ಒಮಿಕ್ರಾನ್ ಗಿಂತ ೧೦ ಪಟ್ಟು ವೇಗವಾಗಿ ಹರಡುವ ಅಪಾಯಕಾರಿ ಎಕ್ಸ್ ವಿ ಕೊರೊನಾ ರೂಪಾಂತರಿ ವೈರಸ್ ಗುಜರಾತ್ ನಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಮುಂಬೈನಲ್ಲಿ ಎಕ್ಸ್ ವಿ ವೈರಸ್ ಪತ್ತೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆ ನೀಡಿದ್ದು, ಕೇಂದ್ರ ಸರಕಾರ ಈ ಬಗ್ಗೆ ದೃಢಪಡಿಸಬೇಕಿದೆ.
ಗುಜರಾತ್ ಸರಕಾರ ಎಕ್ಸ್ ವಿ ಸೋಂಕು ಪತ್ತೆಯಾಗಿದೆ ಎಂದು ಹೇಳಿಕೆ ನೀಡಿದ್ದೂ ಅಲ್ಲದೇ ಸೋಂಕಿತ ವ್ಯಕ್ತಿಯ ಮಾದರಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ.