ನಿನ್ನೆಯಷ್ಟೇ ತಾಂತ್ರಿಕ ದೋಷದಿಂದಾಗಿ ಗೋ ಫರ್ಸ್ಟ್ ವಿಮಾನ ಸಂಸ್ಥೆಯ ಎರಡು ವಿಮಾನಗಳು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದು ಇನ್ನು 24 ಗಂಟೆಗಳು ಕಳೆಯುವಷ್ಟರಲ್ಲೇ ಮತ್ತೊಂದು ವಿಮಾನ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
ದೆಹಲಿ-ಗುವಾಹಟಿ ನಡುವೆ ಸಂಚರಿಸುವ A320neo ವಿಮಾನದ ವಿಂಡ್‌ಶೀಲ್ಡ್ ಗಾಳಿಯಲ್ಲಿ ಬಿರುಕು ಬಿಟ್ಟ ಕಾರಣ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಲ್ಲಿ ಗೋ ಫರ್ಸ್ಟ್ ವಿಮಾನದ ಮೂರನೇ ಪ್ರಕರಣ ಇದಾಗಿದೆ.
