ಬೆಂಗಳೂರು ಸೇರಿಂದತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅನಾಹುತಗಳಾಗಿವೆ. ಈ ನಡುವೆ ಪೂರ್ವ ಮುಂಗಾರು ಮೇ ಅಂತ್ಯದವರೆಗೂ ಇರಲಿದ್ದು, ಸಣ್ಣ ಮಳೆ ಜತೆಗೆ ಗುಡುಗು ಸಹಿತ ಮಳೆಯೂ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಬೆಂಗಳೂರು ಮಹಾನಗರದಲ್ಲಿಯೇ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಈಗಾಗಲೇ ಟೆಕ್ಕಿ ಯುವತಿ ಸೇರಿ ಇಬ್ಬರು ಮಳೆಗೆ ಜೀವ ಕಳೆದುಕೊಂಡಿದ್ದಾರೆ. ಬಹಳಷ್ಟು ಕಡೆ ಮರಗಳು ಉರುಳಿ ಬಿದ್ದು, ಸಂಚಾರ ಹಾಗೂ ವಿದ್ಯುತ್ ಸಂಚಾರಕ್ಕೂ ವ್ಯತ್ಯಯವಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ ಹಗಲು ವೇಳೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ನಂತರ ಮಳೆಯಾಗುತ್ತಿದೆ. ಇದು ಮೇ ಅಂತ್ಯದವರೆಗೂ ಇರಲಿದೆ ಎಂದು ತಿಳಿಸಲಾಗಿದೆ. ಗರಿಷ್ಠ ಉಷ್ಣಾಂಶ ೩೩ ೨ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದರೆ ಕನಿಷ್ಠ ತಾಪಮಾನ ೨೧ರಿಂದ ೨೨ ಡಿಗ್ರಿ ಸೆಲ್ಸಿಯಸ್ ನಷ್ಟು ಇರಬಹುದು ಎಂದು ಅಂದಾಜು ಮಾಡಲಾಗಿದೆ. ಬೆಂಗಳೂರು ನಗರದ ಜತೆಗೆ ಬೆಂಗಳೂರು ಗ್ರಾಮಾಂತರ, ವಿಜಯಪುರ, ಯಾದಗಿರಿ. ದಾವಣಗೆರೆ, ಚಿಕ್ಕಬಳ್ಳಾಪುರ, ಚಿತ್ರದುಗ ಜಿಲ್ಲೆಗಳಲ್ಲಿ ಮೇ ಅಂತ್ಯದವರೆಗೂ ಮಳೆಯಾಗಲಿದೆ.



ಕರ್ನಾಟಕದಲ್ಲೂ ಪೂರ್ವ ಮುಂಗಾರಿನ ಅಬ್ಬರಕ್ಕೆ ಈವರೆಗೂ ಐವತ್ಮೂರು ಜನ ಮೃತಪಟ್ಟಿದ್ದು. ಭಾರೀ ಹಾನಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಸ್ಥಳೀಯ ಆಡಳಿತಗಳು ಸನ್ನದ್ದವಾಗಿರುವಂತೆಯೂ ಸೂಚಿಸಿದ್ದು, ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ವಹಿಸಿವೆ,