನ ಅಸಾಮಾನ್ಯ ಕಥೆ ಹೇಳಲು ಯಲ್ಲೋ ಬೋರ್ಡ್ ಚಿತ್ರ ನಾಳೆ ಬೆಳ್ಳಿತೆರೆಗೆ ಬರುತ್ತಿದೆ.
ಹೌದು, ಯಲ್ಲೋ ಬೋರ್ಡ್ (Yellow Board) ಹೆಸರಿನಲ್ಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಚಿತ್ರ ತಂಡ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಇಲ್ಲವೇ ಎಂಬ ತೀರ್ಮಾನವನ್ನು ನಾಳೆ ಪ್ರೇಕ್ಷಕರು ನಿರ್ದರಿಸಲಿದ್ದಾರೆ. ಕ್ಯಾಬ್ ಚಾಲಕನ ಸುತ್ತ ಸುತ್ತುವ ಈ ಕಥೆ ಇದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್ ಗಳ ಜೀವನ ಈ ಚಿತ್ರದಲ್ಲಿದೆ.

ನೈಜ ಕಥೆ ಆಧರಿಸಿದ ‘ಯೆಲ್ಲೋ ಬೋರ್ಡ್’ ಚಿತ್ರಕ್ಕೆ ನಟ ಪ್ರದೀಪ್ (Pradeep) ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅದ್ವಿಕ್ ಅವರು ಸಂಗೀತ ನಿರ್ದೇಶನವಿರುವ ಈ ಸಿನಿಮಾಗೆ ಪ್ರವೀಣ್ ಛಾಯಾಗ್ರಹಣವಿದೆ. ವಿಂಟೇಜ್ ಫಿಲಂಸ್ (Vintage Films) ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಅಂದಹಾಗೆ ಯೆಲ್ಲೋ ಬೋರ್ಡ್ ಸಿನಿಮಾ ನಾಳೆ (ಮಾ.4) ಬಿಡುಗಡೆಯಾಗುತ್ತಿದ್ದು, ಯೆಲ್ಲೋ ಬೋರ್ಡ್ ಟೈಟಲ್ ಪ್ರತಿಯೊಬ್ಬ ನಾಗರಿಕರಿಗೂ ಸಂಬಂಧಿಸಿದ್ದಾಗಿದೆ, ಹೋರಾಟಕ್ಕೆ ಸಿದ್ದವಾಗಿರುವುದಾಗಿ ಪ್ರದೀಪ್ ತಿಳಿಸಿದ್ದಾರೆ.