ಸ್ವಿಡ್ಜರ್ಲ್ಯಾಂಡ್ : ಕೊರೊನಾಗಿಂತಲೂ ಭಯಾನಕ ಮಾರಣಾಂತಿಕ ವೈರಸ್ಗೆ ಸಿದ್ಧರಾಗಿ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ. 20 ಮಿಲಿಯನ್ಗೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ಇನ್ಮುಂದೆ ಆರೋಗ್ಯ ತುರ್ತು ಸ್ಥಿತಿಯಾಗಿ ಉಳಿದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಘೋಷಣೆ ಮಾಡಿತ್ತು.

ಮುಂದಿನ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕುರಿತು ಮಾತುಕತೆ ನಡೆಸುವ ಸಮಯ ಬಂದಿದೆ ಎಂದು ಡಾ. ಟೆಡ್ರೊಸ್ ಜಿನೀವಾದಲ್ಲಿ ನಡೆದ ವಾರ್ಷಿಕ ಆರೋಗ್ಯ ಸಭೆಯಲ್ಲಿ ತಿಳಿಸಿದ್ದಾರೆ.