ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಲಾಗುವುದು ಎಂದರು.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.ಮೈಸೂರಿನ ಅಂಬಾವಿಲಾಸ ಆವರಣದಲ್ಲಿ 12ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕೃತಗೊಂಡ ಕಾಶಿ ವಿಶ್ವನಾಥ ದೇವಾಲಯ, ಸ್ವದೇಶೀ ನಿರ್ಮಿತ ಒಂದೇ ಮಾತರಂ ರೈಲು ಗಾಡಿ, ಅಮರ್ ಜವಾನ್ ಸ್ಮಾರಕ, ಹೂವಿನಿಂದ ಅಲಂಕೃತಗೊಂಡ ಆನೆ ಸೇರಿದಂತೆ ಕಲಾಕೃತಿಗಳ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಉದ್ಘಾಟಿಸಿದರು.
ಅರಮನೆ ಮುಂಭಾಗ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರ ಜಾನಪದ ಗೀತೆಗೆ ಸಚಿವ ಸೋಮಶೇಖರ್ ಭರ್ಜರಿ ಡ್ಯಾನ್ಸ್ ಮಾಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.
ನಂತರ ಮಾತನಾಡಿದ ಸಚಿವರು, ಚಳಿಗಾಲದ ಉತ್ಸವದಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಾಗಿ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ಕೊರೋನಾ ಬಗ್ಗೆ ಯಾವುದೇ ಆತಂಕ ಪಡುವ ಪ್ರಮೇಯವಿಲ್ಲ, ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಲಾಗುವುದು ಎಂದರು.

ರಾಜ್ಯದ ರೈತರಿಗೆ ನೇರವಾಗಲೆಂದು ಸಹಕಾರ ಇಲಾಖೆಯ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ 24ಸಾವಿರ ಕೋಟಿ ನೂತನ ಸಾಲ ನೀಡಲಾಗುವುದು, ಈ ಯೋಜನೆ ಮೂಲಕ 33ಲಕ್ಷ ರೈತರು ಸಾಲ ನೀಡಲಾಗುವುದು, ಈಗಾಗಲೇ ರಾಜ್ಯದ ಡಿಸಿಸಿ ಬ್ಯಾಂಕ್ ಗಳ ಮೂಲಕ ನೂತನ ಸಾಲ ನೀಡಲಾಗುತ್ತಿದೆ, ಈ ಹಿಂದಿನ ಸಾಲ ಪಡೆದ ರೈತರು ಸಹ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಾಸಕರಾದ ಎಸ್ ಎ ರಾಮದಾಸ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಭಾಗಿಯಾಗಿದ್ದರು.
ಮೈಸೂರು ಮಾಗಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅರಮನೆ ಮುಂಭಾಗ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರ ಜಾನಪದ ಗೀತೆಗೆ ಸಚಿವ ಸೋಮಶೇಖರ್ ಭರ್ಜರಿ ಡ್ಯಾನ್ಸ್ ಮಾಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

ಸಾಲು ರಜೆ ಎಫೆಕ್ಟ್ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಕ್ರಿಸ್ ಮಸ್ ಹಾಗೂ ನೂತನ ವರ್ಷಾಚರಣೆಗೆ ದಿನಗಣನೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಪ್ರಮುಖವಾಗಿ ಅರಮನೆ , ಚಾಮುಂಡಿಬೆಟ್ಟ , ಮೃಗಾಲಯಕ್ಕೆ ಹೆಚ್ಚಿನ ಜನರು ಭೇಟಿ ನೀಡ್ತಿದ್ದಾರೆ. ಆಗಮಿಸಿರುವ ಪ್ರವಾಸಿಗರಿಗೆ ಫ್ಲವರ್ ಶೋ ಮತ್ತಷ್ಟು ಮುದ ನೀಡಲಿದೆ. ಕಳೆದೆರಡು ವರ್ಷಗಳ ಕಾಲ ಕೊರೊನಾ ಹಿನ್ನೆಲೆಯಲ್ಲಿ ನಲುಗಿದ್ದ ಪ್ರವಾಸೋದ್ಯಮ ಈಗ ಚೇತರಿಸಿಕೊಳ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಮೃಗಾಲಯ ವಾರದ ರಜೆಯನ್ನು ರದ್ದು ಮಾಡಿದೆ