ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ( Ambarish ) ಅವರ ಮೊಮ್ಮಗನ ನಾಮಕರಣ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಇದಕ್ಕೆ ಈಗಾಗಲೇ ಪೂರ್ವ ತಯಾರಿ ನಡೆದಿದೆ. ಈ ಸಂಬಂಧ ರೆಬಲ್ ಸ್ಟಾರ್ ಅಂಬರೀಶ್ ಅವರ ಆಸೆಯಂತೆ ರಾಕಿ ಭಾಯ್ ಯಶ್ ( Rocking Star Yash ) ಅವರು ಕಲಘಟಗಿಯ ತೊಟ್ಟಿಲನ್ನು ಅವಿಸ್ಮರಣೀಯ ಉಡುಗೊರೆಯಾಗಿ ನೀಡಿದ್ದಾರೆ.

ಯಶ್ ಅವರ ಮಗಳು ಆಯ್ರಾಗೆ ನಾಮಕರಣದ ಸಮಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ( Ambareesh ) ಅವರು ಕಲಘಟಗಿಯ ವಿಶೇಷ ತೊಟ್ಟಿಲು ಅನ್ನು ಉಡುಗೊರೆಯಾಗಿ ( Gift ) ನೀಡಿದ್ದರು. ಸಾಗುವಾನಿ ಮರದಿಂದ ತಯಾರಿಸಲಾಗಿದ್ದು ಇದಕ್ಕೆ ಹಚ್ಚಿರುವ ರಾಸಾಯನಿಕಗಳ ರಹಿತ ಬಣ್ಣ ಎಷ್ಟೇ ವರ್ಷಗಳಾದರೂ ಮಾಸುವುದಿಲ್ಲ. ಹೀಗಾಗಿ ತೊಟ್ಟಿಲಿಗೆ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ರೂಪಾಯಿ ನೀಡಲಾಗಿದೆ ಎಂದು ಗೊತ್ತಾಗಿದೆ.

ಅಭಿಷೇಕ್ ಅಂಬರೀಶ್ಗೆ( Abhishek Ambarish ) ಮಗುವಾದಾಗ ಇದೇ ವಿಶೇಷವಾದ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿ ತೂಗಿಸಬೇಕು ಎನ್ನವುದು ರೆಬಲ್ ಸ್ಟಾರ್ ಕನಸು ಆಗಿತ್ತು. ಅದರಂತೆ ಅಂದು ಅವರು ಹೇಳಿದ್ದ ಮಾತನ್ನು ನೆನಪಿಟ್ಟುಕೊಂಡು ರಾಕಿಂಗ್ ಸ್ಟಾರ್ ಯಶ್ ( Yash ) ಅವರು, ಅಭಿಷೇಕ್ ಅಂಬರೀಶ್ ಅವರ ಮಗನ ನಾಮಕರಣಕ್ಕೆ ತೊಟ್ಟಿಲನ್ನು ಅವಿಸ್ಮರಣೀಯ ಉಡುಗೊರೆಯನ್ನಾಗಿ ನೀಡಿದ್ದಾರೆ.

ಅಂಬರೀಶ್ ಅವರು ಈ ವಿಶೇಷ ತೊಟ್ಟಿಲನ್ನು ಕಲಘಟಗಿಯಲ್ಲಿ( Kalagattagi )ತಯಾರು ಮಾಡಿಸಿದ್ದರು. ಬೆಳಗಾವಿಯ ನಾರಾಯಣ ಕಲಾಲ್ ಎನ್ನುವರಿಗೆ ಕರೆ ಮಾಡಿ, ನನ್ನ ಮೊಮ್ಮಗಳು, ರಾಧಿಕಾ ಪಂಡಿತ್ ಅವರ ಮಗಳಿಗೆ ತೊಟ್ಟಿಲು ಕೊಡಬೇಕು. ಒಳ್ಳೆಯ, ಚೆಂದದ ತೊಟ್ಟಿಲು ಮಾಡಿ ಕೊಡಲು ಅಂದು ಹೇಳಿದ್ದರಂತೆ. ಹೀಗಾಗಿ ನಾರಾಯಣ ಕಲಾಲ್ ಅವರು ಕಲಘಟಗಿಯ ಶ್ರೀಧರ್ ಸಾಹುಕಾರ್ ಎಂಬುವರಿಗೆ ತೊಟ್ಟಿಲು ಮಾಡಲು ಹೇಳಿದ್ದರು. ಅಂಬರೀಶ್ ಅವರು ಹೇಳಿದ್ದರೆಂದು ಶ್ರೀಧರ್ ಸಾಹುಕಾರ್ ಕುಟುಂಬದವರು ಬಹಳ ವಿಶೇಷವಾಗಿ ತೊಟ್ಟಿಲುನ್ನು ತಯಾರಿಸಿದ್ದರು.