ದೆಹಲಿ : ಉಬರ್ ಆಟೋರಿಕ್ಷಾ ಚಾಲಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ದೆಹಲಿಯ ಮಹಿಳಾ ಪತ್ರಕರ್ತೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬುಧವಾರ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ಸುದ್ದಿ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯು ಉಬರ್ ಚಾಲಕ ನನ್ನ ಎದೆಯನ್ನೇ ದಿಟ್ಟಿಸುತ್ತಿದ್ದ ಆರೋಪಿಸಿದ್ದಾರೆ. ಪತ್ರಕರ್ತೆ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಉಬರ್ ಆಟೋದ ಮೂಲಕ ಮಾಳವೀಯ ನಗರದಲ್ಲಿರುವ ಸ್ನೇಹಿತನ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಉಬರ್ ಆ್ಯಪ್ನಲ್ಲಿ ಆಟೋ ಬುಕ್ ಮಾಡಿದ್ದ ಪತ್ರಕರ್ತೆ ಚಾಲಕ ವಿನೋದ್ ಕುಮಾರ್ ಎಂಬಾತನ ಆಟೋವನ್ನು ಏರಿದ್ದರು. ಚಾಲಕ ವಿನೋದ್ ಕುಮಾರ್ ಆಟೋ ರಿಕ್ಷಾದ ಸೈಡ್ ಮಿರರ್ಗಳ ಮೂಲಕ ನನ್ನ ಸ್ತನಗಳತ್ತ ಇಣುಕಿ ನೋಡುತ್ತಿದ್ದ .ಇದರಿಂದ ನನಗೆ ಇರಿಸು ಮುರಿಸು ಉಂಟಾಯ್ತು ಅಂತಾ ಪತ್ರಕರ್ತೆ ಟ್ವಿಟರ್ನಲ್ಲಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಉಬರ್ನ ಸುರಕ್ಷತಾ ವೈಶಿಷ್ಟ್ಯವನ್ನು ಬಳಕೆ ಮಾಡಲು ನಾನು ಯತ್ನಿಸಿದರೂ ಸಹ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪತ್ರಕರ್ತೆ ವಿವರಿಸಿದ್ದಾರೆ.
@Uber I took an auto from my home to a friend's place. After a while, I noticed that the driver was looking at me through the side mirrors of the auto, precisely at my breasts. I shifted a bit towards right and wasn't visible in the left side mirror.
— Arfa Javaid (@javaidarfa_) March 1, 2023
ನಾನು ನನ್ನ ಮನೆಯಿಂದ ಆಟೋದ ಮೂಲಕ ಸ್ನೇಹಿತರ ನಿವಾಸಕ್ಕೆ ಆಗಮಿಸುತ್ತಿದ್ದೆ. ಆಟೋ ಏರಿದ ಸ್ವಲ್ಪ ಸಮಯದ ಬಳಿಕ ಚಾಲಕನು ಆಟೋದ ಸೈಡ್ ಮಿರರ್ಗಳ ಮೂಲಕ ನನ್ನ ಎದೆಗಳನ್ನು ನೋಡಲು ಯತ್ನಿಸುತ್ತಿದ್ದ. ಇದನ್ನು ನಾನು ಗಮನಿಸಿದೆ. ನಾನು ಬಲ ಭಾಗಕ್ಕೆ ಸರಿದು ಕುಳಿತುಕೊಂಡೆ. ಹೀಗಾಗಿ ಆಟೋ ಚಾಲಕನಿಗೆ ಎಡ ಭಾಗದಲ್ಲಿದ್ದ ಕನ್ನಡಿಯಿಂದ ನನ್ನನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಪತ್ರಕರ್ತೆ ಹೇಳಿದ್ದಾರೆ.
दिल्ली में एक महिला पत्रकार से Uber Auto में हुई छेड़छाड़ की दुर्भाग्यपूर्ण घटना पर Uber India और दिल्ली पुलिस को नोटिस जारी किया है। महिलाओं की सुरक्षा के लिए Uber द्वारा क्या कदम उठाए जाते हैं उसकी भी जानकारी तलब की है। pic.twitter.com/LXOF8KJHZG
— Swati Maliwal (@SwatiJaiHind) March 2, 2023
ಎಡಭಾಗದ ಕನ್ನಡಿಯಿಂದ ನನ್ನನ್ನು ನೋಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ ಬಲಭಾಗದ ಕನ್ನಡಿಯಿಂದ ನನ್ನನ್ನು ನೋಡಲು ಆರಂಭಿಸಿದೆ. ನಾನು ಕೊಂಚ ಎಡಭಾಗಕ್ಕೆ ಸರಿದೆ. ಆತನಿಗೆ ಅದಾದ ಬಳಿಕ ಯಾವುದೇ ಕನ್ನಡಿಯಲ್ಲಿ ನಾನು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೂ ಆತ ನನ್ನನ್ನು ಮತ್ತೆ ಮತ್ತೆ ನೋಡಲು ಯತ್ನಿಸುತ್ತಲೇ ಇದ್ದ. ನಾನು ಊಬರ್ನಲ್ಲಿ ಸುರಕ್ಷತಾ ವೈಶಿಷ್ಟ್ಯಗಳನ್ನು ಬಳಸಿ ಆಟೋ ಚಾಲಕನ ಮೇಲೆ ದೂರು ನೀಡಲು ಎಷ್ಟೇ ಯತ್ನಿಸಿದರೂ ಅದರಿಂದ ಪ್ರಯೋಜನವಾಗಲಿಲ್ಲವೆಂದು ಸರಣಿ ಟ್ವೀಟ್ಗಳ ಮೂಲಕ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.